* ರಾಜಕೀಯ ಕಾರಣಕ್ಕಾಗಿ ಈ ರೀತಿ ಆರೋಪ ಸರಿಯಲ್ಲ
* ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ
* ಬಿಟ್ ಕಾಯಿನ್ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲ
ಹುಬ್ಬಳ್ಳಿ(ನ.12): ಆಧಾರರಹಿತ ಆರೋಪ ಮಾಡುವ ಕಾಂಗ್ರೆಸ್(Congress) ಬೇಜವಾಬ್ದಾರಿ ಪಕ್ಷವಾಗಿದೆ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್(Jagadish Shettar), ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಆರೋಪ ಮಾಡುವುದಕ್ಕಿಂತ ಮೊದಲು ದಾಖಲೆಗಳಿದ್ದರೆ(Records) ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯ(Politics) ಕಾರಣಕ್ಕಾಗಿ ಈ ರೀತಿ ಆರೋಪ ಸರಿಯಲ್ಲ. ಕಾಂಗ್ರೆಸ್‌ನವರು ಸರಿಯಾದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ ಆನಂತರ ಮಾತನಾಡಲಿ. ಯಾರೋ ಮತನಾಡುತ್ತಾರೆ ಎಂದು, ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಅದರ ಬಗ್ಗೆ ಸಾಕ್ಷಿ, ಪುರಾವೆಗಳಿದ್ದರೆ ಹಾಜರು ಮಾಡಿ, ತನಿಖೆ ಆಗಲಿ. ಈ ರೀತಿ ಆರೋಪ ಮಾಡುವುದು, ರಾಜಕೀಯ ಪಕ್ಷಕ್ಕೆ ಒಳ್ಳೆಯದಲ್ಲ. ಅಷ್ಟಕ್ಕೂ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್ ನಾಯಕರ ಹೆಸರೇ ಬಂದಿದೆ. ಅದಕ್ಕೆ ಕಾಂಗ್ರೆಸ್‌ನವರು ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
undefined
Bitcoin| ರಾಹುಲ್, ಮಲ್ಯ ಟ್ವಿಟರ್ ಹ್ಯಾಕ್ ಮಾಡಿದ್ದ ಶ್ರೀಕಿ..!
ಬೇರೆ ಬೇರೆ ಸರ್ಕಾರ ಇದ್ದಾಗಲೂ, ಹಗರಣ ನಡೆದಾಗ ಸಾಕಷ್ಟು ಸಿಬಿಐ(CBI) ತನಿಖೆ ಆಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಪತ್ರ ವ್ಯವಹಾರ ಇರುತ್ತದೆ. ಅದನ್ನೇ ಇಟ್ಟುಕೊಂಡು ಆರೋಪ ಮಾಡಿದರೆ ಹೇಗೆ? ಇನ್ನು, ಬಿಟ್ ಕಾಯಿನ್ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲ. ರಾಜ್ಯದ ಜಲವಿವಾದ, ನೀರಾವರಿ ಯೋಜನೆಗಳನ್ನು ಚರ್ಚೆ ಮಾಡಲು ದೆಹಲಿ ಹೋಗಿದ್ದಾರೆ. ಇದಕ್ಕೂ ಕಾಂಗ್ರೆಸ್ ಬೇರೆ ಅರ್ಥ ಕಲ್ಪಿಸುವುದಕ್ಕೆ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದರು.
ಬಿಟ್‌ಕಾಯಿನ್(Bitcoin) ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ(BJP) ಯಾರು ಭಾಗಿಯಾಗಿದ್ದಾರೆ? ಯಾರ ಖಾತೆಗೆ ಎಷ್ಟು ಹಣ ಹೋಗಿದೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommmai) ಬಹಿರಂಗಪಡಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಜಿ. ಪರಮೇಶ್ವರ(G. Parameshwara) ಸವಾಲು ಹಾಕಿದ್ದರು.
ಶ್ರೀಕಿ ಜತೆ ಕಾಂಗ್ರೆಸ್ ನಾಯಕರ ಮಕ್ಕಳ ನಂಟು, ಡಿಕೆಶಿ ಮೊದಲ ಪ್ರತಿಕ್ರಿಯೆ
ಕ್ರಿಪ್ಟೊ ಕರೆನ್ಸಿ ಬಿಟ್‌ಕಾಯಿನ್ 11 ಸಾವಿರ ಕೋಟಿ ಹ್ಯಾಕ್ಮಾಡಲಾಗಿದೆ. ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ(Arrest). ಇದರಲ್ಲಿ ರಾಜಕಾರಣಿಗಳು(Politicians), ಬ್ಯುಸಿನೆಸ್ಮೆನ್(Businessmen), ಅಧಿಕಾರಿಗಳು ಇದ್ದಾರೆ ಎಂಬ ಮಾಹಿತಿ ಇದೆ. ಇದರಲ್ಲಿ ಪಾಲ್ಗೊಂಡ ರಾಜಕಾರಣಿಗಳು ಯಾರು? ಕಾಂಗ್ರೆಸಿಗರು(Congress) ಯಾರಿದ್ದಾರೆ ಹೇಳಿ, ಕ್ರಮ ತೆಗೆದುಕೊಳ್ಳಿ. ನಾವೂ ಪಕ್ಷದಿಂದ ಕ್ರಮ ವಹಿಸುತ್ತೇವೆ. ಬಿಜೆಪಿಯಲ್ಲಿ ಯಾರಿದ್ದಾರೆ ತಿಳಿಸಿ, ಯಾರ ಖಾತೆಗೆ ಹಣ ಹೋಗಿದೆ ಎಂದು ಸಿಎಂ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದರು.
ಮಹಾನ್ ಆರ್ಥಿಕತಜ್ಞ ಸಿದ್ದರಾಮಯ್ಯನವರು Bitcoin ಬಗ್ಗೆ ವಿವರಿಸಲಿ : ಪ್ರತಾಪ್ ಸಿಂಹ!
ಹ್ಯಾಕರ್(Hacker) ಶ್ರೀಕಿ(Shreeki) ಜೊತೆ ಕಾಂಗ್ರೆಸ್(Congress) ನಾಯಕರ ಮಕ್ಕಳ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ದಾಖಲೆಗಳನ್ನ ಸಂಗ್ರಹಿಸುತ್ತಿದ್ದೇವೆ, ಎಲ್ಲಾ ದಾಖಲೆಗಳು ಸಿಕ್ಕ ಬಳಿಕ ಮಾತಡುತ್ತೇವೆ ಅಂತ ಹೇಳಿದ್ದಾರೆ. ಹಳೇ ಕೇಸ್, ಹಳೇ ಹೆಸರುಗಳಲ್ಲ ಈಗ ವಿಷಯ, ಈಗಿನ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ, ಹೆಸರುಗಳನ್ನ ಹೇಳಲಿ ಅಂತ ಹೇಳಿದ್ದಾರೆ. ಇದು ಹಳೆಯ ಕೇಸ್ ಆಗಿದೆ. ಹೊಸ ಕೇಸ್ ಬಗ್ಗೆ ಮಾತಾನಡಲಿ ಅಂತ ತಿಳಿಸಿದ್ದಾರೆ.
ನಲಪಾಡ್ ನಂಟು ವಿಚಾರ - ಕೈನಲ್ಲೀಗ ಸಂಚಲನ
ಕರ್ನಾಟಕ(Karnataka) ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಹೌದು ಈ ಹಗರಣ ರಾಜಕಾರಣಗಳಲ್ಲಿ ನಡುಕ ಸೃಷ್ಟಿಸಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು, ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಜೊತೆ ಯಾರಿಗೆಲ್ಲ ಸಂಪರ್ಕವಿತ್ತೆಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್(NA Haris) ಪುತ್ರ ಹಾಗೂ ಹಾವೇರಿಯ ಮಾಜಿ ಸಚಿವ ರುದ್ರಪ್ಪ ಲಮಾಣಿ(Rudrappa Lamani) ಪುತ್ರನ ಜತೆ ಆಪ್ತ ಸ್ನೇಹವಿತ್ತು ಎಂಬ ಸಂಗತಿ ಸಿಸಿಬಿ(CCB) ತನಿಖೆಯಲ್ಲಿ ಬೆಳಕಿಗೆ ಬಂದಿದೆ.