ಕೆರೆ ಯೋಜನೆಗಳಿಗೆ ಹಣ ಮಂಜೂರಾಗದೇ ಇದ್ದರೆ ತರಳಬಾಳು ಶ್ರೀಗಳ ಆಶಯದಂತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲು ಮುಂದಾಗಿದ್ದೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಜನಸಮೂಹದೆದುರು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. ಹೇಗಾದರೂ ಸರಿ ಈ ಯೋಜನೆಯನ್ನು ಒಂದು ವರ್ಷದೊಳಗಾಗಿ ಮುಗಿಸುವಂತಹ ಕೆಲಸ ಆಗಬೇಕಾಗಿದೆ ಎಂದಿದ್ಧಾರೆ.
ದಾವಣಗೆರೆ(ಸೆ.10): ಕೆರೆ ಯೋಜನೆಗಳಿಗೆ ಹಣ ಮಂಜೂರಾಗದೇ ಇದ್ದರೆ ತರಳಬಾಳು ಶ್ರೀಗಳ ಆಶಯದಂತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲು ಮುಂದಾಗಿದ್ದೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಜನಸಮೂಹದೆದುರು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ
ಸಿರಿಗೆರೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಸದಾ ಕಾಲ ಬರದ ನಾಡು. ಇಲ್ಲಿ ಕುಡಿಯುವ ನೀರಿಗೂ ತತ್ವಾರ. ಹೀಗಿದ್ದರೂ ಈ ಭಾಗದ ಅಡಿಕೆ ಬೆಳೆಗಾರರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಹಣ ಮತ್ತು ಕೂಡಿಟ್ಟುಕೊಂಡಿದ್ದ ಬಂಗಾರವನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೆರೆ ಯೋಜನೆಗಳಿಗೆ ಹಣ ಮಂಜೂರಾಗದೇ ಇದ್ದರೆ ತರಳಬಾಳು ಶ್ರೀಗಳ ಆಶಯದಂತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲು ಮುಂದಾಗಿದ್ದೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದ್ದಾರೆ.
ಬಿಜೆಪಿ ಪ್ರಭಾವಿ ಸರ್ಟಿಫಿಕೇಟ್, ಕಾಂಗ್ರೆಸ್ ನಲ್ಲಿರುವ ಉತ್ತಮ ನಾಯಕ ಡಿಕೆಶಿ!
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಕೇವಲ ಒಂದು ತಿಂಗಳ ಅವಧಿಯಲ್ಲಿ ಬೃಹತ್ ಮೊತ್ತದ ಯೋಜನೆಗೆ ಹಣ ಬಿಡುಗಡೆಯಾಗಿದೆ. ಇನ್ನು ಎರಡು ತಿಂಗಳುಗಳಲ್ಲಿಯೇ ಟೆಂಡರ್ ಕರೆಯುಂತಹ ಕೆಲಸ ನಡೆಯಲಿದೆ. ಹೇಗಾದರೂ ಸರಿ ಈ ಯೋಜನೆಯನ್ನು ಒಂದು ವರ್ಷದೊಳಗಾಗಿ ಮುಗಿಸುವಂತಹ ಕೆಲಸ ಆಗಬೇಕಾಗಿದೆ ಎಂದು ಚಂದ್ರಪ್ಪ ಎಂದಿದ್ದಾರೆ.
ದಾವಣಗೆರೆ: 15ಕ್ಕೂ ಹೆಚ್ಚು ಜಾನುವಾರುಗಳಿಗೆ ಹುಚ್ಚು ನಾಯಿ ಕಡಿತ