ಲ್ಲಾ ಕೇಂದ್ರದಲ್ಲಿ ಏರ್‌ಸ್ಟ್ರೀಪ್ ನಿರ್ಮಾಣ ಸದ್ಯದ ಪರಿಸ್ಥಿತಿಯಲ್ಲಿ ಕನಸಿನ ಮಾತು. ಆದರೆ, ಹೆಲಿಪೋರ್ಟ್ ನಿರ್ಮಾಣಕ್ಕೆ ಯಾವುದೇ ತರಹದ ಅಡ್ಡಿ ಇಲ್ಲ. ಈ ಕಾರಣಕ್ಕಾಗಿ ಹೆಲಿಪೋರ್ಟ್ ನಿರ್ಮಾಣದ ಪ್ರಕ್ರಿಯೆ ಶುರುವಾಗಿದೆ.
ಆರ್. ತಾರಾನಾಥ್
ಚಿಕ್ಕಮಗಳೂರು (ಫೆ.13) : ಜಿಲ್ಲಾ ಕೇಂದ್ರದಲ್ಲಿ ಏರ್‌ಸ್ಟ್ರೀಪ್ ನಿರ್ಮಾಣ ಸದ್ಯದ ಪರಿಸ್ಥಿತಿಯಲ್ಲಿ ಕನಸಿನ ಮಾತು. ಆದರೆ, ಹೆಲಿಪೋರ್ಟ್ ನಿರ್ಮಾಣಕ್ಕೆ ಯಾವುದೇ ತರಹದ ಅಡ್ಡಿ ಇಲ್ಲ. ಈ ಕಾರಣಕ್ಕಾಗಿ ಹೆಲಿಪೋರ್ಟ್ ನಿರ್ಮಾಣದ ಪ್ರಕ್ರಿಯೆ ಶುರುವಾಗಿದೆ.
ಕಳೆದ ವರ್ಷ ಮಾರ್ಚ್ ಮಾಹೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(CM Basavaraj bommai) ಅವರು ಮಂಡಿಸಿದ ಬಜೆಟ್(Budget)ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ(Tourism development)ಯ ನಿಟ್ಟಿನಲ್ಲಿ ಚಿಕ್ಕಮಗಳೂರು(Chikkamagaluru), ಹಂಪಿ(Hampi) ಹಾಗೂ ಕೊಡಗು(Kodagu) ಪ್ರವಾಸಿ ತಾಣಗಳಲ್ಲಿ ಹೆಲಿಪೋರ್ಟ್(Heliport) ನಿರ್ಮಾಣ ಮಾಡಲು ತಲಾ 10 ಕೋಟಿ ರುಪಾಯಿ ಘೋಷಣೆ ಮಾಡಿದ್ದರು. ನಗರದ ಹೊರ ವಲಯ ದಲ್ಲಿರುವ ಗೌಡನಹಳ್ಳಿ ರಸ್ತೆಯಲ್ಲಿ ಕಂದಾಯ ಇಲಾಖೆಗೆ ಸೇರಿದ 120 ಎಕರೆ ಜಾಗ ಇದ್ದು, ಇಲ್ಲೇ ಹೆಲಿಪೋರ್ಚ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಚಿಕ್ಕಮಗಳೂರು: ಶ್ರೀಮಠ ಸಂಸ್ಕಾರ ಕೊಡುವ ಶ್ರೇಷ್ಠ ಕೇಂದ್ರ: ಸಿ.ಟಿ.ರವಿ
ಇದರ ಹೊಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ)ಕ್ಕೆ ವಹಿಸಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಪವನ್ ಹನ್ಸ್ ಲಿಮಿಟೆಡ್ ಸಂಸ್ಥೆ(Pawan Hans Ltd) ತಜ್ಞರ ತಂಡ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ್ದು, ಇದೀಗ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಡಿಪಿಆರ್ ಕೈ ಸೇರುತ್ತಿದ್ದಂತೆ ಕೆಎಸ್‌ಐಐಡಿಸಿ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭ ಮಾಡಲಿದೆ.
ಈಗ ಗುರುತು ಮಾಡಿರುವ ಸ್ಥಳದಲ್ಲಿ ಒಂದಲ್ಲಾ, ಮೂರು ಹೆಲಿಕ್ಯಾಪ್ಟರ್ ಏಕ ಕಾಲದಲ್ಲಿ ನಿಲ್ಲಬಹುದು. ಆ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಅಧೀನದ ಹೆಲಿಪ್ಯಾಡ್ ಒಂದೂ ಇಲ್ಲ, ಮುಂದೊಂದು ದಿನ ಮೂರು ಹೆಲಿಕಾಪ್ಟರ್ ನಿಲ್ಲಿಸುವಷ್ಟುಹೆಲಿಪ್ಯಾಡ್ ನಿರ್ಮಾಣಗೊಳ್ಳಲಿದೆ.
Shivamogga News: ಸಾಗರದ ಮಾರಿಜಾತ್ರೆ ಮಧ್ಯೆ ಮಗು ಚಿಕಿತ್ಸೆಗೆ ಝೀರೋ ಟ್ರಾಫಿಕ್!
ಆಗದಿರುವ ಕೆಲಸಕ್ಕೆ 7 ಕೋಟಿ ಬಿಡುಗಡೆ
ಹೆಲಿಪೋರ್ಟ್ ನಿರ್ಮಾಣಕ್ಕಾಗಿ ಡಿಪಿಆರ್ ಸಿದ್ಧಪಡಿಸಲಾಗುತ್ತಿರುವ ಸ್ಥಳದಲ್ಲೇ 20 ಸೀಟ್‌ನ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ 7 ಕೋಟಿ ರು. ಕಳೆದ ವರ್ಷ ಬಿಡುಗಡೆ ಮಾಡಿದೆ.
ಅಂದರೆ, ಇಲ್ಲಿ 20 ಸೀಟಿನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 140 ಎಕರೆ ಪ್ರದೇಶ ಬೇಕು. ಆದರೆ, ಸದ್ಯ ಕಂದಾಯ ಇಲಾಖೆ ಅಧೀನದಲ್ಲಿರುವುದು 120 ಎಕರೆ ಮಾತ್ರ, ಇನ್ನುಳಿದ 20 ಎಕರೆ ಜಾಗ ರೈತರಿಂದ ಸ್ವಾಧೀನಪಡಿಸಿಕೊಳ್ಳಲು 38 ಕೋಟಿ ರುಪಾಯಿ ಬೇಕು. ಆದರೆ, ಸರ್ಕಾರ ಬಿಡುಗಡೆ ಮಾಡಿದ್ದು 7 ಕೋಟಿ ಮಾತ್ರ. 20 ಸೀಟ್‌ನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈ ಹಿಂದೆ ಟೆಂಡರ್ ಕರೆಯಲಾಗಿತ್ತು. ಯಾರೂ ಕೂಡ ಪಾಲ್ಗೊಳ್ಳದೆ ಇದ್ದರಿಂದ ಈ ಪ್ರಸ್ತಾಪನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಆದರೂ ಕೂಡ 7 ಕೋಟಿ ರುಪಾಯಿ ಬಿಡುಗಡೆಯಾಗಿ ಜಿಲ್ಲಾಡಳಿತದ ಖಜಾನೆಯಲ್ಲಿದೆ. ಆಗದೆ ಇರುವ ಕೆಲಸಕ್ಕೆ ಹಣ ಬಿಡುಗಡೆಯಾಗಿದೆ.