ಚೆಟ್ಟಳ್ಳಿ ಸಮೀಪದ ಕಂಡಕರೆ ಗ್ರಾಮದ ಯುವಕರು ಎಲ್ಲರೂ ಸೇರಿ ಕೊರೊನಾ ಕಟಿಂಗ್ ಚಾಲೆಂಜ್ ಮಾಡಿ, ಗ್ರಾಮದ ಬಹುತೇಕ ಯುವಕರು ತಮ್ಮ ತಲೆ ಕೂದಲನ್ನು ಸಂಪೂರ್ಣ ಬೋಳಿಸಿ ಇದೀಗ (ಮೊಟ್ಟೆ) ಕೊರೋನಾ ಕಟಿಂಗ್ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.
ಮಡಿಕೇರಿ(ಏ.08): ದೇಶದೆಲ್ಲೆಡೆ ಕೊರೋನಾ ಮಹಾಮಾರಿ ವ್ಯಾಪಿಸುತ್ತಿದ್ದು, ಸೋಂಕು ಹರಡುವಿಕೆಯನ್ನು ತಡಯುವ ನಿಟ್ಟಿನಲ್ಲಿ ದೇಶಾದ್ಯಂತ ಏಪ್ರಿಲ್ 14 ವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಇತ್ತ ಕೊಡಗು ಜಿಲ್ಲೆಯಲ್ಲಿ ಕೂಡ ನಿರ್ಬಂಧ ಹೇರಲಾಗಿದ್ದು, ಅಗತ್ಯವಸ್ತುಗಳ ಖರೀದಿಗೆ ವಾರದಲ್ಲಿ ಮೂರು ದಿನ ಮಾತ್ರ ದಿನಸಿ ಹಾಗೂ ತರಕಾರಿಗಳನ್ನು ಖರೀದಿಸಲು ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ಪ್ರತಿದಿನ 6 ರಿಂದ 8 ಗಂಟೆಯವರೆಗೆ ಹಾಲು ಹಾಗೂ ಪತ್ರಿಕೆಯನ್ನು ಖರೀದಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ತುರ್ತು ಸೇವೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಅಂಗಡಿ ತೆರೆಯಲು ಅನುಮತಿ ಇಲ್ಲ.
ಇದೀಗ ಜಿಲ್ಲೆಯಲ್ಲಿ ಕೊರೋನಾ ಕಟಿಂಗ್ ಹೆಸರಿನಲ್ಲಿ ಹೊಸ ಹೇರ್ ಕಟ್ಟಿಂಗ್ ಹವಾ ಶುರುವಾಗಿದೆ. ಲಾಕ್‌ಡೌನ್ ಇರುವುದರಿಂದ ಕ್ಷಾೌರದಂಗಡಿ ತೆರಯಲು ಅನುಮತಿ ಇಲ್ಲ. ಇದರಿಂದ ಕಟ್ಟಿಂಗ್ ಮಾಡದೆ ಬಹುತೇಕ ಜನರ ಕೂದಲು ಕಣ್ಣ ಹತ್ತಿರ ಬಂದು ಕಣ್ಣೇ ಕಾಣದ ಸ್ಥಿತಿಯಲ್ಲಿದ್ದರೆ. ಇನ್ನೂ ಕೆಲವರ ಗಡ್ಡವನ್ನು ನೋಡಿದರೆ ಯಾರೆಂಬುದೇ ತಿಳಿಯುತ್ತಿಲ್ಲ. ಹಾಗಾಗಿ ಯುವಕರೇ ಸ್ವತಃ ಹೇರ್ ಕಟಿಂಗ್ ಮಾಡಿಕೊಳ್ಳುವ ಮೂಲಕ ನ್ಯೂ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.
ಕೊರೊನಾ ಕಟ್ಟಿಂಗ್ ಚಾಲೆಂಜ್:
ಚೆಟ್ಟಳ್ಳಿ ಸಮೀಪದ ಕಂಡಕರೆ ಗ್ರಾಮದ ಯುವಕರು ಎಲ್ಲರೂ ಸೇರಿ ಕೊರೊನಾ ಕಟಿಂಗ್ ಚಾಲೆಂಜ್ ಮಾಡಿ, ಗ್ರಾಮದ ಬಹುತೇಕ ಯುವಕರು ತಮ್ಮ ತಲೆ ಕೂದಲನ್ನು ಸಂಪೂರ್ಣ ಬೋಳಿಸಿ ಇದೀಗ (ಮೊಟ್ಟೆ) ಕೊರೋನಾ ಕಟಿಂಗ್ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.
ಯಾರಾದರೂ ಒಬ್ಬರು ತಮ್ಮ ಕೂದಲನ್ನು ಸಂಪೂರ್ಣ ಬೋಳಿಸಿ (ಮೊಟ್ಟೆಮಾಡಿ)ಕೊಂಡು ಕೊರೋನಾ ಕಟಿಂಗ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದರೆ, ಆತನ ಸ್ನೇಹಿತನೂ ಕೂಡ ತಲೆ ಕೂದಲು ಬೋಳಿಸಿ, ಕೊರೊನಾ ಕಟಿಂಗ್ ಚಾಲೆಂಜ್ ಮಾಡುತ್ತಿದ್ದಾರೆ.
ವಿವಿಧ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತಿರುವ ಯುವಕರು
ಕ್ಷಾೌರದಂಗಡಿಗಳು ಲಾಕ್‌ಡೌನ್ ಮುಗಿಯವವರೆಗೆ ತೆರಯುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ವಿವಿಧ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದ ಯುವ ಸಮೂಹ, ಇದೀಗ ವಿವಿಧ ರೀತಿಯ ಕೊರೊನಾ ಕಟ್ಟಿಂಗ್‌ನ್ನು ತಾವೇ ಮಾಡಿಕೊಂಡು ಮಿಂಚುತ್ತಿದ್ದಾರೆ. ಅಲ್ಲದೇ ಗಡ್ಡವನ್ನು ಸಂಪೂರ್ಣ ಶೇವ್ ಮಾಡಿ ನ್ಯೂ ಲುಕ್‌ನಲ್ಲಿ ಫೋಸ್ ಕೊಡುತ್ತ ಫೇಸ್‌ಬುಕ್, ಇನ್‌ಸ್ಟ್ರಾಗ್ರಾಮ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸ್ವತಃ ತಾವೇ ಕನ್ನಡಿ ಮುಂದೆ ನಿಂತು ಹೇರ್ ಕಟಿಂಗ್ ಮಾಡಿದರೆ, ಇನ್ನು ಬಹುತೇಕ ಗ್ರಾಮಗಳಲ್ಲಿ ಗ್ರಾಮದ ಯುವಕರು ಎಲ್ಲರೂ ಸೇರಿ ಪರಸ್ಪರ ತಮ್ಮ ಸ್ನೇಹಿತರಿಗೆ ಹೇರ್ ಕಟಿಂಗ್ ಮಾಡಿ ಟೈಮ್ ಪಾಸ್ ಮಾಡುತ್ತಿದ್ದಾರೆ. ಇದೀಗ ಕಾಣಿಸಿಕೊಂಡಿರುವ ತಲೆ ಬೋಳಿಸುವ ಕೊರೋನಾ ಕಟಿಂಗ್ ಎಲ್ಲೆಡೆ ಫೇಮಸ್ ಆಗಿದೆ.
ಮಡಿಕೇರಿಯಲ್ಲಿ ಅಪರೂಪದ ಚುಕ್ಕೆ ಕಾಡು ಗೂಬೆ ರಕ್ಷಣೆ
ನಾನು ಮೊದಲು ನನ್ನ ಗಡ್ಡವನ್ನು ಕ್ಲೀನ್ ಶೇವ್ ಮಾಡಿದೆ. ನಂತರ ಯುವಕರ ಮಧ್ಯೆ, ಉದ್ದಕ್ಕೆ ಬಂದಿರುವ ಕೂದಲನ್ನು ಸಂಪೂರ್ಣ ಬೋಳಿಸುವ ಬಗ್ಗೆ ಚರ್ಚೆ ನಡೆಯಿತು. ಮೊದಲು ಒಂದೆರಡು ಜನರು ತಲೆ ಕೂದಲನ್ನು ಸಂಪೂರ್ಣ ಬೋಳಿಸಿ ಹೊಸ ಲುಕ್‌ನಲ್ಲಿ ಕಂಡದ್ದನ್ನು ಗಮನಿಸಿದ ನಮ್ಮೂರಿನ ಯುವಕರೆಲ್ಲೂ ಇದೀಗ ತಲೆ ಕೂದಲನ್ನು ಸಂಪೂರ್ಣ ಬೋಳಿಸಿ ಕೊರೋನಾ ಕಟ್ಟಿಂಗ್ ಎಂದು ಟ್ರೆಂಡ್ ಶುರು ಮಾಡಿ ಹೊಸಲುಕ್‌ನಲ್ಲಿ ಕಾಣುತ್ತಿದ್ದಾರೆ ಎಂದು ಬ್ರೈಟ್ ಸ್ಪೋಟ್ರ್ಸ್ ಆ್ಯಂಡ್ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಮನ್ಸೂರ್ ಕಂಡಕರೆ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಅಪರೂಪದ ಚುಕ್ಕೆ ಕಾಡು ಗೂಬೆ ರಕ್ಷಣೆ
ಹೇರ್ ಕಟ್ಟಿಂಗ್ ಶಾಪ್‌ಗಳನ್ನು ಬಂದ್ ಮಾಡಿರುವುದರಿಂದ, ಇದೀಗ ಜನ ತಾವೇ ಕಟ್ಟಿಂಗ್ ಮಾಡಿಕೊಳ್ಳಲು ಮುಂದಾಗಿರುವುದು ನಮ್ಮ ವೃತ್ತಿಗೆ ದೊಡ್ಡ ಹೊಡೆತ ತಂದಿದೆ. ನಮ್ಮ ಜೀವನ ಮುಂದುವರಿಸುವುದು ಕಷ್ಟಕರವಾಗಿದೆ. ಲಾಕ್‌ಡೌನ್‌ನಿಂದ ಹೇರ್ ಕಟಿಂಗ್ ವೃತ್ತಿಯನ್ನೇ ನಂಬಿಕೊಂಡಿದ್ದ ನಮಗೆ ಕೆಲಸ ಇಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಸಲೂನ್ ಶಾಪ್‌ಗಳನ್ನು ತೆರೆಯಲು ಸರ್ಕಾರ ಅನುವು ಮಾಡಿಕೊಡಬೇಕು ಹಾಗೂ ನಮಗೂ ಕೂಡ ಸರ್ಕಾರದಿಂದ ಸಹಾಯ ಬೇಕು ಎಂದು ಸಲೂನ್ ಶಾಪ್ ಮಾಲೀಕರೊಬ್ಬರು ಹೇಳಿದ್ದಾರೆ.
-ಮೋಹನ್ ರಾಜ್