Chitradurga: ಮುರುಘಾ ಶ್ರೀ ವಿರುದ್ದ ಪಿತೂರಿ ಪ್ರಕರಣ, ಮಾಜಿ ಶಾಸಕ ಬಸವರಾಜನ್ ಜೈಲಿನಿಂದ ಬಿಡುಗಡೆ

By Suvarna News  |  First Published Dec 27, 2022, 7:14 PM IST

 ಮುರುಘಾ ಶ್ರೀ ವಿರುದ್ದ ಪಿತೂರಿ ಪ್ರಕರಣ, ಮಾಜಿ ಶಾಸಕ ಎಸ್. ಕೆ ಬಸವರಾಜನ್ ಜೈಲಿನಿಂದ ಬಿಡುಗಡೆ. ನನ್ನ ಕ್ಷೇತ್ರದ ಜನ ಬೆಂಬಲಿಸ್ತಾರೆ ನಾನು ಶಾಸಕನಾಗ್ತೀನಿ ಎಂದ ಬಸವರಾಜನ್.  ಬಿಡುಗಡೆಯಿಂದ ಅಭಿಮಾನಿಗಳಲ್ಲಿ ಸಂತಸ.  ಪ್ರಕರಣ ಸಂಬಂಧ  ನವೆಂಬರ್ 10ರಂದು ಬಂಧನವಾಗಿದ್ದ ಬಸವರಾಜನ್ 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.27): ಮುರುಘಾಶ್ರೀ ಮೇಲೆ ಪೋಕ್ಸೊ ಪ್ರಕರಣ ದಾಖಲಿಸುವಲ್ಲಿ ಪಿತೂರಿ ನಡೆಸಿದ ಆರೋಪ ಹೊತ್ತು ನ್ಯಾಯಾಂಗ ಬಂಧನದಲ್ಲಿದ್ದ ಮಠದ ಮಾಜಿ ಆಡಳಿತಾಧಿಕಾರಿ  ಎಸ್‌.ಕೆ. ಬಸವರಾಜನ್‌  ಜೈಲಿಂದ ಹೊರ ಬಂದಿದ್ದಾರೆ. ಮಾಜಿ ಶಾಸಕರು ಆಗಿರುವ ಎಸ್ ಕೆ ಬಸವರಾಜನ್ ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣದಲ್ಲಿ ಬಂಧಿತರಾಗಿದ್ದರು. ಅವರ ಬಿಡುಗಡೆಯಿಂದ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.  ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣದಲ್ಲಿ  ಮಠದ ಮಾಜಿ ಆಡಳಿತಾಧಿಕಾರಿ S K ಬಸವರಾಜನ್ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ನವೆಂಬರ್ 10ರಂದು ಬಂಧಿಸಿದ್ದರು. ಮಠದ ಪೂಜಾ ಕೈಕಂರ್ಯ ಉಸ್ತುವಾರಿ ಬಸವಪ್ರಭುಶ್ರೀ ನವೆಂಬರ್ 9ರಂದು ಈ ಪ್ರಕರಣವನ್ನು ದಾಖಲಿಸಿದ್ದರು. ಈ  ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಎಸ್ ಕೆ ಬಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದರಿಂದ ಹೈಕೋರ್ಟಿನಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುರುವಾರ ಡಿಸೆಂಬರ್ 22ರಂದು ಜಾಮೀನು ನೀಡಿತ್ತು. ಆದೇಶ ಪ್ರತಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಗೆ ತಲುಪುವುದು ತಡವಾದ ಹಿನ್ನೆಲೆಯಲ್ಲಿ ಇಂದು ಎಸ್ ಕೆ ಬಸವರಾಜನ್ ಪರ ವಕೀಲರು ಜಿಲ್ಲಾ ಕಾರಾಗೃಹಕ್ಕೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ ನಂತರ ಬಸವರಾಜನ್ ಬಿಡುಗಡೆಗೊಂಡರು. ಬಳಿಕ ಮಾತನಾಡಿದ ಬಸವರಾಜನ್ ಪರ ವಕೀಲ ಇದು ರಿವೇಂಜ್ ಕೇಸಾಗಿದ್ದು, ಹೈಕೋರ್ಟ್ ಜಾಮೀನು ನೀಡಿದೆ ಎಂದರು.

Latest Videos

undefined

Muruga Sree case: ಜೈಲು ಸೇರಿದ ಸೌಭಾಗ್ಯ ಬಗ್ಗೆ ಒಡನಾಡಿ ಸ್ಟ್ಯಾನ್ಲಿ ಬರೆದ ಪತ್ರ ವೈರಲ್

ಇನ್ನು ಬಸವರಾಜನ್ ಬಿಡುಗಡೆಯಾಗುತ್ತಾರೆ ಎಂಬುದು ತಿಳಿಯುತ್ತಲೇ ಬೆಂಬಲಿಗರು ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಬಳಿ ಜಮಾಯಿಸಿದ್ದರು. ಇನ್ನು ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಸವರಾಜನ್,  ನಮ್ಮ ಕ್ಷೇತ್ರದ ಜನ ಬೆಂಬಲಿಸಿ ನನ್ನ ಗೆಲ್ಲಿಸುವ ಭರವಸೆಯಿದೆ. ಈಗಾಗಲೇ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಭರವಸೆ ಇದೆ. ಈ ಪಿತೂರಿ ಪ್ರಕರಣದಲ್ಲಿ ನಾನು, ನನ್ನ ಪತ್ನಿ ಮತ್ತು ಜತೆಗಿರುವವರು ಕಾನೂನು ಹೋರಾಟ ಮಾಡಿ ಗೆದ್ದು ಬರಲಿದ್ದೇವೆ. ಜೈಲಿನಲ್ಲಿ ಮುರುಘಾಶ್ರೀ ನನ್ನ ಭೇಟಿಗೆ ಪ್ರಯತ್ನಿಸಿದ್ದರು. ಸಂಧಾನಕ್ಕಾಗಿ ನನ್ನ ಭೇಟಿಗೆ ಹೇಳಿ ಕಳುಹಿಸಿದ್ದರು ಆದರೆ ಅದಕ್ಕೆ ಅಧಿಕಾರಿಗಳು ಅವಕಾಶ ನೀಡಿಲ್ಲ, ನಾನು ಸಹ ಭೇಟಿಗೆ ಒಪ್ಪಿಲ್ಲ ಎಂದು ಬಸವರಾಜನ್ ಹೇಳಿದರು.

Murugha Mutt Administrator : ಮುರುಘಾಮಠ ಆಡಳಿತಾಧಿಕಾರಿ ನೇಮಕಕ್ಕೆ ಮಠಾಧೀಶರ ವಿರೋಧ

ಇನ್ನು ಬಸವರಾಜನ್ ಬಿಡುಗಡೆಯಾಗುತ್ತಾರೆ ಎಂದು ಕಾರಾಗೃಹದ ಬಳಿ ಜಮಾಯಿಸಿದ ಬೆಂಬಲಿಗರು ಹಾರ ಹಾಕಿ ಬಸವರಾಜನ್ ಗೆ ಸ್ವಾಗತ ಕೋರಿದರು. ಬೆಂಬಲಿಗರು ಹೆಗಲ ಮೇಲೆ ಹೊತ್ತು ಜೈಕಾರ ಕೂಗಿದರು. ಬಿಡುಗಡೆಯ ನಂತರ ಮುರುಘಾಮಠಕ್ಕೆ ಭೇಟಿ ನೀಡಿದ ಎಸ್ ಕೆ ಬಸವರಾಜನ್ ತಮ್ಮ ಬೆಂಬಲಿಗರೊಂದಿಗೆ ಮುರಗಿ ಶಾಂತವೀರ ಸ್ವಾಮಿಗಳ ಗದ್ದುಗೆಗೆ ನಮಸ್ಕರಿಸಿದರು.

click me!