Religious Conversion: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒಪ್ಪಿಗೆ ನೀಡಲಿ: ಮುತಾಲಿಕ್‌

By Kannadaprabha NewsFirst Published Nov 26, 2021, 2:22 PM IST
Highlights

*  ದೇಶದ ಮೂರ್ನಾಲ್ಕು ರಾಜ್ಯಗಳಲ್ಲಿ ಮತಾಂತರ ಕಾಯ್ದೆ ಜಾರಿಗೆ ತರಲಾ​ಗಿ​ದೆ
*  ಕರ್ನಾಟಕದಲ್ಲೂ ಮತಾಂತರ ಕಾಯ್ದೆ ಜಾರಿಗೆ ತರಬೇಕು
*  ಮತಾಂತರ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ 
 

ವಿಜಯಪುರ(ನ.26): ಬೆಳಗಾವಿ(Belagavi) ಅಧಿವೇಶನದಲ್ಲಿ(Session) ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಅವರು ಆಗ್ರಹಿಸಿದ್ದಾರೆ. 

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತ​ನಾ​ಡಿ​ದ​ರು. ರಾಜ್ಯದಲ್ಲಿ(Karnataka) ದೊಡ್ಡ ಪ್ರಮಾಣದಲ್ಲಿ ಮತಾಂತರ(Conversion) ನಡೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಈಗಾಗಲೇ ಸ್ವಾಮೀಜಿಗಳ ನೇತೃತ್ವದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ದೇಶದ ಮೂರ್ನಾಲ್ಕು ರಾಜ್ಯಗಳಲ್ಲಿ ಮತಾಂತರ ಕಾಯ್ದೆಯನ್ನು ಜಾರಿಗೆ ತರಲಾ​ಗಿ​ದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಮತಾಂತರ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

Conversion Case: ನೂರಾರು ಹಿಂದೂ ಹೆಣ್ಮಕ್ಕಳ ಮತಾಂತರ, ದೂರು ದಾಖಲು ಬಯಲಾಯ್ತು ಶಾಕಿಂಗ್ ಮಾಹಿತಿ!

ಮತಾಂತರ ಯಾವುದೇ ಒಂದು ಜಾತಿಗೆ(Caste) ಸೀಮಿತವಾಗಿಲ್ಲ. ಚಿತ್ರದುರ್ಗದಲ್ಲಿ 1 ಲಕ್ಷ ಲಿಂಗಾಯತರು ಮತಾಂತರಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳು(Brahmin Families) ಮತಾಂತರಗೊಂಡಿವೆ ಎಂದರು.

ಇದುವರೆಗೆ ಬಡವರು, ಅನಕ್ಷರಸ್ಥರನ್ನು ಮಾತ್ರ ಮತಾಂತರ ಮಾಡಲಾಗುತ್ತಿತ್ತು. ಆದರೆ ಈಗ ಅದು ಎಲ್ಲ ಸಮುದಾಯಗಳಿಗೂ ವ್ಯಾಪಿಸಿದೆ. ರಾಜ್ಯದಲ್ಲಿ ಮತಾಂತರ ವ್ಯಾಪಕವಾಗಿ ಹರಡಿದೆ. ಕ್ರಿಶ್ಚಿಯನ್‌(Christian) ಮತಾಂತರ ಹಳ್ಳಿ ಹಳ್ಳಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಹೊಸದುರ್ಗ ಶಾಸಕ ಗೂಳಿಹಟ್ಟಿಶೇಖರ ಅವರು ಸದನದಲ್ಲಿ ಧ್ವನಿ ಎತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಮತಾಂತರ ಆದವರನ್ನು ವಾಪಸ್‌ ಕರೆ ತರುವಂತೆ ಪತ್ರ ಬರೆದಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದರು. ಮತಾಂತರ ವಿರುದ್ಧ ಮಠಾಧೀಶರು ಸಹ ಮಠ ಬಿಟ್ಟು ಹೊರಗೆ ಬರಬೇಕು. ವಾರಕ್ಕೆ ಒಂದು ಸಲವಾದರೂ ಕೇರಿ, ಗಲ್ಲಿಗಳಿಗೆ ತೆರಳಿ ಮತಾಂತರಗೊಂಡವರನ್ನು ವಾಪಸ್‌ ತರುವ ಕೆಲಸ ನಡೆಯಬೇಕು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ:

ರಾತ್ರಿ 10 ಗಂಟೆ ನಂತರ ಹಾಗೂ ಬೆಳಗ್ಗೆ 6 ಗಂಟೆ ಒಳಗೆ ಯಾವುದೇ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌(Supreme Court) ಆದೇಶ ಮಾಡಿದೆ. ಅದು ಮಸೀದಿ(Masjid), ಚರ್ಚ್‌(Chruch) ಹಾಗೂ ಮಂದಿರ(Temple) ಯಾವುದೇ ಆಗಿರಲಿ. ರಾತ್ರಿ 10 ಗಂಟೆ ನಂತರ ಹಾಗೂ ಬೆಳಗ್ಗೆ 6 ಒಳಗೆ ಧ್ವನಿವರ್ಧಕ ಬಳಸುವಂತಿಲ್ಲ. ಆದರೆ ಮಸೀದಿಗಳಲ್ಲಿ ದಿನಂಪ್ರತಿ ನಸುಕಿನ 5 ಗಂಟೆಗೆ ಧ್ವನಿವರ್ಧಕ ಬಳಸುವ ಮೂಲಕ ಸುಪ್ರೀಂ ಕೋರ್ಟ್‌ನ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಎಲ್ಲ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಇನ್ನು ಡಿಸೆಂಬರ್‌ ಎರಡನೇ ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುವುದು. ಈ ಸಂಬಂಧ ಯಾವುದೇ ಅನಾಹುತ ಆಗದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದರು.

ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಪ್ರಮುಖ ನೀಲಕಂಠ ಕಂದಗಲ್‌, ಶ್ರೀರಾಮ ಸೇನೆ ವಿಜಯಪುರ ಜಿಲ್ಲಾ ಅಧ್ಯಕ್ಷ ರಾಕೇಶ ಮಠ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಮುತಾಲಿಕ್ ಕಿಡಿ

ಬ್ಲ್ಯಾಕ್‌ ಮ್ಯಾಜಿಕ್‌ ಮೂಲಕ ಮತಾಂತರ: ಪ್ರಮೋದ್‌ ಮುತಾಲಿಕ್‌

ಯಾದಗಿರಿ: ಬ್ಯ್ಲಾಕ್‌ ಮ್ಯಾಜಿಕ್‌(Black Magic)  ಮೂಲಕ ಮುಗ್ಧರ ಮನಸ್ಸನ್ನು ಬೇರೆಡೆ ಕೇಂದ್ರೀಕರಿಸಿ ಮತಾಂತರ ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌, ಕ್ರಿಶ್ಚಿಯನ್‌ ಧರ್ಮದ(Christianity) ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ನವರ(Congress) ಕುಮ್ಮಕ್ಕಿನಿಂದ ಮತಾಂತರ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ಓಟ್‌ ಬ್ಯಾಂಕ್‌ಗೋಸ್ಕರ್‌(Vote Bank) ಕಾಂಗ್ರೆಸ್‌ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ ಅವರು, ಇಲ್ಲಿಯವರೆಗೆ ಬಡವರಿಗೆ ಮಾತ್ರ ಸೀಮಿತವಾಗಿದಂತಿದ್ದ ಮತಾಂತರ ಈಗ ಎಲ್ಲಾ ವರ್ಗಕ್ಕೂ ಆವರಿಸುತ್ತಿದೆ, ದಾವಣಗೆರೆಯಲ್ಲಿ(Davangere) ವೀರಶೈವ ಜನಾಗದವರನ್ನೂ ಸಹ ಮತಾಂತರ ಮಾಡಲಾಗಿದೆ, ಬೆಳಗಾವಿ ಅ​ಧಿವೇಶದಲ್ಲಿ ಸರ್ಕಾರ ಕಾನೂನು ಜಾರಿಗೆ ತರಬೇಕು ಎಂದ ಅವರು, ಮತಾಂತರ ನಿಷೇಧ ಕಾಯಿದೆ ಜಾರಿಗೆ ಬರದಿದ್ದರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
 

click me!