ಕೊರೋನಾ ಶಂಕಿತ ಗರ್ಭಿಣಿ ಆಸ್ಪ​ತ್ರೆ​ಗೆ ದಾಖಲು

Kannadaprabha News   | Asianet News
Published : Mar 17, 2020, 02:31 PM IST
ಕೊರೋನಾ ಶಂಕಿತ ಗರ್ಭಿಣಿ ಆಸ್ಪ​ತ್ರೆ​ಗೆ ದಾಖಲು

ಸಾರಾಂಶ

ಕೊರೋನಾ ಶಂಕಿತ ಗರ್ಭಿಣಿಯರೋರ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದುಬೈಯಿಂದ ಮರಳಿದ್ದ ಮಹಿಳೆಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಉಡು​ಪಿ [ಮಾ.17]: ದುಬೈನಿಂದ ಆಗಮಿಸಿದ್ದ ಮಹಿಳೆಯೊಬ್ಬರು ಕೆಮ್ಮಿನ ಸಮಸ್ಯೆಯಿಂದಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ   ದಾಖಲಾಗಿದ್ದಾರೆ. 

ಮಾ.13ರಂದು ದುಬೈಯಿಂದ ಊರಿಗೆ ಮರಳಿದ್ದ 26 ವರ್ಷದ ಈ ಮಹಿಳೆಗೆ ಕೆಮ್ಮು ಕಾಣಿಸಿಕೊಂಡ ಕಾರಣ ಅವರನ್ನು ಮುಂಜಾಗ್ರತಾ ಕ್ರಮವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪ್ರತ್ಯೇಕ ವಿಶೇಷ ವಾರ್ಡ್‌ಗೆ ದಾಖಲಿಸಲಾಗಿದೆ. 

ಕೊರೋನಾ ಆತಂಕ ನಿವಾರಣೆಗೆ ರಾಜ್ಯ ಸರ್ಕಾರದಿಂದ ಟೆಲಿಗ್ರಾಂ ಗ್ರೂಪ್‌!...

ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಶಿವಮೊಗ್ಗದ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗ​ಳ​ವಾ​ರ ಪರೀಕ್ಷೆಯ ವರದಿ ಬರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸೂಡ ತಿಳಿಸಿದ್ದಾರೆ. 

ಈ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ವರದಿಯಾಗಿರುವ ಶಂಕಿತ ಕೊರೋನಾ ಪ್ರಕರಣಗಳ ಸಂಖ್ಯೆ11ಕ್ಕೇರಿದೆ. ಅವರಲ್ಲಿ 10 ಮಂದಿಯ ಪ್ರಯೋಗಾಲಯದ ಪರೀಕ್ಷೆಯ ವರದಿ ನೆಗೆಟಿವ್‌ ಎಂದು ಬಂದಿದೆ.

PREV
click me!

Recommended Stories

ದೂರವಾದ ಪ್ರೇಮಿಗೆ ಪ್ರೇಯಸಿಯ ಭಯಾನಕ ಗಿಫ್ಟ್! ಜಿಮ್ ಟ್ರೈನರ್‌ಗೆ ಚಾಕು ಇರಿತ!
ಯೋಗೇಶ್ ಗೌಡ ಹತ್ಯೆ ಪ್ರಕರಣ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು, 2 ತಿಂಗಳಲ್ಲಿ ಟ್ರಯಲ್ ಮುಗಿಸುವಂತೆ ಸುಪ್ರೀಂ ಸೂಚನೆ