ಪಂಚಾಯತ್ ಚುನಾವಣೆ: ಬಹುಮತ ಕಾಂಗ್ರೆಸಿಗೆ, ಅಧ್ಯಕ್ಷತೆ ಬಿಜೆಪಿಗೆ !

Kannadaprabha News   | Asianet News
Published : Jul 31, 2020, 10:37 AM IST
ಪಂಚಾಯತ್ ಚುನಾವಣೆ: ಬಹುಮತ ಕಾಂಗ್ರೆಸಿಗೆ, ಅಧ್ಯಕ್ಷತೆ ಬಿಜೆಪಿಗೆ !

ಸಾರಾಂಶ

ನೂತನ ಕಾಪು ತಾಲೂಕು ಪಂಚಾಯಿತಿಯಲ್ಲಿ ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಬಹುಮತ ಇರುವ ಕಾಂಗ್ರೆಸ್‌ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುತ್ತಿದೆ.

ಉಡುಪಿ(ಜು.31): ನೂತನ ಕಾಪು ತಾಲೂಕು ಪಂಚಾಯಿತಿಯಲ್ಲಿ ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಬಹುಮತ ಇರುವ ಕಾಂಗ್ರೆಸ್‌ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುತ್ತಿದೆ.

ರಾಜ್ಯದ ನೂತನ ತಾಲೂಕುಗಳಲ್ಲಿ ತಾಲೂಕು ಪಂಚಾಯಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಅದರಂತೆ ಉಡುಪಿ ತಾ.ಪಂ.ನ ಸದಸ್ಯರಾಗಿದ್ದ ಕಾಪು ತಾಲೂಕು ವ್ಯಾಪ್ತಿಯ ತಾ.ಪಂ. ಸದಸ್ಯರನ್ನು ಬೇರ್ಪಡಿಸಿ, ಅವರನ್ನು ನೂತನ ಕಾಪು ತಾ.ಪಂ. ಸದಸ್ಯರನ್ನಾಗಿ ಮಾಡಲಾಗಿದೆ. ಅಲ್ಲದೆ ನೂತನ ತಾ.ಪಂ.ಗೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಘೋಷಿಸಲಾಗಿದೆ.

ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳಿಲ್ಲದೆ ಖಾಲಿ ಬೆಡ್‌ ನೀಡಿದರೇನು ಪ್ರಯೋಜನ..? ಖಾದರ್ ಕಿಡಿ

ಒಟ್ಟು 12 ಸದಸ್ಯರ ಕಾಪು ತಾಪಂನಲ್ಲಿ ಕಾಂಗ್ರೆಸ್‌ನ 7, ಬಿಜೆಪಿಯ 5 ಸದಸ್ಯರಿದ್ದಾರೆ. ಆದರೆ ಕಾಂಗ್ರೆಸ್‌ ಬಳಿ ಹಿಂದುಳಿದ ವರ್ಗ ಬಿಗೆ ಸೇರಿದ ಮಹಿಳೆ ಸದಸ್ಯರಿಲ್ಲ, ಆದ್ದರಿಂದ ಅನಾಯಾಸವಾಗಿ ಬಿಜೆಪಿಯ ಶಶಿಪ್ರಭಾ ಶೆಟ್ಟಿಅಧ್ಯಕ್ಷೆಯಾಗುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಯು.ಸಿ. ಶೇಕಬ್ಬ ಮತ್ತು ದಿನೇಶ್‌ ಪಲಿಮಾರು ನಡುವೆ ಸ್ಪರ್ಧೆ ಇದೆ. ಎರಡು ವಾರದಲ್ಲಿ ಕುಂದಾಪುರ ಎಸಿ ಅವರು ತಾಪಂ ಚುನಾವಣೆ ನಡೆಸಲಿದ್ದಾರೆ ಎಂದು ತಾಪಂ ಪ್ರಭಾರ ಕಾರ್ಯನಿರ್ವಹಣ ಅಧಿಕಾರಿ ವಿವೇಕಾನಂದ ಗಾಂವ್ಕರ್‌ ಹೇಳಿದ್ದಾರೆ.

ಕಾಫಿನಾಡಿನಲ್ಲಿ ವರ ಮಹಾಲಕ್ಷ್ಮೇ ಹಬ್ಬಕ್ಕೂ ತಟ್ಟಿದ ಕೊರೋನಾ ಭೀತಿ

ಸ್ವಂತ ಕಟ್ಟಡ ಇಲ್ಲ: ಕಾಪು ತಾಪಂಗೆ ಸ್ವಂತ ಕಟ್ಟಡ ಇಲ್ಲ, ಆದ್ದರಿಂದ ಉಳಿಯಾರಗೊಳಿ ಗ್ರಾಪಂನ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಅಲ್ಲಿ ತಾಪಂ ಕಚೇರಿಗಳು ಆ.15ರಂದು ಕಾರ್ಯಾರಂಭ ಮಾಡಲಿವೆ. ಮುಂದೆ ಶಾಸಕರ ನಿಧಿ ಮತ್ತು ಇತರ ಅನುದಾನದಲ್ಲಿ ಕಾಪು ಪ್ರವಾಸಿ ಬಂಗ್ಲೆ ಬಳಿ ಮಿನಿ ವಿಧಾನಸೌಧ ನಿರ್ಮಿಸಿ ಅದರಲ್ಲಿ ತಾಪಂ ಕಾರ್ಯ ನಿರ್ವಹಿಸಲಿದೆ ಎಂದು ಶಾಸಕರು ಹೇಳಿದ್ದಾರೆ.

PREV
click me!

Recommended Stories

ಬಳ್ಳಾರಿ ಗಲಭೆ: ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿ 10ಕ್ಕೂ ಹೆಚ್ಚು ಜನರ ವಿರುದ್ಧ FIR
ಗಾಲಿ ರೆಡ್ಡಿ ವಿರುದ್ಧ FIR ಆಗುವವರೆಗೂ ಸ್ಥಳ ಬಿಟ್ಟು ಹೋಗಲ್ಲ ಎಂದ ಭರತ್ ರೆಡ್ಡಿ: ಒಂದೇ ಸಮಯಕ್ಕೆ ಇಬ್ಬರು ನಾಯಕರ ಸುದ್ದಿಗೋಷ್ಠಿ