ಪಿರಿಯಾಪಟ್ಟಣ ತಾಲೂಕಿನಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿ ತೋರಿಸಿಕೊಟ್ಟಿದ್ದೇನೆ ಎಂದು ಶಾಸಕ ಕೆ. ಮಹದೇವ್ ಹೇಳಿದರು. ಸಮೀಪದ ಶಾನುಭೋಗನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿ ತೋರಿಸಿಕೊಟ್ಟಿದ್ದೇನೆ ಎಂದು ಶಾಸಕ ಕೆ. ಮಹದೇವ್ ಹೇಳಿದರು. ಸಮೀಪದ ಶಾನು ಭೋಗನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಪಕ್ಷ ಈ ಬಾರಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ, ಆದ್ದರಿಂದ ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಗೆಡಿಸಿದೆ, ಮೈಸೂರಿನಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ರೈತ ಕುಟುಂಬದವರು ವ್ಯಕ್ತಪಡಿಸಿದ ಪ್ರೀತಿ ಎಂದಿಗೂ ಮರೆಯಲಾಗುವುದಿಲ್ಲ, ಅದರಂತೆ ಏ. 6 ರಂದು ಎಚ್.ಡಿ. ಕುಮಾರಸ್ವಾಮಿ ಅವರು ಪಿರಿಯಾಪಟ್ಟಣಕ್ಕೆ ಆಗಮಿಸಲಿದ್ದು, ತಾಲೂಕಿನಾದ್ಯಂತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ರೈತ ಬಾಂಧವರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿಮಾತನಾಡಿ, ನಮ್ಮ ಪಕ್ಷಕ್ಕೆ ದೇವೇಗೌಡರೇ ಸ್ಪೂರ್ತಿ, ಅವರು ಹಾಕಿಕೊಟ್ಟಮಾರ್ಗದಲ್ಲಿ ಶಾಸಕ ಕೆ. ಮಹದೇವ್ ಹಾಗೂ ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ರವರು ಸಮಯ ವ್ಯರ್ಥ ಮಾಡದೆ ತಾಲೂಕಿನ ಅಭಿವೃದ್ಧಿಗೆ ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ, ತಾಲೂಕಿನಲ್ಲಿ ಸರಿಸುಮಾರು 1,200 ಕೋಟಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿರುವ ಅವರಿಗೆ ನಿಮ್ಮ ಮತವನ್ನು ಹಾಕಿ ಅವರನ್ನು ಮತ್ತೊಮ್ಮೆ ಜಯಶೀಲರನ್ನಾಗಿ ಮಾಡಬೇಕೆಂದು ಸಭೆಯಲ್ಲಿ ವಿನಂತಿಸಿಕೊಂಡರು.
ಮೈಮಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ಮಾಜಿ ಶಾಸಕರು ಹಾಗೂ ಅವರ ಪುತ್ರ ನಮ್ಮ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ, ನೀವು ಜನರಿಗೆ ಮಾಡಬೇಕೆಂದಿರುವ ಕೆಲಸಗಳನ್ನು ಜನರ ಮುಂದೆ ಇಟ್ಟು ಮತ ಕೇಳಿ ಅದು ಬಿಟ್ಟು ನನ್ನ ಹಾಗೂ ನಮ್ಮ ತಂದೆಯವರ ಜಪ ಮಾಡಬೇಡಿ, ತಾಲೂಕಿನಲ್ಲಿ ಶಾಸಕ ಕೆ. ಮಹದೇವ ಅವರು ಅಧಿಕಾರ ಸ್ವೀಕಾರ ಆದಾಗಿನಿಂದ ತಾಲೂಕಿನಾದ್ಯಂತ ಮೂಲಭೂತ ಸೌಕರ್ಯಗಳು ಕೊರತೆಯಾಗದಂತೆ ನೋಡಿಕೊಂಡಿದ್ದಾರೆ ಎಂದರು.
ಇದೇ ವೇಳೆ ವಿವಿಧ ಸಮುದಾಯದ ಮುಖಂಡರು, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಐಲಾಪುರ ರಾಮು, ಕೃಷ್ಣಪ್ಪ, ವಿದ್ಯಾಶಂಕರ್, ಮೋಹನ್, ಅಶೋಕ್ ಕುಮಾರ್, ಗಿರೀಶ್, ಚಂದ್ರಶೇಖರ್, ಬಸವರಾಜು, ಇಂದ್ರೇಶ್, ಹೇಮಂತ… ಕುರ್ಮಾ, ರುದ್ರಮ್ಮ ನಾಗಯ್ಯ, ಶೇಖರ್ ಇದ್ದರು.
ಮುಂದಿನ ಬಾರಿಯೂ ಶಾಸಕನಾಗುತ್ತೇನೆ
ಬೈಲಕುಪ್ಪೆ : ಚೌಡೇಶ್ವರಿಯ ಕೃಪಾ ಕಟಾಕ್ಷದಿಂದ ಮುಂದಿನ ಬಾರಿಯೂ ತಾಲೂಕಿನ ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಮತ್ತು ಕೊಪ್ಪ ಗ್ರಾಮದ ಗೆರಾಸಿಯ ಕಾಲೋನಿಯಿಂದ ಚೌಡಮ್ಮ ದೇವಸ್ಥಾನದವರೆಗೆ ಸುಮಾರು 1.14 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದಲ್ಲಿರುವ ಸಚಿವರೊಂದರಿಗೆ ಉತ್ತಮ ಒಡನಾಟ ಹೊಂದಿಕೊಂಡು ತಾಲೂಕಿಗೆ ಬೇಕಾಗುವಂತಹ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು, ತಾಲೂಕಿನ್ನೆಲ್ಲೆಡೆ ತಂದಂತಹ ಅನುದಾನವನ್ನು ಸರ್ವ ಜನಾಂಗಕ್ಕೂ ಅನುಕೂಲವಾಗುವಂತೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ಕಳೆದ ಎರಡು ವರ್ಷದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಪ್ರತಿಯೊಬ್ಬರಿಗೂ ಇಷ್ಟವಾಗಿದೆ ಎಂಬ ನಂಬಿಕೆ ಮೇಲೆ ಮುಂಬರುವ ಚುನಾವಣೆಯಲ್ಲಿ 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕೊಪ್ಪ ಗ್ರಾಪಂ ಅಧ್ಯಕ್ಷ ರೇಣುಕಾ ಸ್ವಾಮಿ, ಪಿಡಿಒ ಬೋರೇಗೌಡ, ಕೊಪ್ಪ ಗ್ರಾಪಂ ಸದಸ್ಯರು, ಬೈಲಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ಜೆಡಿಎಸ್ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
ರಾಜಕೀಯ ಲಾಭ ಪಡೆಯಲು ಮಹದೇವ್ ಹವಣಿಸುತ್ತಿದ್ದಾರೆ
ಪಿರಿಯಾಪಟ್ಟಣ : ಅಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸುವ ಮೂಲಕ ಚುನಾವಣೆಯ ಸಂದರ್ಭ ರಾಜಕೀಯ ಲಾಭ ಪಡೆದುಕೊಳ್ಳಲು ಶಾಸಕ ಕೆ. ಮಹದೇವ್ ಹವಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಟ್ಟಣ ಘಟಕ ಅಧ್ಯಕ್ಷ ಅಶೋಕ್ ಕುಮಾರ್‌ಗೌಡ ಆರೋಪಿಸಿದರು.