ದಕ್ಷಿಣ ಕನ್ನಡದಲ್ಲಿ 8 ಪಾಸಿಟಿವ್‌, ಒಬ್ಬರು ಡಿಸ್ಚಾರ್ಜ್

By Kannadaprabha NewsFirst Published Jun 18, 2020, 7:50 AM IST
Highlights

ಮಂಗಳವಾರ ಒಂದೇ ದಿನ 79 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿ ತೀವ್ರ ಆತಂಕ ಸೃಷ್ಟಿಯಾಗಿದ್ದ ದ.ಕ. ಜಿಲ್ಲೆಯಲ್ಲು ಬುಧವಾರ 8 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಕೋವಿಡ್‌-19 ಸೋಂಕಿತರ ಸಂಖ್ಯೆ 386ಕ್ಕೆ ಏರಿಕೆಯಾಗಿದೆ. ಒಬ್ಬರು ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಂಗಳೂರು(ಜೂ.18): ಮಂಗಳವಾರ ಒಂದೇ ದಿನ 79 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿ ತೀವ್ರ ಆತಂಕ ಸೃಷ್ಟಿಯಾಗಿದ್ದ ದ.ಕ. ಜಿಲ್ಲೆಯಲ್ಲು ಬುಧವಾರ 8 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಕೋವಿಡ್‌-19 ಸೋಂಕಿತರ ಸಂಖ್ಯೆ 386ಕ್ಕೆ ಏರಿಕೆಯಾಗಿದೆ. ಒಬ್ಬರು ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೌದಿ ಅರೇಬಿಯಾದಿಂದ ಬಂದ ಇಬ್ಬರು, ಮುಂಬೈನಿಂದ ಬಂದ ಒಬ್ಬರಿಗೆ ಸೋಂಕು ತಗುಲಿದ್ದರೆ, ಉಳಿದ ಐದು ಮಂದಿಗೆ ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ಇವರೆಲ್ಲರನ್ನೂ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುವೈತ್‌, ಯುಎಇ, ಮಸ್ಕತ್‌ನಿಂದ 422 ಮಂದಿ ಮಂಗಳೂರಿಗೆ

ಬೆಂಗಳೂರಿನಿಂದ ಆಗಮಿಸಿದ 70 ವರ್ಷದ ವೃದ್ಧನಿಂದ (ರೋಗಿ ಸಂಖ್ಯೆ 6282) ಮೂವರಿಗೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಇವರಿಂದ 12 ವರ್ಷದ ಬಾಲಕಿ, 30 ಮತ್ತು 38 ವರ್ಷದ ಮಹಿಳೆಗೆ ಪಾಸಿಟಿವ್‌ ಕಾಣಿಸಿಕೊಂಡಿದೆ. ರೋಗಿ ಸಂಖ್ಯೆ 6284ರ ಸಂಪರ್ಕದಿಂದ 42 ವರ್ಷದ ಪುರುಷ, ರೋಗಿ ಸಂಖ್ಯೆ 5765ರಿಂದ 35 ವರ್ಷದ ಪುರುಷಗೆ ಕೊರೋನಾ ತಗುಲಿದೆ. ಉಳಿದ ಮೂವರ ಪೈಕಿ ಇಬ್ಬರು ಸೌದಿ ಅರೇಬಿಯಾದಿಂದ ಬಂದವರು. ಜೂ.8ರಂದು ಸೌದಿಯಿಂದ ಆಗಮಿಸಿದ 43 ವರ್ಷ ಮತ್ತು 25 ವರ್ಷದ ಪುರುಷರು ಸೋಂಕಿಗೆ ತುತ್ತಾಗಿದ್ದಾರೆ. ಇನ್ನೊಬ್ಬರು 60 ವರ್ಷದ ಪುರುಷ ಜೂ. 9ರಂದು ಮುಂಬೈನಿಂದ ಆಗಮಿಸಿದ್ದು, ಇದೀಗ ಪಾಸಿಟಿವ್‌ ವರದಿ ಬಂದಿದೆ. ಇವರೆಲ್ಲರೂ ಕ್ವಾರಂಟೈನ್‌ನಲ್ಲಿ ಇದ್ದವರು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್‌ ತಿಳಿಸಿದ್ದಾರೆ.

ಒಬ್ಬರು ಡಿಸ್ಚಾರ್ಜ್‌: ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡು ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆದ ಒಬ್ಬರು ಗುಣಮುಖಗೊಂಡು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 60 ವರ್ಷದ ಗಂಡಸು ರೋಗಿ ಸಂಖ್ಯೆ 5923 ಆಸ್ಪತ್ರೆಯಿಂದ ಬಿಡುಗಡೆಗೊಂಡವರು. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 170ಕ್ಕೆ ಏರಿದೆ.

'ಹೊರ ರಾಜ್ಯಗಳಿಂದ ಬಂದವರಿಂದಲೇ ಕೊರೋನಾ ಸೋಂಕು ಹೆಚ್ಚಳ'

ಪ್ರಸ್ತುತ 208 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕರ ಆರೋಗ್ಯ ಸ್ಥಿರವಾಗಿದೆ. ಆದರೆ 70 ವರ್ಷದ ವ್ಯಕ್ತಿಯೊಬ್ಬರು ಮಧುಮೇಹ, ನ್ಯೂಮೋನಿಯಾದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನೊಬ್ಬರು 52 ವರ್ಷದ ಪುರುಷ ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಬುಧವಾರ 80 ಮಂದಿಯ ವರದಿ ಸ್ವೀಕೃತವಾಗಿದ್ದು, 8 ಪಾಸಿಟಿವ್‌, 72 ನೆಗೆಟಿವ್‌ ಆಗಿದೆ. 119 ಮಂದಿಯ ವರದಿ ನಿರೀಕ್ಷಿಸಲಾಗಿದೆ. 147ಮಂದಿಯನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ತೀವ್ರ ಉಸಿರಾಟ ತೊಂದರೆಯ 28 ಪ್ರಕರಣ ವರದಿಯಾಗಿದೆ.

click me!