ಚುನಾವಣೆಯಲ್ಲಿ ಸೋತ್ತಿದ್ದಕ್ಕೆ ಜೆಡಿಎಸ್ ಮುಖಂಡನ ಮೇಲೆ ಹಲ್ಲೆ

Kannadaprabha News   | Asianet News
Published : Oct 07, 2021, 10:16 AM IST
ಚುನಾವಣೆಯಲ್ಲಿ ಸೋತ್ತಿದ್ದಕ್ಕೆ ಜೆಡಿಎಸ್ ಮುಖಂಡನ ಮೇಲೆ ಹಲ್ಲೆ

ಸಾರಾಂಶ

ಅಧ್ಯಕ ಸ್ಥಾನಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಬೆಂಬಲಿತರ ನಡುವೆ ತೀವ್ರ ಜಿದ್ದಾಜಿದ್ದಿ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ವಿಜಯ ಘೋಷಣೆಯಾಗುತ್ತಿದ್ದಂತೆ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್‌ ಬೆಂಬಲಿಗರು

ಕನಕಪುರ (ಅ.07): ವಿಎಸ್‌ಎಸ್‌ಎನ್‌ (VSSN) ಚುನಾವಣೆಯಲ್ಲಿ ಜೆಡಿಎಸ್‌ (JDS) ಬೆಂಬಲಿತ ಅಭ್ಯರ್ಥಿ ವಿಜಯ ಘೋಷಣೆಯಾಗುತ್ತಿದ್ದಂತೆ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್‌ (Congress) ಬೆಂಬಲಿಗರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮು ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹಾರೋಹಳ್ಳಿ ಹೋಬಳಿ ಕೊಳ್ಳಿಗನಹಳ್ಳಿಯಲ್ಲಿ ಜರುಗಿದೆ.

ವಿಎಸ್‌ಎಸ್‌ಎನ್‌ ಚುನಾವಣೆ ನಿಗದಿಯಾಗಿದ್ದು, ಚುನಾವಣೆಯಲ್ಲಿ ಅಧ್ಯಕ ಸ್ಥಾನಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಬೆಂಬಲಿತರ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಚುನಾವಣೆ (Election) ಮುಗಿದು ಫಲಿತಾಂಶ ಹೊರಬಿದ್ದ ನಂತರ ಜೆಡಿಎಸ್‌ನ ಮಹದೇವಯ್ಯ 7 ಮತಗಳನ್ನು ಗಳಿಸಿ ವಿಜಯಗಳಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಈರಪ್ಪ 5 ಮತಗಳನ್ನು ಪಡೆದು ಪರಾ​ಜಿ​ತ​ರಾ​ದರು.

ಈ ಫಲಿತಾಂಶದಿಂದ ಹತಾಶೆಗೊಂಡ ಕಾಂಗ್ರೆಸ್‌ ಬೆಂಬಲಿತರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ತಾಪಂ ಮಾಜಿ ಸದಸ್ಯ ರಾಮು ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಘಟ​ನೆ​ಯಿಂದಾಗಿ ವಿಎಸ್‌ಎಸ್‌ಎನ್‌ ಕಚೇರಿ ಮುಂಭಾಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಿದರು.

ಕಾಂಗ್ರೆಸ್‌ಗೆ ಸವಾಲ್ 

ಕಾಂಗ್ರೆಸ್ ಜೆಡಿಎಸ್ ವಾರ್ ಆಗಾಗ ನಡೆಯುತ್ತಲೇ ಇದ್ದು ಕೆಲ ದಿನಗಳ ಹಿಂದೆ ಕಾಂಗ್ರೆಸ್‌ಗೆ (congress) ತಾಕತ್ತಿದ್ದರೆ ಮುಂದಿನ ಚುನಾವಣೆ ನಂತರ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಘೋಷಣೆ ಮಾಡಲಿ ನೋಡೋಣ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಸವಾಲು ಹಾಕಿದ್ದರು. 

 ರಾಜ್ಯದಲ್ಲಿ ಕಾಂಗ್ರೆಸ್‌ ಹೀನಾಯ ಪರಿಸ್ಥಿತಿ ಎದುರಿಸುತ್ತಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎನ್ನುತ್ತಿದ್ದ ಕಾಂಗ್ರೆಸ್‌ ನಾಯಕರೇ ಈಗ ಬಿಜೆಪಿ (BJP) ಶಾಸಕರನ್ನು ಪಕ್ಷಕ್ಕೆ ಸೆಳೆಯುತ್ತಿದ್ದಾರೆ.

ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್: ಪಕ್ಷ ಕಟ್ಟಲು ಪಣತೊಟ್ಟ ಸಹೋದರರು

ರೇವಣ್ಣ ಸಿಡಿಮಿಡಿ

ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾಗುತ್ತದೆ ಎಂದರು. ಇದೇ ವೇಳೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ(Assembly Election) ಹಾಸನ ಕ್ಷೇತ್ರದಿಂದ ಯಾರಿಗೆ ಟಿಕೆಟ್‌ ನೀಡುತ್ತಾರೆಂಬ ಪತ್ರಕರ್ತರ ಪ್ರಶ್ನೆಗೆ ಹಾಸನಾಂಬೆ, ಲಕ್ಷ್ಮೀನರಸಿಂಹ ಸೇರಿ ನಮ್ಮ ಮನೆ ದೇವರು ಯಾರಿಗೆ ಆಶೀರ್ವಾದ ನೀಡುತ್ತಾರೋ ಅವರಿಗೆ ಟಿಕೆಟ್‌ ಸಿಗಲಿದೆ ಎಂದು ರೇವಣ್ಣ ಒಗಟಿನ ಉತ್ತರ ನೀಡಿದರು.

ಜೆಡಿಎಸ್‌ ನಾಯಕರು ಒಬ್ಬರಿಂದೊಬ್ಬರಂತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಇದರಿಂದ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ಕೆರಳಿದ್ದು, ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

PREV
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ