Tumakuru: ದೇಶಕ್ಕೆ ಕಾಂಗ್ರೆಸ್‌ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ: ಡಾ.ಜಿ.ಪರಮೇಶ್ವರ್‌

By Govindaraj SFirst Published Dec 2, 2022, 11:59 PM IST
Highlights

ಕನ್ನಡ ಭಾಷೆ, ಸಂಸ್ಕೃತಿ, ಸ್ವಾಭಿಮಾನ ದೇಶದಲ್ಲಿ ವೈಶಿಷ್ಟ್ಯವಾಗಿದ್ದು ಅದಕ್ಕೆ ದಕ್ಕೆ ಬಂದರೆ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೊರಟಗೆರೆ (ಡಿ.02): ಕನ್ನಡ ಭಾಷೆ, ಸಂಸ್ಕೃತಿ, ಸ್ವಾಭಿಮಾನ ದೇಶದಲ್ಲಿ ವೈಶಿಷ್ಟ್ಯವಾಗಿದ್ದು ಅದಕ್ಕೆ ದಕ್ಕೆ ಬಂದರೆ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ತಾಲೂಕಿನ ಕೋಳಾಲ ಹೋಬಳಿ ಕೇಂದ್ರದಲ್ಲಿ ಕೊಳಾಲದ ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗ, ಶ್ರೀ ಗಜಾನನ ಗೆಳೆಯರ ಬಳಗ ಕಾಲೇಜ್‌ ಕ್ರಾಸ್‌ ಮತ್ತು ವರಸಿದ್ದಿ ವಿನಾಯಕ ಬಳಗ ತೇರಿನ ಬೀದಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ 67 ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯು ಹೆಚ್ಚು ಜ್ಞಾನಪೀಠ ಪಡೆದ ಸಾಹಿತಿಗಳನ್ನು ಸಂಪಾದಿಸಿದೆ, ನಮ್ಮ ಔದಾರ್ಯಕ್ಕೆ ದೇಶದ ಎಲ್ಲಾ ಭಾಷೆಯ ಮತ್ತು ಹೊರದೇಶದ ಜನರು ನೆಮ್ಮದಿಯಾಗಿ ನಮ್ಮ ನಾಡಿನಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದರು.

ದೇಶಕ್ಕೆ ಕಾಂಗ್ರೆಸ್‌ ಪಕ್ಷ ಸಾಕಷ್ಟುಕೊಡಿಗೆ ನೀಡಿದೆ, ಸ್ವಾತಂತ್ರದ ನಂತರ ಸಂಕಷ್ಟದಲ್ಲಿ ಇದ್ದ ದೇಶವನ್ನು ಪಕ್ಷವು ಪಂಚವಾರ್ಷಿಕ ಯೋಜನೆ ಮುಖಾಂತರ ಅಭಿವೃದ್ಧಿಗೊಳಿದೆ. ದೇಶಕ್ಕಾಗಿ ತ್ಯಾಗಬಲಿದಾನ ಮಾಡಿದೆ ಎಂದ ಅವರು 2008 ರಲ್ಲಿ ಮಧುಗಿರಿ ಕ್ಷೇತ್ರದಿಂದ ಕೊರಟಗೆರೆ ಕ್ಷೇತ್ರಕ್ಕೆ ಬಂದಾಗ ಒಬ್ಬ ವ್ಯಕ್ತಿ ಈ ಭಾಗಕ್ಕೆ ನೀರಾವರಿ ಯೋಜನೆ ಮಾಡುವಂತೆ ಕೇಳಿದರು, ಅದರಂತೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಈ ಭಾಗಕ್ಕೆ ಎತ್ತಿನಹೊಳೆ ನೀರಾವರಿ ಯೋಜನೆ ತರಲಾಯಿತು. ಸಮ್ಮಿಶ್ರ ಸರಕಾರದಲ್ಲಿ ನಾನು ಉಪಮುಖ್ಯಮಂತ್ರಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಕಾಲದಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದರು.

Tumakuru: ಬೆಂಗಳೂರು ಮೂಲದವರಿಗೆ ಜಮೀನು ನೀಡಲ್ಲ: ಡಾ.ಜಿ.ಪರಮೇಶ್ವರ್‌

ಈ ಭಾಗದ ಜನರ ಕೋರಿಕೆಯಂತೆ ಕೋಳಾಲಕ್ಕೆ ನೂತನ ಪೋಲಿಸ್‌ ಠಾಣೆಯನ್ನು ಮತ್ತು ಇಲ್ಲಿನ ವಿದ್ಯಾರ್ಥಿಗಳ ವ್ಯಾಸಂಗಕ್ಕೆ 32 ಕೋಟಿ ರು.ಗಳ ವೆಚ್ಚದಲ್ಲಿ ಇಂದಿರಾಗಾಂಧಿ ವಸತಿ ಶಾಲೆಯನ್ನು ಮಂಜೂರು ಮಾಡಲಾಗಿದೆ. ಕರೋನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನೊಂದಿತರ ಪ್ರತಿ ಮನೆಗೂ ವೈದ್ಯರನ್ನು ಕಳುಹಿಸಿ ತಪಾಸಣೆ ಮಾಡಿಸಿ, ಉಚಿತ ವೈದ್ಯಕೀಯ ಕಿಟ್‌ ಕೊಟ್ಟು ಹಾಗೂ ಬಡವರಿಗೆ, ವಾರಿಯ​ರ್‍ಸ್ಗೆ ಆಹಾರ ಕಿಟ್‌ ನೀಡಿದ್ದೇನೆ. ನನ್ನನ್ನು ನಂಬಿ ಆರಿಸಿರುವ ಜನರಿಗೆ ನಾನು ಸೇವೆಮಾಡಿ ಋುಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ನನ್ನ ವಿರೋಧಿಗಳ ಟೀಕೆಗೆ ಕ್ಷೇತ್ರ ಅಭಿವೃದ್ಧಿ, ಜನರ ಸೇವೆಯೇ ಉತ್ತರವಾಗಿದೆ ಎಂದರು.

Tumakuru: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಜಿ.ಪರಮೇಶ್ವರ್‌

ಕಾರ್ಯಕ್ರಮದಲ್ಲಿ ಕಲ​ರ್‍ಸ್ ಕನ್ನಡ ಖ್ಯಾತಿಯ ಮಜಾ ಟಾಕೀಸ್‌ ನ ರೆಮೋ ಆಕೇಸ್ಟ್ರಾ ತಂಡ ಜನರನ್ನು ರಂಜಿಸಿತು. ಈ ಸಂದರ್ಭದಲ್ಲಿ ಮಾಜಿ ಕೌಶಲ್ಯಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ, ಮಾಜಿ ತಾ.ಪಂ ಅಧ್ಯಕ್ಷ ಕೆಂಪಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಬೂಚನಹಳ್ಳಿ ವೆಂಕಟೇಶ್‌, ಪ.ಪಂ ಸದಸ್ಯ ಎ.ಡಿ.ಬಲರಾಮಯ್ಯ, ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷರುಗಳಾದ ಅರಕೆರೆಶಂಕರ್‌, ಕೋಡ್ಲಹಳ್ಳಿ ಅಶ್ವಥ ನಾರಾಯಣ, ಮಹಿಳಾ ಅಧ್ಯಕ್ಷೆ ಜಯಮ್ಮ, ಗ್ರಾ.ಪಂ. ಸದಸ್ಯರು ಸಿದ್ದಪ್ಪ, ಲಕ್ಷ್ಮೀಶ್‌, ವಸಂತಕುಮಾರಿ ರಾಜು, ಮುಖಂಡರಾದ ಗಿರೀಶ್‌, ಚಂದ್ರು, ಅರುಣ್‌ಕುಮಾರ್‌, ಕೆ.ಪಿ.ಕುಮಾರ್‌, ಶಬ್ಬೀರ್‌ ಷಾಷ ಸೇರಿದಂತೆ ಇತರರು ಹಾಜರಿದ್ದರು.

click me!