ಐತಿಹಾಸಿಕ ಹಂಪಿಯಲ್ಲಿ ಮತ್ತೆ ಅಕ್ರಮ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದ್ದು, ಸ್ಮಾರಕ ಪ್ರಿಯರು ಭಾರತೀಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಹೊಸಪೇಟೆ (ಫೆ.3) : ಐತಿಹಾಸಿಕ ಹಂಪಿಯಲ್ಲಿ ಮತ್ತೆ ಅಕ್ರಮ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದ್ದು, ಸ್ಮಾರಕ ಪ್ರಿಯರು ಭಾರತೀಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥ ಬೀದಿಯ ಸಾಲುಮಂಟಪದಲ್ಲಿ ನಿರ್ಮಿಸಲಾಗಿದ್ದ ಅಂಗಡಿ-ಮುಂಗಟ್ಟುಗಳನ್ನು 2009-10ರಲ್ಲಿ ಬಳ್ಳಾರಿ ಜಿಲ್ಲಾಡಳಿತ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ತೆರವು ಮಾಡಿತ್ತು. ಆ ಬಳಿಕ ಕೆಲ ಕಟ್ಟಡಗಳನ್ನು ಕೂಡ ದಿಟ್ಟತನದಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ತೆರವು ಮಾಡಿತ್ತು. ಈಗ ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಪ್ರಾಧಿಕಾರ ಹಂಪಿಯಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದರೂ ಸುಮ್ಮನಾಗಿದೆ ಎಂಬ ಆರೋಪ ಕೇಳಿ ಬಂದಿದೆ.
undefined
ಹೊಸಪೇಟೆ: ವೀಕೆಂಡ್-ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡು
ಅಕ್ರಮ ಕಟ್ಟಡಗಳ ತೆರವಿಗೆ ಈ ಹಿಂದೆ ದಿಟ್ಟತನ ತೋರಿದ್ದ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಈಗ ಕಣ್ಣೆದುರೇ ನಿರ್ಮಾಣ ಮಾಡುತ್ತಿದ್ದರೂ ಮೌನಕ್ಕೆ ಶರಣಾಗುತ್ತಿದೆ. ಹಂಪಿ,ಆನೆಗೊಂದಿ ಭಾಗದಲ್ಲಿ ರೆಸಾರ್ಚ್, ಹೋಂ ಸ್ಟೇ ಮತ್ತು ಹೋಟೆಲ್‌ಗಳನ್ನು ತೆರವು ಮಾಡಿ ಹೆಸರು ಮಾಡಿದ್ದ ಪ್ರಾಧಿಕಾರ ಈಗ ಮಾತ್ರ ಹಂಪಿಯಲ್ಲೇ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದರೂ ಮೌನಕ್ಕೆ ಶರಣಾಗಿದೆ. ಹಂಪಿ ಉತ್ಸವದಲ್ಲಿ ಬ್ಯುಸಿಯಾಗಿದ್ದ ಅಧಿಕಾರಿಗಳು,ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದರೂ ಅತ್ತ ಕಣ್ಣೆತ್ತಿಯೂ ತಿರುಗಿ ನೋಡುತ್ತಿಲ್ಲ ಎಂದು ಸ್ಮಾರಕ ಪ್ರೀಯರು ಹಾಗೂ ಇತಿಹಾಸ ಪ್ರೀಯರು ದೂರಿದ್ದಾರೆ.
ಹಂಪಿಯಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ ತಿಳಿಯಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಅವರಿಗೆ ಪೋನಾಯಿಸಿದರೂ ಕರೆ ಸ್ವೀಕಾರ ಮಾಡಲಿಲ್ಲ.
ಹಂಪಿ ಸ್ಮಾರಕ ವೀಕ್ಷಣೆಗೆ ಮೆಟ್ರೋ ಟ್ರೈನ್ ಮಾದರಿ ಮಿನಿ ಬಸ್..!
ಹಂಪಿಗೆ ಪ್ರವಾಸಿಗಳನ್ನು ಆಕರ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆ ರೂಪಿಸುತ್ತಿದ್ದರೂ ಇತ್ತ ಹಂಪಿಯಲ್ಲೇ ಸಿಮೆಂಟ್ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಮತ್ತು ಪುರಾತತ್ವ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.