ದರ್ಶನ್‌ ಬೆಳೆಸಲು ಸಹಕಾರ : ಸಿದ್ದರಾಮಯ್ಯ ಭರವಸೆ

By Kannadaprabha News  |  First Published Mar 29, 2023, 7:30 AM IST

ದಿ. ಆರ್‌. ಧ್ರುವನಾರಾಯಣ್‌ ಅವರು ಪಕ್ಷದ ಸಿದ್ದಾಂತ ಒಪ್ಪಿ ವಿದ್ಯಾರ್ಥಿ ದೆಸೆಯಿಂದಲೂ ಪಕ್ಷದ ಚಟುವಟಿಕೆಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಿದ್ದರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.


 ಎಚ್‌.ಡಿ. ಕೋಟೆ :  ದಿ. ಆರ್‌. ಧ್ರುವನಾರಾಯಣ್‌ ಅವರು ಪಕ್ಷದ ಸಿದ್ದಾಂತ ಒಪ್ಪಿ ವಿದ್ಯಾರ್ಥಿ ದೆಸೆಯಿಂದಲೂ ಪಕ್ಷದ ಚಟುವಟಿಕೆಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಿದ್ದರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ… ಅವರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Latest Videos

undefined

ಚಾಮರಾಜನಗÃ ಭಾಗÜದಲ್ಲಿ ಎಚ್‌.ಎಸ್‌. ಮಹದೇವ ಪ್ರಸಾದ್‌ ನಂತರ ಆರ್‌. ಧ್ರುವನಾರಾಯಣ… ಪಕ್ಷ ಬೆಳಸಿದರು. ಇದರಿಂದ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಿತ್ತು. ಅವರ ನಿಧನದಿಂದ ದೊಡ್ಡ ಶಕ್ತಿ ಕಡಿಮೆ ಆಗಿದೆ. ಧ್ರುವನಾರಾಯಣ…ಗೆ ಅವರ ಜಾಗ ತುಂಬಲು ಅವರ ಮಗನಿಗೆ ಎಲ್ಲ ಸಹಕಾರ ನೀಡಿ ಪ್ರಯತ್ನ ಮಾಡುತ್ತೇವೆ ಎಂದರು.

ಅವರಲ್ಲಿ ದೂರ ದೃಷ್ಟಿ, ಬಡವರ ಬಗ್ಗೆ ಕಾಳಜಿ, ಜಾತ್ಯತೀತವಾಗಿ ಎಲ್ಲ ವರ್ಗದವರನ್ನು ಜೊತೆಯಾಗಿ ತೆಗೆದುಕೊಂಡು ಹೋಗುತ್ತಿದ್ದರು. ಎಚ್‌.ಡಿ. ಕೋಟೆ ಅವರಿಗೆ ಹೆಚ್ಚು ಇಷ್ಟ, ಅನಿಲ… ಕಂಡರೆ ಪ್ರೀತಿ ಜಾಸ್ತಿ, ಅನಿಲ…ಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದರು. ಅನಿಲ… ಚಿಕ್ಕಮಾದು ಪ್ರತಿಪಕ್ಷದ ಶಾಸಕರಾಗಿದ್ದರು ಸಹ ತಾಲೂಕಿನಲ್ಲಿ ಜನಪರ ಕೆಲಸಗಳನ್ನ ಮಾಡಿದ್ದಾರೆ, ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಅನಿಲ… ಈ ತಾಲೂಕಿನ ಶಾಸಕರಾಗಿದ್ದರೆ, ತಾಲೂಕಿನ ಅಭಿವೃದ್ಧಿಗಾಗಿ ಅವರು ಬೇಡಿಕೆ ಇಟ್ಟಹಣವನ್ನು ಸಂಪೂರ್ಣ ಮಂಜೂರು ಮಾಡಿಕೊಡಲಾಗುತ್ತಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ, ತಾಲೂಕಿನ ಜನತೆ ಈ ಬಾರಿಯೂ ಸಹ ಅನಿಲ… ಚಿಕ್ಕಮಾದು ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವುದರಿಂದ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ನಮ್ಮ ತಂದೆಯಂತೆ ನನ್ನ ಮೇಲೂ ನಂಬಿಕೆಯಿಡಿ ಉಳಿಸಿಕೊಳ್ಳುತ್ತೇನೆ: ದರ್ಶನ್‌ ಧ್ರುವನಾರಾಯಣ

ಧ್ರುವನಾರಾಯಣ… ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಾಣಿಸಿಕೊಂಡಂತಹ ವ್ಯಕ್ತಿಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಅವರಿಗೆ ಕೆಲಸ ಇಲ್ಲದ ದಿನವೇ ಇರಲಿಲ್ಲ. ಅದು ಕಳೆದ ಚುನಾವಣೆಯಲ್ಲಿ ಅನಿಲ… ಸೂಚಿಸಿದ ವ್ಯಕ್ತಿ ಅವರೆ, ಮುಂದೆ ಶಾಸಕರಾಗಿ ಆಯ್ಕೆ ಆಗುವ ಕನಸು ಇತ್ತು. ದರ್ಶನ್‌ ದುಃಖದಲ್ಲಿ ಇದ್ದರು ಚುನಾವಣೆಗೆ ನಿಲ್ಲಲು ನಾನೇ ಹೇಳಿದ್ದೇನೆ. ಧ್ರುವನಾರಾಯಣ… ಆಸೆ ಏನು ಇತ್ತು ಅದನ್ನು ನಾವು ಈಡೇರಿಸುವ ಕನಸು ನನಸು ಮಾಡಬೇಕು. ಹುಟ್ಟು ಸಾವು ನಡುವೆ ಜೀವನ ಸಾರ್ಥಕ ಗೊಳಿಸುವ ಕೆಲಸ ಮಾಡಬೇಕು. ಸಮಾಜ ಮುಖಿಯಾಗಿ ಕೆಲಸ ಮಾಡಬೇಕು, ರಾಜಕಾರಣದಲ್ಲಿ ಈ ರೀತಿ ವ್ಯಕ್ತಿ ಸರಳ, ಅಪರೂಪದ ರಾಜಕಾರಣಿ, ರಾಜಕೀಯ ಇತಿಹಾಸದಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಪ್ರತಿದಿನ ಮಾಡುತ್ತಿದ್ದರು. ಕೊಟ್ಟಜವಬ್ದಾರಿಯನ್ನು ಕೆಲಸ ಮಾಡುತ್ತಿದ್ದರು. ನಿತ್ಯ ಪ್ರವಾಸ ದಲ್ಲಿ ಇರುತ್ತಿದ್ದರು. ನನ್ನ ಜೊತೆ ಯಾವಾಗಲು ನಿಕಟವಾದ ಸಂಪರ್ಕ ಹೊಂದಿದ್ದರು. ಮನೆ ಕೆಲಸ ಬದಿಗಿಟ್ಟು ಪಕ್ಷದ ಮತ್ತು ಜನರ ಕೆಲಸ ದೇವರ ಕೆಲಸ ಎಂದು ಮಾಡುತ್ತಿದ್ದರು. ಸಮಾಜಕ್ಕೆ, ಕಾಂಗ್ರೆಸ್‌ಗೆ ಅವರ ಸಾವಿನಿಂದ ನಷ್ಟಆಗಿದೆ ಎಂದು ಅವರು ಹೇಳಿದರು.

ಶಾಸಕ ಅನಿಲ… ಚಿಕ್ಕಮಾದು ಮಾತನಾಡಿ, ಧ್ರುವನಾರಾಯಣ್‌ ಅವರು ತಾಲೂಕಿನಲ್ಲಿ ಏಕಲವ್ಯ, ಆದರ್ಶ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ನಮ್ಮ ತಾಲೂಕಿನಲ್ಲಿ ಎಲ್ಲ ಜನತೆಗೂ ಚಿರಪರಿಚಿತ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು.

ನಂಜನಗೂಡಿಂದ ದರ್ಶನ್ - ಅಪ್ಪನಿಗಾಗಿ ತ್ಯಾಗ ಮಾಡಿರುವ ಯತೀಂದ್ರ ಸ್ಪರ್ಧೆ ಎಲ್ಲಿಂದ?

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೋಳಿ ಮಾತನಾಡಿ, ಸರಳ ಜೀವಿ, ಅಭಿವೃದ್ಧಿಯ ಬಗ್ಗೆ, ದೀನ ದಲಿತರ ಬಗ್ಗೆ ಕಾಳಜಿ ಇತ್ತು, ದಣಿವು ಅರಿಯದ ರಾಜಕಾರಣಿ, ಪಕ್ಷಕ್ಕೆ ಹಾಗೂ ಸಮಾಜ ಮುಖಿ ಕೆಲಸ ಮಾಡುತ್ತಿದ್ದರು. ಅವರ ಸ್ಥಾನ ತುಂಬಲು ಯಾರಿಂದಲು ಸಾಧ್ಯವಿಲ್ಲ, ಅವರ ಪುತ್ರನಿಗೆ ಬೆನ್ನಲುಬಾಗಿ ಇದ್ದು ಕೆಲಸ ಮಾಡುವುದಾಗಿ ತಿಳಿಸಿದರು. ದರ್ಶನ್‌ ಧ್ರುವನಾರಾಯಣ… ಮಾತನಾಡಿ, ನನ್ನ ತಂದೆ ಅಗಲಿಕೆ ಆಗಿರುವುದು ನಂಬಲು ಸಾಧ್ಯ ಇಲ್ಲ, ನಮ್ಮ ಜೊತೆಗೆ ಅವರು ಇದ್ದಾರೆ. ನನಗೆ ಸಿದ್ದರಾಮಯ್ಯ, ಜಾರಕಿಹೋಳಿ, ಅನಿಲ… ಚಿಕ್ಕಮಾದು ಹಾಗೂ ಪಕ್ಷದ ಎಲ್ಲ ಹಿರಿಯರ ಮಾರ್ಗ ದರ್ಶಕರಾಗಿ ದಾರಿತೋರಿಸಬೇಕು ಎಂದರು. ನಮ್ಮ ಕುಟುಂಬ ವರ್ಗದವರು ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಕೃತಜ್ಞತೆ ಸಲ್ಲಿಸಿದರು.

ಎಚ್‌.ಡಿ. ಕೋಟೆ ಮತ್ತು ಸರಗೂರು ಬ್ಲಾಕ್‌ ಅಧ್ಯಕ್ಷ ಏಜಾಜ… ಪಾಶ, ಮಾದಪ್ಪ, ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್‌, ವಿಧಾನಪರಿಷತ್‌ ಸದಸ್ಯ ಡಾ. ತಿಮ್ಮಯ್ಯ, ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್‌, ಪುರಸಭೆಯ ಉಪಾಧ್ಯಕ್ಷ ಗೀತಾ ಗಿರಿಗೌಡ, ಸದಸ್ಯರಾದ ಎಚ್‌.ಸಿ. ನರಸಿಂಹಮೂರ್ತಿ, ಮಧು, ರಾಜು ಪುಟ್ಟಬಸವನಾಯಕ, ಅಶೋಕ್‌ ಪಟ್ಟಣ…, ಗಣೇಶ್‌, ಜಿಪಂ ಮಾಜಿ ಸದಸ್ಯರಾದ ಎಚ್‌.ಸಿ. ಮಂಜುನಾಥ್‌, ರವಿ, ಚಿಕ್ಕವೀರ ನಾಯಕ, ರಾಮಪ್ಪ, ಈರೇಗೌಡ, ಯುವ ಕಾಂಗ್ರೆಸ್‌ ಅಧ್ಯಕ್ಷ ನಯಾಜ…, ಶ್ರೀನಿವಾಸ್‌, ಪ್ರದೀಪ್‌, ಮಲ್ಲೇಶ್‌, ಸೋಮೇಶ್‌, ತಾಲೂಕಿನ ಧ್ರುವನಾರಾಯಣ… ಅಭಿಮಾನಿ ಬಳಗದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

click me!