
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.08): ಕೊಡಗಿನ ಪೊಲೀಸರಿಗೆ ದೊಡ್ಡ ಶಕ್ತಿಯಾಗಿ ನಿಂತು ಅಪರಾಧಿಗಳಿಗೆ ಸಿಂಹ ಸ್ವಪ್ನವಾಗಿರುವವನು ಕಾಪರ್. ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ತನ್ನ ಕರ್ತವ್ಯ ನಿಷ್ಠೆ ಎಂತಹದ್ದು ಎಂದು ತೋರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಬೆಳ್ಳಿಪದಕಕ್ಕೆ ಕೊರಳೊಡ್ಡಿರುವ ಇವನ ಚಾಕಚಕ್ಯತೆ, ಚಾಣಾಕ್ಷ್ಯತನವನ್ನು ನೋಡಿದರೆ ನೀವು ನಿಬ್ಬೆರಗಾಗಿ ನಿಂತು ಬಿಡುತ್ತೀರ. ಹಾಗಾದರೆ ಯಾರೂ ಈ ಸೂಪಕ್ ಕಾಪ್ ನೀವೇ ನೋಡಿ. ಎಸ್ ನೋಡ್ತಾ ಇದ್ದೀರಲ್ಲ, ತನ್ನ ಹ್ಯಾಂಡ್ಲರ್ ಪೊಲೀಸ್ ನೀಡುವ ಕಮ್ಯಾಂಡಿಂಗನ್ನು ಚಾಚು ತಪ್ಪದೆ ಪಾಲಿಸುತ್ತಿರುವ, ಕ್ಷಣಾರ್ಧದಲ್ಲಿ ಮಾದಕ ವಸ್ತುಗಳನ್ನು ಪತ್ತೆ ಹಚ್ಚುತ್ತಿರುವ ಇವನೇ ಕಾಪರ್. ಆತನ ತೀಕ್ಷ್ಣ ನೋಟವೇನು, ಈತನ ಲವಲವಿಕೆಯನ್ನು ನೋಡಿದ್ರೇನೇ ಮೈರೋಮಾಂಚನ ಆಗುತ್ತದೆ ಅಲ್ವಾ.?
ನೀವು ನೋಡುತ್ತಿರುವ ಇವನೇ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ ರಾಷ್ಟ್ರಮಟ್ಟದ ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್ ನಲ್ಲಿ ರಾಷ್ಟ್ರಮಟ್ಟದ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಒಬಿಡಿಯೆಂಟ್ ಬಾಯ್. ಕೊಡಗು ಜಿಲ್ಲೆಯ ಪೊಲೀಸ್ ಶ್ವಾನದಳದಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮನಮೋಹನ ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಕಾಪರ್, ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾನೆ. ನಾರ್ಕೋಟಿಕ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಪಡೆದು ರಾಜ್ಯಕ್ಕೂ ಹಾಗೂ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಗೂ ಹೆಸರು ತಂದು ಸಾಧನೆ ಮಾಡಿದ್ದಾನೆ. ಎರಡುವರೆ ವರ್ಷದ ಕಾಪರ್ ಶ್ವಾನವನ್ನು ಮೂರು ತಿಂಗಳ ಮರಿ ಇರುವಾಗಲಿಂದಲೇ ನುರಿತ ತರಬೇತಿಯನ್ನು ನೀಡಲಾಗಿದೆ. ಈ ಹಿಂದೆ ಮೈಸೂರಿನಲ್ಲಿ ನಡೆದ ವಲಯ ಮಟ್ಟದ ಡ್ಯೂಟಿ ಮೀಟ್ ನಲ್ಲಿ ಚಿನ್ನದ ಪದಕ ಹಾಗೂ ಅತ್ಯುತ್ತಮ ಶ್ವಾನ ಪ್ರಶಸ್ತಿಯನ್ನು ಪಡೆದಿತ್ತು.
ತದನಂತರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಡ್ಯೂಟಿ ಮೀಟ್ ನಲ್ಲಿ ಚಿನ್ನದ ಪದಕವನ್ನು ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಹ್ಯಾಂಡ್ಲರ್ ಮನ್ಮೋಹನ್ ಹಾಗೂ ಶ್ವಾನ ಕಾಪರ್ ಆಯ್ಕೆಗೊಂಡಿದ್ದರು. ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಇದೇ ತಿಂಗಳು ನಡೆದ 68ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸುಮಾರು 118 ಶ್ವಾನಗಳು ದೇಶದ ವಿವಿಧ ರಾಜ್ಯಗಳಿಂದ ಹಾಗೂ ಬಿ ಎಸ್ ಎಫ್,ಸಿ ಆರ್ ಪಿ ಎಫ್, ಬಿ ಐ ಎಸ್ ಎಫ್, ಐಟಿಬಿಪಿ, ಎಸ್ ಎಸ್ ಬಿ, ಎಸ್ ಪಿ ಜಿ, ಸಿ ಐಎಸ್ಎಫ್ ಮುಂತಾದ ವಿಭಾಗಗಳಿಂದ ಪಾಲ್ಗೊಂಡಿದ್ದವು. ಇವುಗಳ ಪೈಕಿ ಪ್ರಬಲ ಪೈಪೋಟಿ ನೀಡಿ ನಾರ್ಕೋಟಿಕ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕಾಪರ್ ಹಾಗೂ ಶ್ವಾನದ ಹ್ಯಾಂಡ್ಲರ್ ನಿರ್ವಾಹಕರಾದ ಮನಮೋಹನ್ ರವರು ಬೆಳ್ಳಿಯ ಪದಕವನ್ನು ಗಳಿಸಿದ್ದಾರೆ.
ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ
ಪುಟ್ಟ ಜಿಲ್ಲೆಯೊಂದರ ಪೊಲೀಸ್ ಶ್ವಾನ ದಳ ಘಟಕದಿಂದ ಹೊರ ರಾಜ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಗಳಿಸಿರುವ ಮೊದಲ ಪದಕ ವಿಜೇತರು ಮನ್ಮೋಹನ್ ಮತ್ತು ಕಾಪರ್ ಶ್ವಾನ ಆಗಿದ್ದಾರೆ. ರಾಷ್ಟ್ರಮಟ್ಟದ ಪದಕ ಪಡೆದಿರುವುದು ಕೊಡಗು ಜಿಲ್ಲಾ ಪೊಲೀಸ್ ಶ್ವಾನದಳ ಇದೇ ಮೊದಲು. ಚಿನ್ನದ ಪದಕ್ಕಾಗಿಯೇ ಸ್ಪರ್ಧೆಯೊಡ್ಡಿದ್ದ ಕಾಪರ್ ಕೇವಲ ಒಂದು ಅಂಕದಿಂದ ಚಿನ್ನದ ಪದಕವನ್ನು ಕಳೆದುಕೊಂಡಿದೆ. ಇವರ ಈ ಸಾಧನೆಗೆ ಬೆನ್ನಲುವಾಗಿ ನಿಂತ ಕೊಡಗು ಜಿಲ್ಲಾ ಅಧಿಕ್ಷಕರು ಜಿಲ್ಲಾ ಸಶಸ್ತ್ರ ದಳ ನಿರೀಕ್ಷಕರು ಹಾಗೂ ರಾಜ್ಯದ ಅಧಿಕಾರಿ ಸಿಬ್ಬಂದಿಗಳಿಗೆ ಕೊಡಗು ಜಿಲ್ಲಾ ಪೊಲೀಸ್ ಸೆಲ್ಯೂಟ್ ಸಲ್ಲಿಸಿದೆ. ಕಾಪರ್ ಮತ್ತು ಮನ್ಮೋಹನ್ ಅವರ ಸಾಧನೆಯನ್ನು ಗುರುತ್ತಿಸಿರುವ ರಾಜ್ಯ ಸರ್ಕಾರವು ಎರಡು ಲಕ್ಷ ಬಹುಮಾನವನ್ನು ಘೋಷಿಸಿದೆ.