ಆಹಾರ ಕಿಟ್ ದುರುಪಯೋಗದ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸುವ ತನಕ ತಾಲೂಕಿನ ಬಡ ಕುಟುಂಬಗಳು ಹಾಗೂ ನೊಂದವರ ಜೊತೆಗೂಡಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕಾಂಗ್ರೆಸ್ ಬೆಂಬಲಿತ ಪುರಸಭಾ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಮೈಸೂರು(ಏ.26): ಆಹಾರ ಕಿಟ್ ವಿತರಣೆಯಲ್ಲಿ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿರುವ ದುರುಪಯೋಗದ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸುವ ತನಕ ತಾಲೂಕಿನ ಬಡ ಕುಟುಂಬಗಳು ಹಾಗೂ ನೊಂದವರ ಜೊತೆಗೂಡಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕಾಂಗ್ರೆಸ್ ಬೆಂಬಲಿತ ಪುರಸಭಾ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ತಹಸೀಲ್ದಾರ್ ಅವರ ಮನವಿಯ ಮೇರೆಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಡು ಬಡವರಿಗೆ ಆಹಾರ ಕಿಟ್ ವಿತರಿಸಲು ಸಂಘ ಸಂಸ್ಥೆಗಳು ಒಪ್ಪಿಗೆ ನೀಡಿದ್ದವು, ಅದರಂತೆ ಪುರಸಭೆ ಮುಖ್ಯಾಧಿಕಾರಿ ಸಭೆ ಕರೆದು ಸದಸ್ಯರು ತಮ್ಮ ವಾರ್ಡ್‌ಗಳಲ್ಲಿನ ಬಡವರ ಪಟ್ಟಿತಯಾರಿಸಿ ನೀಡುವಂತೆ ಹೇಳಿದಾಗ ಅದರಂತೆ ನಾವೆಲ್ಲರೂ ಸಮುದಾಯದ ಅಂತರ ಕಾಯ್ದಿರಿಸಿಕೊಂಡು ಪಟ್ಟಿತಯಾರಿಸಿ ನೀಡಲು ಹೋದಾಗ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡುವಂತೆ ಹೇಳಿದರು.
ಬಳ್ಳಾರಿ: ಆಳವಾದ ಕುಣಿಯಲ್ಲಿ ಬಿದ್ದು ಇಬ್ಬರ ದುರ್ಮರಣ
ನಂತರ ಕಾಂಗ್ರೆಸ್ ಸದಸ್ಯರು ನೀಡಿರುವ ಪಟ್ಟಿತಿರಸ್ಕರಿಸಿ ಎಂದು ತಹಸೀಲ್ದಾರ್ ಅವರು ಆದೇಶಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳಿದ್ದರಿಂದ ನಮ್ಮ ವಾರ್ಡ್‌ಗಳ ಬಡ ಜನರಿಗೆ ಲೋಪ ಮಾಡಿದ್ದಾರೆ ಎಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ
ತಾಲೂಕು ಆಡಳಿತ ವತಿಯಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ದವಸ ಧಾನ್ಯಗಳು ಹಾಗೂ ಹಣದ ಯಾವುದೇ ಮಾಹಿತಿ ದೊರೆತಿಲ್ಲ, ತಾಲೂಕು ಆಡಳಿತಕ್ಕೆ ನೀಡಿರುವ ಪರಿಹಾರ ವಿತರಣೆಯ ಸಾಮಗ್ರಿಗಳಲ್ಲಿ ದುರುಪಯೋಗದ ಬಗ್ಗೆ ಅನುಮಾನ ಮೂಡಿದೆ, ಕೂಡಲೇ ತಾಲೂಕು ತಹಸೀಲ್ದಾರ್ ಎಲ್ಲ ಮಾಹಿತಿಯನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಿಳಿಸುವಂತೆ ಆಗ್ರಹಿಸಿದರು. ಪುರಸಭೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಪಿ.ವಿ. ರವಿ, ಎಚ್.ಕೆ. ಮಂಜುನಾಥ್, ಅಬ್ದುಲ್ ಅರ್ಷದ್, ಎ.ಟಿ. ಶ್ಯಾಮ್, ರತ್ನಮ್ಮ, ಪಿ.ಎಸ್. ಪ್ರಕಾಶ್ ಇದ್ದರು.