ಮಂಡ್ಯ : 8 ಗ್ರಾಮ ಸೀಲ್‌ಡೌನ್‌!

By Kannadaprabha News  |  First Published May 2, 2021, 9:43 AM IST

ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ದಿನದಿನವೂ ಸಾವು-ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಮಂಡ್ಯ ಜಿಲ್ಲೆಯೂ ಕೊರೋನಾ ಹಾಟ್‌ಸ್ಪಾಟ್ ಆಗಿದ್ದು ಇಲ್ಲಿನ 8 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. 


ಮಂಡ್ಯ (ಏ.02) :  ಮಂಡ್ಯದಲ್ಲಿ ಕೊರೋನಾ ಹಳ್ಳಿಗಳಿಗೆ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 25ಕ್ಕಿಂತ ಹೆಚ್ಚು ಸೋಂಕಿತರಿರುವ ಗ್ರಾಮಗಳನ್ನು ತಾಲೂಕು ಆಡಳಿತ ಸೀಲ್‌ಡೌನ್‌ ಮಾಡಿದೆ.

 ಅದರಂತೆ ಮಂಡ್ಯ ತಾಲೂಕಿನ 8 ಗ್ರಾಮಗಳು ಸೀಲ್‌ಡೌನ್‌ ಆಗಿದ್ದು, ಇನ್ನೂ 2 ಗ್ರಾಮಗಳು ಸೀಲ್‌ಡೌನ್‌ ಆಗುವ ಸನಿಹದಲ್ಲಿವೆ. 

Tap to resize

Latest Videos

ಕೊರೋನಾ ಕರಾಳತೆ: ಆಸ್ಪತ್ರೆ ಮುಂದೆ ಕುಳಿತಲ್ಲೇ ವ್ಯಕ್ತಿ ಸಾವು ...

ತಾಲೂಕಿನ ಹನಕೆರೆ(41), ಬಸರಾಳು(31), ಹುಲಿವಾನ(38), ಕೀಲಾರ(45), ಮಂಗಲ(30), ಹೆಮ್ಮಿಗೆ(28), ತೂಬಿನಕೆರೆ(25), ಹಳುವಾಡಿ(24 ಸೋಂಕಿತರು) ಸೀಲ್‌ಡೌನ್‌ ಆಗಿರುವ ಗ್ರಾಮಗಳು. ಕೊತ್ತತ್ತಿ ಹಾಗೂ ಹೆಬ್ಬಕವಾಡಿ ಗ್ರಾಮಗಳಲ್ಲೂ ಸೋಂಕಿತರು ಹೆಚ್ಚಿದ್ದು, ಸೀಲ್‌ಡೌನ್‌ ಆಗುವ ನಿರೀಕ್ಷೆ ಇದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!