ಕೊರೋನಾ ಸೋಂಕು ಹೆಚ್ಚುತ್ತಿರುವ ನಡುವೆಯೇ ಇಲ್ಲಿದೆ ಗುಡ್ ನ್ಯೂಸ್

By Suvarna NewsFirst Published Aug 14, 2020, 1:36 PM IST
Highlights

ಎಲ್ಲೆಡೆ ಕೊರೋನಾ ಸೋಂಕು ಆತಂಕ ಹೆಚ್ಚಿಸುತ್ತಿರುವ ಬೆನ್ನಲ್ಲೇ ಗುಡ್ ನ್ಯೂಸ್ ಒಂದು ಇಲ್ಲಿದೆ. ಏನದು ..?

ಮೈಸೂರು(ಆ.14): ಒಂದೆಡೆ ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದರೇ, ಮತ್ತೊಂದೆಡೆ ಕೊರೋನಾ ಗೆದ್ದು ಬಂದವರ ಸಂಖ್ಯೆ ಸಹ ಹೆಚ್ಚಾಗುತ್ತಿರುವುದು ಆಶಾದಾಯಕವಾಗಿದೆ.

ಹೌದು, ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದ 637 ಮಂದಿ ಗುರುವಾರ ಒಂದೇ ದಿನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ. ಹಾಗೆಯೇ, ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 522 ಮಂದಿಗೆ ಕೊರೋನಾ ವೈರಸ್‌ ಸೋಂಕು ಇರುವುದು ದೃಢವಾಗಿದ್ದು, 12 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆಯು 8989ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 274ಕ್ಕೆ ಹೆಚ್ಚಳವಾಗಿದೆ. ಈ ಪೈಕಿ ಈವರೆಗೂ 5418 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್‌ ಸರಿ ಪ್ರಕರಣದಲ್ಲಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 75 ವರ್ಷದ ವೃದ್ಧ, 83 ವರ್ಷದ ವೃದ್ಧ, 34 ವರ್ಷದ ವ್ಯಕ್ತಿ, 65 ವರ್ಷದ ವೃದ್ಧೆ, 58 ವರ್ಷದ ವ್ಯಕ್ತಿ, 70 ವರ್ಷದ ವೃದ್ಧೆ, 59 ವರ್ಷದ ವ್ಯಕ್ತಿ, 60 ವರ್ಷದ ವೃದ್ಧ, 57 ವರ್ಷದ ವ್ಯಕ್ತಿ, 70 ವರ್ಷದ ವೃದ್ಧ, 24 ವರ್ಷದ ಯುವಕ ಹಾಗೂ 70 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಗುರುವಾರ ದೇಶದಲ್ಲಿ ದಾಖಲೆಯ 69612 ಕೊರೋನಾ ಕೇಸ್, 1010 ಸಾವು..!..

ಕೊರೋನಾ ಸೋಂಕಿತರ ಸಂಪರ್ಕದಿಂದ 264, ಅಂತರ ಜಿಲ್ಲಾ ಮತ್ತು ರಾಜ್ಯ ಪ್ರವಾಸದಿಂದ 179, ಐಎಲ…ಐ ಪ್ರಕರಣ 69, ಸರಿ ಪ್ರಕರಣ 10 ಸೇರಿದಂತೆ ಒಟ್ಟು 522 ಮಂದಿಗೆ ಸೋಂಕು ಇರುವುದು ದೃಢವಾಗಿದೆ. ಹೊಸ ಸೋಂಕಿತರಿಂದ ಜಿಲ್ಲೆಯಲ್ಲಿ ಹೊಸದಾಗಿ 96 ಕಂಟೈನ್ಮೆಂಟ್‌ ಜೋನ್‌ ಮಾಡಲಾಗಿದೆ. ಸೋಂಕಿತರ ಪೈಕಿ 12 ಮಂದಿಯನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

24129 ಮಂದಿ ಹೋಂ ಕ್ವಾರಂಟೈನ್‌

ಕೋವಿಡ್‌-19 ಸಂಬಂಧ ಜಿಲ್ಲೆಯಲ್ಲಿ ಗುರುವಾರದವರೆಗೂ ಒಟ್ಟು 49701 ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಇದರಲ್ಲಿ 22275 ಮಂದಿ 14 ದಿನಗಳ ಐಸೋಲೇಶನ್‌ ಮುಗಿಸಿದ್ದಾರೆ. ಇನ್ನೂ 24129 ಮಂದಿಯನ್ನು 14 ದಿನಗಳ ಹೋಂ ಐಸೋಲೇಶನ್‌ನಲ್ಲಿ ಇರಿಸಲಾಗಿದೆ.

ಭಾರತದಲ್ಲಿ ಲಸಿಕೆ ಉತ್ಪಾದನೆಗೆ ರಷ್ಯಾ ತವಕ..!.

ಜಿಲ್ಲೆಯಲ್ಲಿ ಈವರೆಗೂ 8989 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಇದರಲ್ಲಿ 5418 ಮಂದಿ ಗುಣಮುಖರಾಗಿದ್ದು, 274 ಮಂದಿ ಮೃತಪಟ್ಟಿದ್ದಾರೆ. ಉಳಿದ 3297 ಮಂದಿ ಸೋಂಕಿತರ ಪೈಕಿ 211 ಮಂದಿಯನ್ನು ಕೋವಿಡ್‌ ಸರ್ಕಾರಿ ಆಸ್ಪತ್ರೆ, 88 ಮಂದಿಯನ್ನು ಕೋವಿಡ್‌ ಹೆಲ್ತ್‌ ಕೇರ್‌ಗಳಲ್ಲಿ, 787 ಮಂದಿಯನ್ನು ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ, 155 ಮಂದಿಯನ್ನು ಖಾಸಗಿ ಆಸ್ಪತ್ರೆಗಳಲ್ಲಿ, 1970 ಮಂದಿಯನ್ನು ಮನೆಗಳಲ್ಲಿ ಹಾಗೂ 86 ಮಂದಿಯನ್ನು ಖಾಸಗಿ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 60612 ಜನರ ಸ್ಯಾಂಪಲ್‌ ಪರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಕೊರೋನಾ

ಸೋಂಕಿತರು- 8989

ಗುಣಮುಖ- 5418

ಸಕ್ರಿಯ- 3297

ಸಾವು- 274

click me!