ಮಾರಿ ಮುಂದೆ ಕೋಣ ಕಡಿಯುವಂತೆ ಡಿ.ಕೆ.ಶಿವಕುಮಾರ್‌ಗೆ ಅದೇ ಕಾಂಗ್ರೆಸ್ಸಿನವರೇ ರಾಜಕೀಯವಾಗಿ ಕಡಿದಿದ್ದು, ಕುಂದಗೋಳ ಉಪ ಚುನಾವಣೆ ವೇಳೆ ಹೇಳಿದ್ದ ನನ್ನ ಮಾತು ನಿಜವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆ(ಸೆ.10): ಮಾರಿ ಮುಂದೆ ಕೋಣ ಕಡಿಯುವಂತೆ ಡಿ.ಕೆ.ಶಿವಕುಮಾರ್‌ಗೆ ಅದೇ ಕಾಂಗ್ರೆಸ್ಸಿನವರೇ ರಾಜಕೀಯವಾಗಿ ಕಡಿದಿದ್ದು, ಕುಂದಗೋಳ ಉಪ ಚುನಾವಣೆ ವೇಳೆ ಹೇಳಿದ್ದ ನನ್ನ ಮಾತು ನಿಜವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿರುವ ಉತ್ತಮ ನಾಯಕನೆಂದರೆ ಡಿಕೆಶಿ. ಶಿವಕುಮಾರ್‌ಗೆ ಕಾಂಗ್ರೆಸ್ ಪಕ್ಷದಲ್ಲಿರುವವರೇ ರಾಜಕೀಯವಾಗಿ ತುಳಿಯುವ ಕೆಲಸ ಅತ್ಯಂತ ವ್ಯವಸ್ಥಿತವಾಗಿಯೇ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಪ್ರಭಾವಿ ಸರ್ಟಿಫಿಕೇಟ್, ಕಾಂಗ್ರೆಸ್ ನಲ್ಲಿರುವ ಉತ್ತಮ ನಾಯಕ ಡಿಕೆಶಿ!
ನಗರದ ಎಂಸಿಸಿ ಎ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಿಂದು ಯುವ ಶಕ್ತಿಯ 28ನೇ ವರ್ಷದ ಗಣೇಶೋತ್ಸವ ಅಂಗವಾಗಿ ಗಣೇಶ ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಜೈಲಿಗೆ ಹೋಗಲು ಕಾಂಗ್ರೆಸ್ಸಿನವರು ಕಾರಣವೇ ಹೊರತು ಬಿಜೆಪಿಯವರಲ್ಲ ಎಂದಿದ್ದಾರೆ.
ದಾವಣಗೆರೆ: ಹಾಲಿಗೆ ಮಾಜಿ ಅಬಕಾರಿ ಸಚಿವರ ಕ್ಲಾಸ್..!
ಬಿಜೆಪಿ ಮುಖಂಡ ಪಿ.ಸಿ.ಮಹಾಬಲೇಶ್ವರ, ಎನ್.ರಾಜಶೇಖರ, ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಪಿ.ಸಿ.ಶ್ರೀನಿವಾಸ, ರಮೇಶನಾಯ್ಕ, ಉದ್ಯಮಿಗಳಾದ ಬಿ.ಜೆ.ಅಜಯಕುಮಾರ, ಲೋಕಿಕೆರೆ ನಾಗರಾಜ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಗೌತಮ್ ಜೈನ್, ಶಂಕರಗೌಡ ಬಿರಾದಾರ್, ಎಂ.ಮನು, ಸೋಗಿ ಗುರು ಇತರರು ಇದ್ದರು.