MLC Election: ನೀತಿ ಸಂಹಿತೆ ಮುಗಿದ ಬಳಿಕ ಮೀಸಲಾತಿ ಗ್ರಾಪಂ ಅಭಿಯಾನ: ಕೂಡಲ ಶ್ರೀ

By Kannadaprabha News  |  First Published Nov 26, 2021, 1:06 PM IST

*   ಡಿ. 10ರ ಬಳಿಕ ಮತ್ತೆ ಅಭಿಯಾನ ಆರಂಭ
*  ಯಾವುದೇ ಚಳವಳಿಗಳು ನಿಂತರೂ ಪಂಚಮಸಾಲಿ ಮೀಸಲಾಯಿತಿ ಚಳವಳಿ ನಿಲ್ಲುವುದಿಲ್ಲ
*  ಹೋರಾಟಗಾರರ ಸಹನೆ ಕಟ್ಟೆ ಒಡೆಯುವ ಮೊದಲೇ ಸರ್ಕಾರ ಮೀಸಲಾತಿ ನೀಡಬೇಕು
 


ಮುಂಡರಗಿ(ನ.26): ವಿಧಾನ ಪರಷತ್‌ ಚುನಾವಣೆಯ(Vidhan Parishat Election) ನೀತಿ ಸಂಹಿತೆಯ ನಂತರ ಮತ್ತೆ ಪಂಚಮಸಾಲಿ ಮೀಸಲಾತಿ ಗ್ರಾಮ ಪಂಚಾಯಿತಿ ಅಭಿಯಾನ ಮುಂದುವರಿಯಲಿದೆ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ. 13ರಂದು ಶಿವಮೊಗ್ಗದ ಅಕ್ಕಮಹಾದೇವಿ(Akka Mahadevi) ಜನ್ಮಸ್ಥಳ ಉಡತಡಿಯಿಂದ ಈಗಾಗಲೇ ಅಭಿಯಾನ ಆರಂಭಿಸಲಾಗಿದೆ. ದಾವಣಗೆರೆ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಅಭಿಯಾನ ನಡೆಸಲಾಗಿತ್ತು. ವಿಪ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ(Code of Conduct) ಜಾರಿಯಲ್ಲಿ ಇರುವುದರಿಂದ ಸ್ಥಗಿತಗೊಳಿಸಲಾಗಿದೆ. ಡಿ. 10ರ ಬಳಿಕ ಮತ್ತೆ ಅಭಿಯಾನ(Campaign) ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

Latest Videos

undefined

ಮೀಸಲಾತಿ ಸಿಗುವರೆಗೂ ಹೋರಾಟ ನಿಲ್ಲದು: ಜಯಮೃತ್ಯುಂಜಯ ಸ್ವಾಮೀಜಿ

ದೇಶದಲ್ಲಿ ಯಾವುದೇ ಚಳವಳಿಗಳು ನಿಂತರೂ ಪಂಚಮಸಾಲಿ(Panchamasali) ಮೀಸಲಾಯಿತಿ(Reservation) ಚಳವಳಿ ನಿಲ್ಲುವುದಿಲ್ಲ. ಅ. 1ರಿಂದ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ಸೇರಿದಂತೆ ಹೋರಾಟ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಚಿವ ಸಿ.ಸಿ ಪಾಟೀಲ(CC Patil) ಅವರ ನೇತೃತ್ವದಲ್ಲಿ ಸಭೆ ನಡೆಸಿ ವರದಿ ಬಂದ ಬಳಿಕ ಮೀಸಲಾತಿ ನೀಡಲಾಗುವುದು ಎಂದು ತಿಳಿಸಿದ್ದರಿಂದ ಸತ್ಯಾಗ್ರಹ ಕೈಬಿಡಲಾಗಿತ್ತು. ಜ. 1ರ ವರೆಗೆ ಮೀಸಲಾತಿ ನೀಡಲು ಸರ್ಕಾರ ಕಾಲಾವಕಾಶ ನೀಡಿದ್ದು ಬಳಿಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal), ವಿಜಯಾನಂದ ಕಾಶಪ್ಪನವರ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೂಡಿ ಸಭೆ ನಡೆಸಿ ಮುಂದಿನ ಮುಂದಿನ ಹೋರಾಟದ ಬಗ್ಗೆ ತಿಳಿಸಲಾಗುವುದು ಎಂದರು.

ಹಿಂದುಳಿದ ವರ್ಗದ ಆಯೋಗ ಈಗಾಗಲೇ ಬೆಳಗಾವಿ ಹಾಗೂ ವಿಜಯಪುರದಲ್ಲಿ ಸಭೆ ನಡೆಸಲು ಬಂದಿದ್ದರು. ಈ ಎರಡು ಬಾರಿಯೂ ಉಪ ಚುನಾವಣೆ(Byelection) ಹಾಗೂ ವಿಪ ಚುನಾವಣೆ ನೆಪವೊಡ್ಡಿ ಮುಂದೂಡಲಾಗಿದೆ. ಇದನ್ನು ನೋಡಿದರೆ ವಿಳಂಬವಾಗುವ ಸಾಧ್ಯತೆ ಇದೆ. ಹೋರಾಟಗಾರರ ಸಹನೆ ಕಟ್ಟೆ ಒಡೆಯುವ ಮೊದಲೆ ಸರ್ಕಾರ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ. ಪಾಟೀಲ ಅವರ ಮೇಲೆ ನಂಬಿಕೆ ಇದ್ದು ಶೀಘ್ರ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ. ಈ ವೇಳೆ ರಜನಿಕಾಂತ ದೇಸಾಯಿ, ಸುಭಾಷ ಕೊಪ್ಪದ ಇದ್ದರು.

ಪಂಚಮಸಾಲಿ ಹೋರಾಟ ಹತ್ತಿಕ್ಕಲು ಷಡ್ಯಂತ್ರ: ಕೂಡಲ ಶ್ರೀ

ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಸ್ವಾಮೀಜಿ..!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದು, ಈ ಕುರಿತು ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. 

ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಬೆಂಗಳೂರಿಗೆ(Bengaluru) ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾಗೆ ಕರೆಯಿಸಿ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ವಿನಯ ಕಲಕರ್ಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಇದ್ದರು. ಹಾಗಾಗಿ, ಮುಖ್ಯಮಂತ್ರಿ ಮನವಿ ಮೇರೆಗೆ ಮತ್ತೆ ಮೂರು ತಿಂಗಳು ಕಾಲಾವಕಾಶ ನೀಡಿದ್ದೇವೆ ಎಂದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಿಗುವ ತನಕ ಹೋರಾಟ ನಿಲ್ಲಿಸಿಲ್ಲ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಹಳ್ಳಿ ಹಳ್ಳಿಯಲ್ಲಿ ಅಭಿಯಾನ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಹಳ್ಳಿಗಳಲ್ಲಿ ಈ ಅಭಿಯಾನ ಮಾಡಲಾಗಿದೆ. ವಿಧಾನ ಪರಿಷತ್‌ ಚುನಾವಣೆ ನೀತಿಸಂಹಿತೆ ಇರುವುದರಿಂದ ಅಭಿಯಾನ ಸ್ಥಗಿತಗೊಳಿಸಲಾಗಿದೆ ಎಂದರು.
 

click me!