ಬಿಜೆಪಿ ಸಂಸದರಿಗೆ ಬಳೆ, ಕುಂಕುಮ ಕಳಿಸಿದ ಕೈ ಕಾರ್ಯಕರ್ತರು..!

By Kannadaprabha News  |  First Published Oct 5, 2019, 10:32 AM IST

ನೆರೆ ಪರಿಹಾರ ತರದ ರಾಜ್ಯದ ಬಿಜೆಪಿ ಸಂಸದರಿಗೆ ಬಳೆ, ಕುಂಕುಮದೊಂದಿಗೆ ಪತ್ರವನ್ನು ರವಾನಿಸುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಶುಕ್ರವಾರ ಪ್ರತಿಭಟಿಸಿದರು.


ಮೈಸೂರು(ಅ.05): ಕೇಂದ್ರದಿಂದ ನಯಾಪೈಸೆ ನೆರೆ ಪರಿಹಾರ ತರದ ರಾಜ್ಯದ ಬಿಜೆಪಿ ಸಂಸದರಿಗೆ ಬಳೆ, ಕುಂಕುಮದೊಂದಿಗೆ ಪತ್ರವನ್ನು ರವಾನಿಸುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಶುಕ್ರವಾರ ಪ್ರತಿಭಟಿಸಿದರು.

ರಾಜ್ಯದ 22 ಜಿಲ್ಲೆಗಳಲ್ಲಿ ಭೀಕರ ಪ್ರವಾಹದಿಂದ 125 ಮಂದಿ ಮೃತಪಟ್ಟಿದ್ದಾರೆ. 3500 ಜಾನುವಾರುಗಳು ಮೃತಪಟ್ಟಿವೆ. ಸುಮಾರು 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹಾನಿ ಉಂಟಾಗಿ 60 ದಿನ ಕಳೆದರೂ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಒಂದು ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

ಮೈಸೂರು: ಕವಿಗೂ ಬಂದಿತೆ ಅತೃಪ್ತ, ಅನರ್ಹ ಪಟ್ಟ!

ಉತ್ತರ ಕರ್ನಾಟಕದ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದರೂ ವಿ. ಶ್ರೀನಿವಾಸಪ್ರಸಾದ್‌ ಅವರನ್ನು ಹೊರತುಪಡಿಸಿದರೇ ರಾಜ್ಯದ ಬಿಜೆಪಿ ಸಂಸದರು ತುಟಿ ಬಿಚ್ಚುತ್ತಿಲ್ಲ. ಪ್ರಧಾನಿಯವರ ಬಳಿ ಹೋಗಿ ಪರಿಹಾರ ಕೇಳುವ ಧೈರ್ಯವಿಲ್ಲ ಎಂದು ಅವರು ಕಿಡಿಕಾರಿದರು.

35,000 ಕೋಟಿ ಹಣ ಬಿಡುಗಡೆ ಮಾಡಿ:

ಇನ್ನಾದರೂ ಸಂಸದರು ಹೊರಗೆ ಬಂದು ಸಂತ್ರಸ್ತರ ಕಷ್ಟದಲ್ಲಿ ಭಾಗಿಯಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಬೇಕು. ಕಳೆದುಕೊಂಡಿರುವ ವಸ್ತು ಕೊಡಿಸಬೇಕು. ಕೇಂದ್ರದಿಂದ ಅಂದಾಲಜಿಲ್ಪಟ್ಟಿರುವ ಮೊತ್ತದ ಪ್ರಕಾರ ಕನಿಷ್ಠ . 35,000 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಬಳೆ, ಕುಂಕುಮ ಕಳುಹಿಸಿಕೊಡುತ್ತಿದ್ದೇವೆ ಎಂದರು.

ಮಾಜಿ ಮೇಯರ್‌ ಅಯೂಬ್‌ ಖಾನ್‌, ಮುಖಂಡರಾದ ಎಂ. ಲಕ್ಷ್ಮಣ, ಕುರುಬಾರಹಳ್ಳಿ ಪ್ರಕಾಶ್‌, ಚಂದ್ರು, ರಾಜೇಶ್‌ ಮೊದಲಾದವರು ಇದ್ದರು.

ಸಾಂಪ್ರದಾಯಿಕ ವರ್ಸಸ್‌ ಪ್ರವಾಸೋದ್ಯಮ ದಸರಾ

click me!