ಸೇವಾ ನ್ಯೂನತೆ: ಜಿಯೋ ಕಂಪನಿಗೆ ಸಿಮ್ ಸಕ್ರಿಯಗೊಳಿಸಲು ಗ್ರಾಹಕ ಆಯೋಗ ನಿರ್ದೇಶನ

By Ravi Janekal  |  First Published Sep 1, 2023, 6:32 PM IST

ಧಾರವಾಡದ  ಲಕ್ಕಪ್ಪ ಬೆನ್ನಿ ಅನ್ನುವವರು 2017ರಲ್ಲಿ ರಿಲೈನ್ಸ್ ಪ್ರೊಜೆಕ್ಟ್ ಸಂಸ್ಥೆಯಿಂದ 6362626262 ನೇ ನಂಬರದ ಜಿಯೋ ಸಿಮ್ ಖರೀದಿಸಿದ್ದರು ಕೋವಿಡ್ 19 ರ ಅವಧಿಯಲ್ಲಿ ಅವರು ಸದರಿ ಸಿಮ್‍ನ್ನು ಕಳೆದುಕೊಂಡಿದ್ದರು ಅದನ್ನು ಮತ್ತೆ ಸಕ್ರಿಯಗೊಳಿಸದೆ ಸೇವಾ ನ್ಯೂನತೆವೆಸಗಿದ ರಿಲಯನ್ಸ್ ಕಂಪನಿಗೆ ಸಕ್ರಿಯಗೊಳಿಸುವಂತೆ ಜಿಲ್ಲಾ ಗ್ರಾಹಕರ ಕೋರ್ಟ್ ನಿರ್ದೇಶನ ನೀಡಿದೆ


 ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಸೆ.1): ಧಾರವಾಡದ ಮಾಳಮಡ್ಡಿಯ ನಿವಾಸಿ ಲಕ್ಕಪ್ಪ ಬೆನ್ನಿ ಅನ್ನುವವರು 2017 ಇಸವಿಯಲ್ಲಿ ಧಾರವಾಡದ ರಿಲೈನ್ಸ್ ಪ್ರೊಜೆಕ್ಟ್ ಸಂಸ್ಥೆಯಿಂದ 6362626262 ನೇ ನಂಬರದ ಜಿಯೋ ಸಿಮ್ ಖರೀದಿಸಿದ್ದರು ಕೋವಿಡ್ 19 ರ ಅವಧಿಯಲ್ಲಿ ಅವರು ಸದರಿ ಸಿಮ್‍ನ್ನು ಕಳೆದುಕೊಂಡಿದ್ದರು ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಸಿಮ್ ಖರೀಧಿಸಿದ ಧಾರವಾಡದ ರಿಲೈನ್ಸ್ ಪ್ರೊಜೆಕ್ಟ್ ಸಂಸ್ಥೆ ಮತ್ತು ಜೀಯೋ ಕಸ್ಟಮರ್ ಕೇರ್(jio customercare) ಗೆ ಸಾಕಷ್ಟು ವಿನಂತಿಸಿದ್ದರು ಆದರೂ ಎದುರುದಾರರು ದೂರುದಾರರ ಮೇಲೆ ಹೇಳಿದ ನಂಬರಿನ ಜಿಯೋ ಸಿ(JIO sim)ಮ್‍ನ್ನು ಸಕ್ರಿಯಗೊಳಿಸಿರಲಿಲ್ಲ. ಅದರಿಂದ ತನ್ನ ದೈನಂದಿನ ಜೀವ ನಿರ್ವಹಣೆ ಮತ್ತು ಬ್ಯಾಂಕ್ ಇತ್ಯಾದಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು ಎಲ್ಲ ಎದುರುದಾರರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ದೂರುದಾರರು ಗ್ರಾಹಕ ರಕ್ಷಣಾಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ(Dharwad District Consumer Commission)ಕ್ಕೆ ದೂರು ಸಲ್ಲಿಸಿದ್ದರು.

Tap to resize

Latest Videos

ಮಾತು ತಪ್ಪಿದ ಗೋಲ್ಡನ್‌ ಹೋಮ್ಸ್‌ ಬಿಲ್ಡ​ರ್‌ಗೆ ಕ್ರಯ ಪತ್ರ ಬರೆದು ಕೊಡಲು ಆಯೋಗದ ಆದೇಶ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಅ ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ದೂರುದಾರ 2 ಮತ್ತು 3ನೇ ಎದುರುದಾರರ ಜಿಯೋ ಕಂಪನಿಯ ಸಿಮ್‍ನ್ನು ಧಾರವಾಡದ ರಿಲೈನ್ಸ್ ಪ್ರೊಜೆಕ್ಟ್ ಸಂಸ್ಥೆ(Reliance project company)ಯಿಂದ 6362626262 ನೇ ನಂಬರಿನ ಜಿಯೊ ಸಿಮ್ ಖರೀದಿಸಿದ್ದರು. ಉಪಯೋಗಿಸುವಾಗ ದೂರುದಾರ ಆ ಸಿಮ್‍ನ್ನು  ಕಳೆದುಕೊಂಡಿದ್ದರಿಂದ ಅದನ್ನು ಮರು ಸಕ್ರಿಯಗೊಳಿಸಲು ಎದುರುದಾರರಿಗೆ ಕೇಳಿಕೊಂಡರೂ ಅವರ ಕೋರಿಕೆಯನ್ನು ಪರಿಗಣಿಸಲು ಎದುರುದಾರರು ವಿಫಲರಾಗಿರುವುದರಿಂದ ಅವರು ಗ್ರಾಹಕರಾದ ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

 

ಬೈಕ್‌ ಸುಟ್ಟು ಹೋದ ಪ್ರಕರಣ: ಕ್ಲೇಮು ತಿರಸ್ಕರಿಸಿದ್ದ ವಿಮಾ ಕಂಪನಿಗೆ ಬಿತ್ತು ಭಾರಿ ದಂಡ!

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಅದೇ ನಂಬರಗೆ ಸದರಿ ಸಿಮ್‍ನ್ನು ಸಕ್ರಿಯಗೊಳಿಸಬೇಕು ಅಂತಾ ಎದುರುದಾರರಿಗೆ ಆಯೋಗ ನಿರ್ಧೇಶನ ನೀಡಿದೆ ಸೇವಾ ನ್ಯೂನ್ಯತೆಗಾಗಿ 1ನೇ ಎದುರುದಾರರು ರೂ 10 ಸಾವಿರ ಪರಿಹಾರ ಮತ್ತು ರೂ.5000/- ಪ್ರಕರಣದ ಖರ್ಚನ್ನು ನೀಡುವಂತೆ ತೀರ್ಪಿನಲ್ಲಿ ತಿಳಿಸಿದೆ..

click me!