ರಾಜ್ಯ ಜೀವ ವೈವಿಧ್ಯ ಮಂಡಳಿಯು ರಾಮತೀರ್ಥ-ಅರೆಸಾಮಿಕೆರೆ ಪ್ರದೇಶಕ್ಕೆ ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಮಾನ್ಯತೆ ನೀಡಿ ನಿರ್ಣಯ ಕೈಗೊಂಡಿದೆ. ಆ ಮೂಲಕ ವೃಕ್ಷಲಕ್ಷ ಆಂದೋಲನದ 6 ತಿಂಗಳಿಂದ ರಾಮತೀರ್ಥ ಉಳಿಸಿ ಎಂಬ ರಚನಾತ್ಮಕ ಚಳವಳಿಗೆ ಭಾಗಶಃ ಯಶಸ್ಸು ಸಿಕ್ಕಿದೆ. ಜೀವ ವೈವಿಧ್ಯ ಮಂಡಳಿ ಸದಸ್ಯ ಡಾ. ಪ್ರಕಾಶ ಮೇಸ್ತ ವಿವರವಾದ ವೈಜ್ಞಾನಿಕ ಪ್ರಸ್ತಾವನೆ ತಯಾರಿಸಿ ಜೀವ ವೈವಿಧ್ಯ ಮಂಡಳಿಯ ಸಭೆಯಲ್ಲಿ ಮಂಡಿಸಿದ್ದರು. ಈಚೆಗೆ ನಡೆದ ಸಭೆಯಲ್ಲಿ ಮಂಡಳಿ ಈ ನಿರ್ಣಯ ಕೈಗೊಂಡಿದೆ.
ಕಾರವಾರ (ಫೆ.3) : ರಾಜ್ಯ ಜೀವ ವೈವಿಧ್ಯ ಮಂಡಳಿಯು ರಾಮತೀರ್ಥ-ಅರೆಸಾಮಿಕೆರೆ ಪ್ರದೇಶಕ್ಕೆ ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಮಾನ್ಯತೆ ನೀಡಿ ನಿರ್ಣಯ ಕೈಗೊಂಡಿದೆ. ಆ ಮೂಲಕ ವೃಕ್ಷಲಕ್ಷ ಆಂದೋಲನದ 6 ತಿಂಗಳಿಂದ ರಾಮತೀರ್ಥ ಉಳಿಸಿ ಎಂಬ ರಚನಾತ್ಮಕ ಚಳವಳಿಗೆ ಭಾಗಶಃ ಯಶಸ್ಸು ಸಿಕ್ಕಿದೆ. ಜೀವ ವೈವಿಧ್ಯ ಮಂಡಳಿ ಸದಸ್ಯ ಡಾ. ಪ್ರಕಾಶ ಮೇಸ್ತ ವಿವರವಾದ ವೈಜ್ಞಾನಿಕ ಪ್ರಸ್ತಾವನೆ ತಯಾರಿಸಿ ಜೀವ ವೈವಿಧ್ಯ ಮಂಡಳಿಯ ಸಭೆಯಲ್ಲಿ ಮಂಡಿಸಿದ್ದರು. ಈಚೆಗೆ ನಡೆದ ಸಭೆಯಲ್ಲಿ ಮಂಡಳಿ ಈ ನಿರ್ಣಯ ಕೈಗೊಂಡಿದೆ.
ರಾಮತೀರ್ಥ ಅರೆಸಾಮಿ ಕೆರೆ ಉಳಿಸಿ ಅಭಿಯಾನಕ್ಕೆ ಬಲ ನೀಡಲು ಹೊನ್ನಾವರದ ಪ್ರಜ್ಞಾವಂತ ಜನತೆ, ಸಂಘ-ಸಂಸ್ಥೆಗಳು ಇನ್ನಷ್ಟುಸಕ್ರಿಯ ಬೆಂಬಲ ನೀಡಲು ಮುಂದೆ ಬರಬೇಕು ಎಂದು ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕರೆ ನೀಡಿದ್ದಾರೆ.
undefined
ಹೊನ್ನಾವರದ ರಾಮತೀರ್ಥ ರಕ್ಷಣೆ: ತಜ್ಞರ ತಂಡ ಭೇಟಿ
ರಾಮತೀರ್ಥ ಧಾರ್ಮಿಕವಾಗಿ, ಪೌರಾಣಿಕವಾಗಿ, ಪಾರಿಸಾರಿಕವಾಗಿ, ಜಲಮೂಲವಾಗಿ ಬಹಳ ಮಹತ್ವ ಹೊಂದಿದೆ. ಐತಿಹಾಸಿಕ ಪ್ರಾಮುಖ್ಯತೆ ಪಡೆದ ರಾಮತೀರ್ಥದ ಉಳಿವು ಕರಾವಳಿಯ ಸಂಸ್ಕೃತಿಯ ಉಳಿವು ಎಂಬ ಅಭಿಪ್ರಾಯವನ್ನು ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಸದಸ್ಯ ಶಿವಾನಂದ ಹೆಗಡೆ ಕೆರೆಮನೆ ವ್ಯಕ್ತ ಮಾಡಿದ್ದಾರೆ. ಮಂಡಳಿ Í್ಲಾಘನೀಯ ನಿರ್ಣಯ ಕೈಗೊಂಡಿದೆ ಎಂದಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಸುಭಾಸ ಚಂದ್ರನ್, ರಾಮತೀರ್ಥ ಸೂಕ್ಷ್ಮ ಪರಿಸರ ಪ್ರದೇಶ ಎಂದು ಜಿಲ್ಲಾ ಪರಿಸರ ಧಾರಣ ಸಾಮರ್ಥ್ಯ ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ. ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ ಮೋಹನರಾಜ್, ರಾಜ್ಯ ಜೀವ ವೈವಿಧ್ಯ ತಾಣ ಪಟ್ಟಿಗೆ ರಾಮತೀರ್ಥ ಸೇರ್ಪಡೆ ಆದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಹೊನ್ನಾವರ ನಗರಸಭೆ ಸದಸ್ಯೆ ತಾರಾ ಕಾಮತ್, ಸೂರ್ಯಕಾಂತ ಮೇಸ್ತ, ರಾಮತೀರ್ಥಕ್ಕೆ ರಾಜ್ಯ ಮಟ್ಟದಲ್ಲಿ ಪ್ರಾಧಾನ್ಯತೆ ದೊರೆತಿದೆ ಎಂದು ಹೇಳಿದ್ದಾರೆ. ಕರಾವಳಿ ಪರಿಸರ ಕಾಯಿದೆ ತಜ್ಞ ಡಾ. ಮಹಾಬಲೇಶ್ವರ, ಜೀವ ವೈವಿಧ್ಯ ಕಾಯಿದೆಯನ್ನು ತಳ ಮಟ್ಟದಲ್ಲಿ ಜಾರಿ ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ನೀಡಿದ್ದಾರೆ.
ಪುರಾತತ್ವ ಇಲಾಖೆಯ ಉಪನಿರ್ದೇಶಕರು ಈಗಾಗಲೇ ಹೊನ್ನಾವರಕ್ಕೆ ಭೇಟಿ ನೀಡಿದ್ದಾರೆ. ರಾಮತೀರ್ಥ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿದೆ. ರಕ್ಷಣೆಗೆ ಕ್ರಮ ಕೈಗೊಳ್ಳಲು ಪುರಾತತ್ವ ಇಲಾಖೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಅವರಿಗೆ ಸೂಚನೆ ನೀಡಿದೆ.
ಪ್ರಕೃತಿ ಪ್ರೀಯರನ್ನು ಕೈಬೀಸಿ ಕರೆಯೋ ಉಗಲವಾಟದ ರಾಮತೀರ್ಥ ತಾಣ
ಸ್ಥಳೀಯ ಜನತೆ, ತಾಪಂ, ಜೀವ ವೈವಿಧ್ಯ ಸಮಿತಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ನಗರಸಭೆ, ಪುರಾತತ್ವ ಇಲಾಖೆ, ಸಹ್ಯಾದ್ರಿ ಪರಂಪರಾ ಪ್ರಾಧಿಕಾರ ವೃಕ್ಷ ಲಕ್ಷ ಆಂದೋಲನ ಸೇರಿ ರಾಮತೀರ್ಥ ಪ್ರದೇಶದ ಸಮೀಕ್ಷೆಯನ್ನು 2022ರ ಡಿ.8ರಂದು ನಡೆಸಲಾಗಿತ್ತು. ತಹಸೀಲ್ದಾರ ಅಧ್ಯಕ್ಷತೆಯಲ್ಲಿ ರಾಮತೀರ್ಥ ಪರಿಸರ ನಿರ್ವಹಣಾ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಜಿಲ್ಲಾಧಿಕಾರಿ ರಾಮತೀರ್ಥಕ್ಕೆ ಭೇಟಿ ನೀಡಬೇಕು. ಹೊನ್ನಾವರ ತಹಸೀಲ್ದಾರ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ರಚಿಸುವಂತೆ ಆದೇಶ ನೀಡಬೇಕು ಎಂದು ವೃಕ್ಷ ಲಕ್ಷ ಆಂದೋಲನ ಆಗ್ರಹಿಸಿದರು.