ಉಡುಪಿ: ಗೋಹತ್ಯೆ ವಿರೋಧಿಸಿದ್ದಕ್ಕೆ ಮೀನು ಖರೀದಿಗೆ ಬಹಿಷ್ಕಾರ

By Kannadaprabha NewsFirst Published Oct 7, 2021, 9:57 AM IST
Highlights

*  ಒಂದು ಕೋಮಿನ ಮುಖಂಡರಿಂದ ಸೂಚನೆ
*  ಖರೀದಿದಾರರಿಲ್ಲದೆ ಗಂಗೊಳ್ಳಿ ಮಾರುಕಟ್ಟೆ ಬಿಕೋ
*  ಮಾರಾಟ ಆಗದೆ ಸಾವಿರಾರು ರು. ಮೌಲ್ಯದ ಮೀನು ಕೊಳೆತು ಹೋಗುತ್ತಿದೆ 
 

ಬೈಂದೂರು(ಉಡುಪಿ)(ಅ.07): ಗೋಹತ್ಯೆ(Cow Slaughter) ವಿರೋಧಿಸಿ ಗಂಗೊಳ್ಳಿಯಲ್ಲಿ ಅ.1ರಂದು ನಡೆದ ಪ್ರತಿಭಟನೆ ಬಳಿಕ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ(Fish Market) ಒಂದು ಕೋಮಿನವರು ಮೀನು ಖರೀದಿಸುವುದನ್ನು ಸಂಪೂರ್ಣ ಬಹಿಷ್ಕರಿಸಿದ್ದು, ಕಳೆದ ಮೂರು ದಿನಗಳಿಂದ ಮೀನು ಖರೀರಿಸುವವರಿಲ್ಲದೆ ಮಾರುಕಟ್ಟೆ ಭಣಗುಡುತ್ತಿದೆ.

ಗಂಗೊಳ್ಳಿ ಮಾರುಕಟ್ಟೆಯಲ್ಲಿ ಮೀನು ಖರೀದಿಸಬಾರದು ಎಂದು ಒಂದು ಕೋಮಿನ ಮುಖಂಡರು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೀನು ಖರೀದಿಗೆ ಬರುವ ತಮ್ಮ ಕೋಮಿನ ಜನರನ್ನು ವಾಪಸ್‌ ಕಳುಹಿಸುತ್ತಿರುವ ಯುವಕರ ವಿರುದ್ಧ ಮಹಿಳಾ ಮೀನುಗಾರರು ಗಂಗೊಳ್ಳಿ ಪೊಲೀಸ್‌(Police) ಠಾಣೆಗೆ ದೂರು ನೀಡಲು ತೆರೆಳಿದ್ದು, ಪೊಲೀಸ್‌ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹಿಂದೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿ: ಸಚಿವ ಚವ್ಹಾಣ್‌

ಹಿಂದು ಸಂಘಟನೆಗಳು(Hindu Organizations) ನಡೆಸಿದ ಪ್ರತಿಭಟನೆಗೆ ಉತ್ತರವಾಗಿ ಮಹಿಳಾ ಮೀನುಗಾರರಿಂದ ಮೀನು ಖರೀದಿಸಬಾರದು ಎಂಬ ಸೂಚನೆ ಮುಖಂಡರಿಂದ ಪರೋಕ್ಷವಾಗಿ ನೀಡಲಾಗಿದೆ. ಹೀಗಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಸದ್ದಿಲ್ಲದೆ ನಡೆಯುತ್ತಿರುವ ಈ ಬಹಿಷ್ಕಾರದಿಂದ ಕಳೆದ ಐದು ದಿನಗಳಿಂದ ಮೀನು ಮಾರಾಟ ಆಗದೆ ಸಾವಿರಾರು ರು. ಮೌಲ್ಯದ ಮೀನು ಕೊಳೆತು ಹೋಗುತ್ತಿದೆ ಎಂದು ಮೀನು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
 

click me!