ಬಾಲಕಿಯ ಮೇಲೆ ಅತ್ಯಾಚಾರ| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಂಬಳಿ ಹೊಸ ಫ್ಲಾಟ್ ಬಳಿ ನಡೆದ ಘಟನೆ| ಬಾಲಕಿ ಹಾಗೂ ಅವರ ತಾಯಿ ಇಬ್ಬರೂ ನದಿಗೆ ಸ್ನಾನಕ್ಕೆ ಹೋಗಿದ್ದರು| ತಾಯಿ ನದಿಯಲ್ಲೇ ಬಟ್ಟೆ ತೊಳೆಯುತ್ತಿದ್ದಳು| ಮಗಳು ಸ್ನಾನ ಮುಗಿಸಿ ಮನೆಗೆ ಬರುವ ಸಂದರ್ಭದಲ್ಲಿ ಕಬ್ಬಿನ ಗದ್ದೆಯಲ್ಲೆ ಅತ್ಯಾಚಾರ ವೆಸಗಿದ ಹಡಪದ ಶಿವಪ್ಪ|
ಹೂವಿನಹಡಗಲಿ(ಏ.26): ಕಾಮುಕನೊಬ್ಬ ಕಬ್ಬಿನ ಗದ್ದೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಎಳೆದುಕೊಂಡಿ ಹೋಗಿ ಅತ್ಯಾಚಾರ ವೆಸಗಿದ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಂಬಳಿ ಹೊಸ ಫ್ಲಾಟ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
13 ವರ್ಷದ ಬಾಲಕಿ ಹಾಗೂ ಅವರ ತಾಯಿ ಇಬ್ಬರೂ ನದಿಗೆ ಸ್ನಾನಕ್ಕೆ ಹೋಗಿದ್ದರು. ತಾಯಿ ನದಿಯಲ್ಲೇ ಬಟ್ಟೆ ತೊಳೆಯುತ್ತಿದ್ದಳು. ಮಗಳು ಸ್ನಾನ ಮುಗಿಸಿ ಮನೆಗೆ ಬರುವ ಸಂದರ್ಭದಲ್ಲಿ ಕಬ್ಬಿನ ಗದ್ದೆಯಲ್ಲೆ ಇದ್ದ ಹಡಪದ ಶಿವಪ್ಪ ಎಂಬಾತ ಅತ್ಯಾಚಾರ ಮಾಡಿದ್ದಾನೆ.
#Factcheck: ಕೊರೋನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆಯಿತಾ?
ಈ ವಿಷಯವನ್ನು ತಾಯಿ ಬಳಿ ಮಗಳು ಹೇಳಿದ್ದಾಳೆ. ಆಗ ಅತ್ಯಾಚಾರ ಮಾಡಿದ ವ್ಯಕ್ತಿ ಓಡಿ ಹೋಗಿದ್ದನು. ನಂತರದಲ್ಲಿ ಗ್ರಾಮಸ್ಥರು ಆತನನ್ನು ಹುಡುಕಿ ತಂದಿದ್ದರು. ತಾಯಿ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.