ಕೊರೋನಾ ರೋಗಿಗಳು ನಾಪತ್ತೆಯಾಗ್ತಿದ್ದಾರೆ ಎನ್ನುವ ಸುದ್ದಿ ಕೇಳುತ್ತಿರುವ ಸಂದರ್ಭದಲ್ಲೇ ಇದೀಗ ಕೊರೋನಾ ವೈರಸ್ ಎಂದು ಕರೆದೊಯ್ಯಲಾಗಿದ್ದ ವೃದ್ಧ ನಾಪತ್ತೆಯಾಗಿರುವ ಘಟನೆ ಸಿಎಂ ತವರು ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ(ಜು.31): ಕೊರೋನಾ ರೋಗಿಗಳು ನಾಪತ್ತೆಯಾಗ್ತಿದ್ದಾರೆ ಎನ್ನುವ ಸುದ್ದಿ ಕೇಳುತ್ತಿರುವ ಸಂದರ್ಭದಲ್ಲೇ ಇದೀಗ ಕೊರೋನಾ ವೈರಸ್ ಎಂದು ಕರೆದೊಯ್ಯಲಾಗಿದ್ದ ವೃದ್ಧ ನಾಪತ್ತೆಯಾಗಿರುವ ಘಟನೆ ಸಿಎಂ ತವರು ಜಿಲ್ಲೆಯಲ್ಲಿ ನಡೆದಿದೆ.
ಸಿಎಂ ತವರು ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯಿಂದ ಮಹಾ ಎಡವಟ್ಟು ನಡೆದಿದ್ದು ಕೋವಿಡ್ ಬಂದಿದೆ ಎಂದು ಕರೆದುಕೊಂಡು ಹೋದ ಪೆಷಂಟ್ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.
ರಾತ್ರಿ ಎಣ್ಣೆ ಪಾರ್ಟಿ: ಸಿಟ್ಟಿಗೆದ್ದು ಸ್ನೇಹಿತನನ್ನೇ ಕೊಂದ
ತಾಲೂಕು ಹೆಲ್ತ್ ಆಫಸರ್ ಬಳಿ ಈ ಬಗ್ಗೆ ವಿಚಾರಿಸಿದಾಗ ಅವರು ವೃದ್ಧ ಕೋರೋನಾದಿಂದ ಸತ್ತು ಹೋಗಿದ್ದಾರೆ ಎಂದಿದ್ದರೆ, ಡಿಎಚ್ಒ ಅವರು ತನಿಖೆ ಮಾಡಿ ಹೇಳುತ್ತೇವೆ ಎಂದಿದ್ದಾರೆ. 85 ವರ್ಷ ಮಹದೇವಪ್ಪ ಎಂಬುವರನ್ನ 6 ದಿನಗಳ ಹಿಂದೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಶಿಫ್ಟ್ ಮಾಡಿ ಇವತ್ತಿಗೆ 6 ದಿವಸ ಆಗಿದ್ದರೂ ರೋಗಿ ಬಗ್ಗೆ ಸುಳಿವಿಲ್ಲ. ಎಲ್ಲಿದ್ದಾರೆ ಎಂದು ಕೇಳಿದರೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ.
ಗಂಗಾವತಿ: ಗಂಡನ ನಿಧನದ ಸುದ್ದಿ ಕೇಳಿ ಹೆಂಡತಿ ಸಾವು, ಸಾವಿನಲ್ಲೂ ಒಂದಾದ ವೃದ್ಧ ದಂಪತಿ
ಕುಟುಂಬಸ್ಥರು ತೀವ್ರ ಒತ್ತಡ ಹಾಕಿದ ಮೇಲೆ ಸಿಬ್ಬಂದಿ ವೃದ್ಧ ಕೊರೋನಾದಿಂದ ಅವರು ಸತ್ತುಹೋಗಿದ್ದಾರೆ. ಅವರ ಅಂತ್ಯಸಂಸ್ಕಾರ ಸಹ ಆಗಿದೆ ಎಂದಿದ್ದಾರೆ. ಒಂದು ವೇಳೆ ಸಾವನ್ನಪ್ಪಿದ್ದರೆ ಕುಟುಂಬಸ್ಥರಿಗೆ ಹೇಳದೇ ಅಂತ್ಯಸಂಸ್ಕಾರ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ ಅಧಿಕಾರಿಗಳು ಉತ್ತರ ಕೊಡುತ್ತಿಲ್ಲ. ಎಲ್ಲದಕ್ಕಿಂತ ಪ್ರಮುಖವಾಗಿ ರೊಗಿ ಸಾವನ್ನಪ್ಪಿರುವ ದಾಖಲೆಯೂ ಇಲ್ಲ ಎಂದು ಆರೋಪಿಸಲಾಗಿದೆ.
ಇದ್ದರೆ ಈ ಬಗ್ಗೆ ಕುಟುಂಬಸ್ಥರು ಡಿಎಚ್ಒಗೆ ದೂರು ಹೇಳಿದಾಗ ತನಿಖೆ ಮಾಡಿ ಹೇಳ್ತೀವಿ ಅಂತಿದ್ದಾರೆ. ಕಳೆದ ಆರು ದಿನಗಳಿಂದ ಮಹದೇವಪ್ಪ ಎಲ್ಲಿದ್ದಾರೆ ಅಂತ ಸರಿಯಾಗಿ ತಿಳಿದುಕೊಳ್ಳೋಕೆ ಆಗದೇ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪೋಲಿಸ್ ಠಾಣೆಗೆ ದೂರು ನೋಡಲು ಹೋದರೆ ಕೋವಿಡ್ ಪೇಷಂಟ್ ಗಳದ್ದು ನಾವು ತಗೆದುಕೊಳ್ಳಲು ಆಗುವುದಿಲ್ಲ ಎನ್ನುವ ಉತ್ತರ ಬರುತ್ತಿದೆ ಎಂದಿದ್ದಾರೆ ಕುಟುಂಬಸ್ಥರು.