ಸಿಬ್ಬಂದಿ ಪಿಪಿಇ ಕಿಟ್ ಹಾಕಲು ಹೋಗಿದ್ರು: ಮೃತ ದೇಹ ಬಿಟ್ಟ ಪ್ರಕರಣಕ್ಕೆ ಡಿಸಿ ಸ್ಪಷ್ಟನೆ

By Suvarna NewsFirst Published Jul 2, 2020, 2:57 PM IST
Highlights

ಉಸಿರಾಟದ ತೊಂದರೆ ಇರೋ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಅವರು ಉಳಿದಿಲ್ಲ. ಮಾರ್ಚರಿಗೆ ಮತ್ತೊಂದು ಮೃತದೇಹ ಬಂದಾಗ ಈ ವ್ಯಕ್ತಿಯ ಮೃತದೇಹ ಮಾರ್ಚರಿಯಿಂದ ಹೊರತರಲಾಗಿದೆ. ಕುಟುಂಬಸ್ಥರಿಗೆ ಹಸ್ತಾಂತರ ಮಾಡುವಾಗ, ವೈದ್ಯರು ಮತ್ತು ಸಿಬ್ಬಂದಿ ಪಿಪಿಇ ಕಿಟ್  ಹಾಕಿಕೊಳ್ಳುವ ಸಲುವಾಗಿ ಹೋಗಿ ಬರೋದ್ರೋಳಗಡೆ ಈ ವಿಡಿಯೋ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದ್ದಾರೆ.

ಬಳ್ಳಾರಿ(ಜು.02): ಉಸಿರಾಟದ ತೊಂದರೆ ಇರೋ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಅವರು ಉಳಿದಿಲ್ಲ. ಮಾರ್ಚರಿಗೆ ಮತ್ತೊಂದು ಮೃತದೇಹ ಬಂದಾಗ ಈ ವ್ಯಕ್ತಿಯ ಮೃತದೇಹ ಮಾರ್ಚರಿಯಿಂದ ಹೊರತರಲಾಗಿದೆ. ಕುಟುಂಬಸ್ಥರಿಗೆ ಹಸ್ತಾಂತರ ಮಾಡುವಾಗ, ವೈದ್ಯರು ಮತ್ತು ಸಿಬ್ಬಂದಿ ಪಿಪಿಇ ಕಿಟ್  ಹಾಕಿಕೊಳ್ಳುವ ಸಲುವಾಗಿ ಹೋಗಿ ಬರೋದ್ರೋಳಗಡೆ ಈ ವಿಡಿಯೋ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದ್ದಾರೆ.

ಹೊಸಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಮಳೆಯಲ್ಲಿ ಮೃತ ದೇಹ ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಬಳ್ಳಾರಿಯಲ್ಲಿಂದು ನಡೆದ ಮೂರು ಪ್ರಕರಣಕ್ಕೆ ಜಿಲ್ಲಾಧಿಕಾರಿ ನಕುಲ್ ಸ್ಪಷ್ಟನೆ ನೀಡಿದ್ದು, ಉದ್ದೇಶ ಪೂರ್ವಕವಾಗಿ ಇಲ್ಲಿ ವಿಡಿಯೋ ಮಾಡಿ ಹರಿ ಬಿಡಲಾಗಿದೆ. ಕೆಟ್ಟ ಸಂದೇಶ ಹರಿಬಿಡಲು ಈ ರೀತಿ ಪ್ರಯತ್ನ ಆಗಿದೆ ಎಂದಿದ್ದಾರೆ.

ಸೋಂಕಿತರ ಶವ ಗುಂಡಿಗೆಸೆದರು: ಒಂದೇ ಗುಂಡಿಗೆ 8 ಶವ!

ಜಿಲ್ಲಾಡಳಿತ ವಿಡಿಯೋ ಚಿತ್ರಿಕರಣ ಮಾಡಿದವರ ಮೇಲೆ ಕೇಸ್ ಹಾಕಲು ಮುಂದಾಗಿದೆ. ಉದ್ದೇಶ ಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡಲಾಗಿದೆ. ಉಸಿರಾಟದ ತೊಂದರೆ ಇರೋ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಅವರು ಉಳಿದಿಲ್ಲ. ಮಾರ್ಚರಿಗೆ ಮತ್ತೊಂದು ಮೃತದೇಹ ಬಂದಾಗ ಈ ವ್ಯಕ್ತಿಯ ಮೃತದೇಹ ಮಾರ್ಚರಿಯಿಂದ ಹೊರತರಲಾಗಿದೆ. ಕುಟುಂಬಸ್ಥರಿಗೆ ಹಸ್ತಾಂತರ ಮಾಡುವಾಗ, ವೈದ್ಯರು ಮತ್ತು ಸಿಬ್ಬಂದಿ ಪಿಪಿಇ ಕಿಟ್  ಹಾಕಿಕೊಳ್ಳುವ ಸಲುವಾಗಿ ಹೋಗಿ ಬರೋದ್ರೋಳಗಡೆ ಈ ವಿಡಿಯೋ ಮಾಡಲಾಗಿದೆ..

ಹೊಸಪೇಟೆಯ ಆಜಾದ್ ನಗರದಲ್ಲಿನ ಖಬರ್ ಸ್ತಾನ್ ನಲ್ಲಿ ಶವ ಸಂಸ್ಕಾರಕ್ಕೆ ವಿರೋಧ ವಿಚಾರವಾಗಿ ಮಾತನಾಡಿ, ಜನರು ಜಾಗೃತರಾಗಬೇಕಾಗಿದೆ. ಸೈಕಲ್ ರಿಕ್ಷಾ ಹಾಕಿಕೊಂಡು ಹೋಗಿದ್ದು ಗೊತ್ತಿಲ್ಲ. ಮೂರನೇ ಪ್ರಕರಣದಲ್ಲಿ ಮಗುವನ್ನು ಪಾಸಿಟಿವ್ ಇರೋ ವ್ಯಕ್ತಿ ಜತೆ ಕರ್ಕೊಂಡು ಹೋಗಲಾಗಿದೆ.

ಮಕ್ಕಳ ಪಿಪಿಇ ಕಿಟ್ ನಮಗೆ ಇನ್ನೂ ಬಂದಿಲ್ಲ.ಮಕ್ಕಳ ಪಾಲನೆ ಪೊಷಣೆ ವಿಚಾರವಾಗಿ ಕೆಲ ಪೊಷಕರು ಜತೆಗೆ ಕರೆದುಕೊಂಡಿದ್ದಾರೆ. ಆಗ ನಾವೇನು ಮಾಡೋಕೆ ಆಗುವುದಿಲ್ಲ ಎಂದಿ ಬಳ್ಳಾರಿ ಡಿಸಿ ಎಸ್. ಎಸ್. ನಕುಲ್ ಹೇಳಿದ್ದಾರೆ.

click me!