ಕೋವಿಡ್‌ ಸೋಂಕಿತ ಬಾಲಕ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

By Kannadaprabha News  |  First Published Jun 18, 2020, 8:11 AM IST

ಕಡೂರು ತಾಲೂಕು ದಾಸರಹಳ್ಳಿಯ SSLC ವಿದ್ಯಾರ್ಥಿಗೆ ಜೂನ್‌ 11ರಂದು ಕೊರೋನಾ ಪಾಸಿಟಿವ್‌ ಕಂಡುಬಂದಿತ್ತು. ಅಂದಿನಿಂದಲೂ ಆತನಿಗೆ ಚಿಕಿತ್ಸೆ ಮುಂದುವರಿದಿತ್ತು. 7 ದಿನಗಳ ನಂತರ ಆತನ ಕೋವಿಡ್‌ ಪರೀಕ್ಷಾ ವರದಿ ನೆಗಟಿವ್‌ ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.


ಚಿಕ್ಕಮಗಳೂರು(ಜೂ.18): ಕೊರೋನಾ ಸೋಂಕಿತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗುಣಮುಖನಾಗಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

ಕಡೂರು ತಾಲೂಕು ದಾಸರಹಳ್ಳಿಯ ಈ ವಿದ್ಯಾರ್ಥಿಗೆ ಜೂನ್‌ 11ರಂದು ಕೊರೋನಾ ಪಾಸಿಟಿವ್‌ ಕಂಡುಬಂದಿತ್ತು. ಅಂದಿನಿಂದಲೂ ಆತನಿಗೆ ಚಿಕಿತ್ಸೆ ಮುಂದುವರಿದಿತ್ತು. 7 ದಿನಗಳ ನಂತರ ಆತನ ಕೋವಿಡ್‌ ಪರೀಕ್ಷಾ ವರದಿ ನೆಗಟಿವ್‌ ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Tap to resize

Latest Videos

ಜೂನ್ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಆತನಿಗೆ ಆಸ್ಪತ್ರೆಯಲ್ಲಿ ತಜ್ಞರಿಂದ ಕೌನ್ಸೆಲಿಂಗ್‌ ಕೊಡಿಸಲಾಗಿದೆ. ವಿದ್ಯಾರ್ಥಿಗೆ ಮೊದಲು ಕೊರೋನಾ ಪಾಸಿಟಿವ್‌ ಕಂಡುಬಂದ ನಂತರ ನಾಲ್ಕು ಬಾರಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಬಂದಿತ್ತು. ಇಂದು ಬಂದಿರುವ ಪರೀಕ್ಷಾ ವರದಿ ಸಹ ನೆಗೆಟಿವ್‌ ಬಂದಿದೆ. ಆತನ ಎಲ್ಲ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪರೀಕ್ಷಾ ಫಲಿತಾಂಶವೂ ನೆಗೆಟಿವ್‌ ಬಂದಿದೆ. ಆದರೂ, ವಿದ್ಯಾರ್ಥಿ ಸಂಪೂರ್ಣ ಗುಣಮುಖನಾಗಿರುವ ಪ್ರಕರಣವೇ ಅಥವಾ ಫಾಲ್ಸ್‌ ಪಾಸಿಟಿವ್‌ ಪ್ರಕರಣವೇ ಎನ್ನುವುದನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಆರೋಗ್ಯ ಇಲಾಖೆ ಅನುಮತಿ ಪಡೆದು ಆತನ ಮೊದಲ ಗಂಟಲು ಮತ್ತು ಮೂಗಿನ ದ್ರವವನ್ನು ಮರು ಪರೀಕ್ಷೆಗೆ ಬೆಂಗಳೂರಿನ ನಿಮಾನ್ಸ್‌ಗೆ ಕಳುಸಲಾಗಿದೆ. ಇನ್ನೂ ಫಲಿತಾಂಶ ಬಂದಿಲ್ಲ ಎಂದು ತಿಳಿಸಿದರು.

ಕೊರೋನಾದೊಂದಿಗೆ ಬದುಕು, ತಾಯಿ ಔಷಧಿಗೋಸ್ಕರ ಹುಡುಗ ಮಾಡ್ತಿರುವ ಕೆಲಸ!

ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಕೆಲವು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಆತ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅಗತ್ಯಬಿದ್ದರೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
 

click me!