ಬಳ್ಳಾರಿ: ಕೊರೋನಾ ಸೋಂಕಿತ ಮೂವರಿಗೆ ಹೆರಿಗೆ, ತಾಯಿ, ಮಕ್ಕಳು ಸುರಕ್ಷಿತ

By Kannadaprabha News  |  First Published Jul 22, 2020, 10:11 AM IST

ಒಬ್ಬರದು ನಾರ್ಮಲ್‌ ಡೆಲಿವರಿ,ಇನ್ನಿಬ್ಬರದ್ದು ತುರ್ತು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ| ಇದುವರೆಗೆ ಬಳ್ಳಾರಿ ಕೋವಿಡ್‌ ಆಸ್ಪತ್ರೆಯಲ್ಲಿ 10 ಜನ ಸೋಂಕಿತ ಗರ್ಭಿಣಿ ಮಹಿಳೆಯರ ಹೆರಿಗೆ| ಇನ್ನೂ ಅನೇಕ ಸೊಂಕಿತ ಗರ್ಭಿಣಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ|


ಬಳ್ಳಾರಿ(ಜು.22):  ನಗರದ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದ ಮೂವರು ಜನ ಮಹಿಳೆಯರ ಸುಸೂತ್ರ ಹೆರಿಗೆ ಮಾಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದು, ತಾಯಿ ಮತ್ತು ಮಕ್ಕಳು ಕ್ಷೇಮವಾಗಿದ್ದಾರೆ.

ಒಬ್ಬರದು ನಾರ್ಮಲ್‌ ಡೆಲಿವರಿ ಆಗಿದ್ದು, ಇನ್ನಿಬ್ಬರದ್ದು ತುರ್ತು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಶ್ವೇತಾ ಎನ್ನುವ ಮಹಿಳೆಗೆ ಸಾಮಾನ್ಯ ಹೆರಿಗೆಯಾಗಿದ್ದು, ಹೆಣ್ಣು ಮಗು ಜನನವಾಗಿದ್ದು 2.1 ಕೆಜಿ ತೂಕವಿದ್ದು, ಆರೋಗ್ಯವಾಗಿದೆ. ಹೊನ್ನೂರಮ್ಮ ಎನ್ನುವ ಸೋಂಕಿತ ಮಹಿಳೆಗೆ ಇದು ಎರಡನೇ ಹೆರಿಗೆಯಾಗಿದ್ದು, ಮಗು ಭೇದಿ ಮಾಡಿಕೊಂಡು ತೊಂದರೆಯಾಗುತ್ತಿದ್ದ ಕಾರಣ ತುರ್ತುಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ಹೆಣ್ಣುಮಗು ಜನನವಾಗಿದ್ದು 3 ಕೆ.ಜಿ ಇದೆ. ಪಲ್ಲವಿ ಎನ್ನುವ ಇನ್ನೋರ್ವ ಸೋಂಕಿತ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ಹೆಣ್ಣುಮಗು ಜನಿಸಿದ್ದು, ತೂಕ 3.5 ಕೆಜಿ ಇದ್ದು, ಆರೋಗ್ಯವಾಗಿದೆ.

Tap to resize

Latest Videos

ಬಳ್ಳಾರಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತೆ

ಇದುವರೆಗೆ ಬಳ್ಳಾರಿ ಕೋವಿಡ್‌ ಆಸ್ಪತ್ರೆಯಲ್ಲಿ 10 ಜನ ಸೋಂಕಿತ ಗರ್ಭಿಣಿ ಮಹಿಳೆಯರ ಹೆರಿಗೆ ಮಾಡಿಸಲಾಗಿದೆ. ಇನ್ನೂ ಅನೇಕ ಸೊಂಕಿತ ಗರ್ಭಿಣಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೇಲೆ ವಿಶೇಷ ನಿಗಾವಹಿಸಲಾಗಿದೆ.

click me!