ಗೋಕಾಕ: ಮಹಾಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

By Kannadaprabha NewsFirst Published Aug 14, 2020, 1:13 PM IST
Highlights

ಪರಮ ಪೂಜ್ಯ ಶ್ರೀ ಶಂಕರಾನಾಂದ ಮಹಾಸ್ವಾಮಿಗಳು ನಿಧನ| ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶಂಕರಧಾಮ| ಬೆಳಗಾವಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಕಲಬುರಗಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಪುಣೆ, ಮುಂಬೈನಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಶ್ರೀಗಳು|

ಬೆಳಗಾವಿ(ಆ.14): ಜಿಲ್ಲೆಯ ಗೋಕಾಕ ಜಲಪಾತದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶಂಕರಧಾಮ (ಯರಗಲ ಮಠ)ದ ಪರಮ ಪೂಜ್ಯ ಶ್ರೀ ಶಂಕರಾನಾಂದ ಮಹಾಸ್ವಾಮಿಗಳು (55) ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಸಂಸಾರಿಕ ಮಠದ ಸ್ವಾಮೀಜಿಗಳಾದ ಇವರು ಪತ್ನಿ, ಮಗ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಸಂಜೆ ತಡವಾಗಿ ಮಠದಲ್ಲಿ ಕಾಕಡಾರತಿ ಪೂಜೆ ಸಲ್ಲಿಸಿ, ವಿಶ್ರಾಂತಿ ಜಾರುವ ಮುಂಚೆ ಕುಸಿದು ಬಿದ್ದಿದ್ದು, ಭಕ್ತರು ಸೇರಿ ಗೋಕಾಕ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಅಲ್ಲಿಂದ ವಿಜಯಪುರ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಭಾರೀ ಆಕ್ರೋಶ

ಗುರುವಾರ ಯಾದಗಿರಿ ಜಿಲ್ಲೆಯ ಯರಗಲ್‌ ಗ್ರಾಮದಲ್ಲಿ ಶ್ರೀಗಳ ಅಂತ್ಯಕ್ರಿಯೆ ಜರುಗಿದೆ. 1980ರಲ್ಲಿ ಶ್ರೀ ರಘುನಾಥ ಸ್ವಾಮೀಜಿ ಸ್ವರ್ಗಸ್ಥರಾದ ನಂತರ 1981ರಲ್ಲಿ ಗೋಕಾಕ ಫಾಲ್ಸ್‌ ಯರಗಲ ಮಠದ ಭಕ್ತರು ಇವರನ್ನು ಕರೆತಂದು ಪಟ್ಟಾಭಿಷೇಕ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಶ್ರೀಮಠದ ಜವಾಬ್ದಾರಿ ಹೊಂದಿದ್ದರು. ಪ್ರತಿ ವರ್ಷದ ಶ್ರಾವಣ ಮಾಸದ ಸಪ್ತಾಹದ ಜೊತೆಗೆ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಳಗಾವಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಕಲಬುರಗಿ  ಜಿಲ್ಲೆ ಹಾಗೂ ಮಹಾರಾಷ್ಟ್ರದ ಪುಣೆ, ಮುಂಬೈನಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ.
 

click me!