ಪಕ್ಷ ಬದಲಾಯಿಸಲ್ಲ, ಬಿಜೆಪಿಯಲ್ಲಿಯೇ ನಿವೃತ್ತಿ : ಎಂಟಿಬಿ

Published : Dec 03, 2022, 08:30 AM IST
 ಪಕ್ಷ ಬದಲಾಯಿಸಲ್ಲ, ಬಿಜೆಪಿಯಲ್ಲಿಯೇ ನಿವೃತ್ತಿ : ಎಂಟಿಬಿ

ಸಾರಾಂಶ

ಇನ್ನು ಮುಂದೆ ಪಕ್ಷ ಬದಲಾಯಿಸುವುದಿಲ್ಲ. ಬಿಜೆಪಿಯಲ್ಲಿದ್ದುಕೊಂಡೇ ನಿವೃತ್ತಿಯಾಗುತ್ತೇನೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಹೇಳಿದರು.

 ಗಂಗಾವತಿ (ಡಿ.03): ಇನ್ನು ಮುಂದೆ ಪಕ್ಷ ಬದಲಾಯಿಸುವುದಿಲ್ಲ. ಬಿಜೆಪಿಯಲ್ಲಿದ್ದುಕೊಂಡೇ ನಿವೃತ್ತಿಯಾಗುತ್ತೇನೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟು ಬಂದಿದ್ದಕ್ಕೆ ಕಾರ್ಯಕರ್ತರು ಬೇಜರಾಗಿದ್ದರಿಂದ ಪರಾಭವಗೊಂಡೆ ಎಂದರು.

ಬಿಜೆಪಿಯಲ್ಲಿ (BJP)  ಹೊಸಬರಿಗೆ ಅವಕಾಶ ನೀಡುತ್ತದೆಯೇ ಎನ್ನುವ ಪ್ರಶ್ನೆಗೆ, ಗೆಲ್ಲುವ ಅಭ್ಯರ್ಥಿಗಳಿಗೆ ಹೈಕಮಾಂಡ್‌ ಗುರುತಿಸಿ ಟಿಕೆಟ್‌ ನೀಡುತ್ತದೆ ಎಂದರು.

2023ರ ಚುನಾವಣೆಯಲ್ಲಿ (Election)  ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದ ಅವರು, ಕೋಲಾರದಲ್ಲಿ ಸಿದ್ದರಾಮಯ್ಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಕಡೆ ಪ್ರವಾಸ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಇನ್ನು ಕ್ಷೇತ್ರ ನಿಗದಿ ಮಾಡಿಕೊಂಡಿಲ್ಲ ಎಂದು ಟೀಕಿಸಿದರು.

ಕುರುಬ ಸಮಾಜ ಮೀಸಲಾತಿ ಕೊಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಕಾನೂನು ಅಡಿಯಲ್ಲಿ ಮೀಸಲಾತಿ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಇದ್ದರು.

ಕಣ್ಣೀರಿಟ್ಟ ಎಂಟಿಬಿ

ಚಿಕ್ಕಬಳ್ಳಾಪುರ : ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರೊಂದಿಗೆ ಭಾಗವಹಿಸಿದ್ದ ಜಿಲ್ಲಾಡಳಿತ ಸಚಿವ ಎಂಟಿಬಿ ನಾಗರಾಜ್‌, 2019 ರ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಸೋತ ಬಗ್ಗೆ ತೀವ್ರ ನೊಂದುಕೊಂಡು ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ಜನತೆ ನಮ್ಮ ಅಭಿವೃದ್ದಿ ಕಾರ್ಯಗಳನ್ನು ಮರೆಯಬಾರದು. ಯಾವ ಶಾಸಕರು, ಏನು ಕೆಲಸ ಮಾಡಿದ್ದಾರೆಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಎಂದರು.

ಕೆಲಸ ಮಾಡಿದವರನ್ನು ಮರೆಯಬೇಡಿ: 5 ವರ್ಷ, 3 ವರ್ಷದಲ್ಲಿ ಯಾವ ಸರ್ಕಾರ, ಶಾಸಕರು, ಮಂತ್ರಿಗಳು ಏನು ಮಾಡಿದ್ದಾರೆಂಬುದನ್ನು ಜ್ಞಾನಪಕದಲ್ಲಿ ಇಟ್ಟುಕೊಳ್ಳಬೇಕು. ಜ್ಞಾಪಕ ಇರುತ್ತದೆ. ಆದರೆ ಚುನಾವಣೆ ಬಂದ 4, 5 ದಿನದಲ್ಲಿ ಎಲ್ಲವನ್ನು ಮರೆತು ಬಿಡುತ್ತಾರೆ. ಆದರೆ ಮೊನ್ನೆ ನಡೆದ ಚುನಾವಣೆಯಲ್ಲಿ ನಾನು ಸೋಲಬೇಕಾಗಿತ್ತೇ (ಹೊಸಕೋಟೆ ಉಪ ಚುನಾವಣೆ) ಎಂದು ನರೆದಿದ್ದ ಜನರನ್ನು ಪ್ರಶ್ನಿಸಿದ ಸಚಿವ ಎಂಟಿಬಿ ನಾಗರಾಜ್‌, ಆದರೂ ನನ್ನನ್ನು ಕೂಡ ಸೋಲಿಸಿ ಬಿಟ್ಟರು ಎಂದರು.

ನಾನು ಎಂದಿಗೂ ಸಹ ನಿಮಗೆ ಚಿರಋಣಿಯಾಗಿದ್ದೇನೆ: ಎಚ್‌.ಸಿ.ಮಹದೇವಪ್ಪ

ಸೋಲಿನಲ್ಲಿ ನನ್ನದು ಕೂಡ ತಪ್ಪಿದೆ. ನಾವು ಇಬ್ಬರು (ಡಾ.ಕೆ.ಸುಧಾಕರ್‌) ಕಾಂಗ್ರೆಸ್‌ ಪಕ್ಷ ಬಿಟ್ಟು ಹೊರ ಬಂದೆವು. ಈ ಪುಣ್ಯಾತ್ಮನನ್ನು ಗೆಲ್ಲಿಸಿದರು. ಆದರೆ ನಾನು ಸೋತು ಬಿಟ್ಟೆ. ನನಗೆ ಆದೇ ನೋವು. ಆದರೆ ನನ್ನ ಸೋಲಿಸಿದರೂ ನನಗೆ ಕಷ್ಟಬರಲಿಲ್ಲ. ನಾನು ಚೆನ್ನಾಗಿಯೆ ಇದ್ದೇನೆ. ಆದರೆ ತಾಲೂಕಿನ ಅಭಿವೃದ್ದಿ, ಬಡವರ ಸೇವೆ ಮಾಡುವ ಅವಕಾಶ ಹೋಯಿತು ದೇವರೇ ಎಂದು ಎಂಟಿಬಿ ನಾಗರಾಜ್‌ ಭಾವುಕವಾಗಿ ನುಡಿದರು.

ಎತ್ತಿನ ಹೊಳೆ ಯೋಜನೆಗೆ 23 ಸಾವಿರ ಕೋಟಿ: ಈ ಭಾಗದಲ್ಲಿನ ನೀರಿನ ಭವಣೆಯನ್ನು ನೀಗಿಸಲು ಪ್ರಗತಿಯಲ್ಲಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳಿಗೆ 23 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಸದ್ಯದಲ್ಲೇ ಸಚಿವ ಸಂಪುಟ ಸಭೆ ಕರೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರ ಕೈಗೊಳ್ಳಲಿದ್ದಾರೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಮಂಚೇನಹಳ್ಳಿಯ ಜರಬಂಡಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಣಾಡಿದ ಅವರು,ಕಂದಾಯ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಇದ್ದಂತಹ ತೊಡಕುಗಳನ್ನು ನಿವಾರಿಸುವಲ್ಲಿ ಕಂದಾಯ ಸಚಿವರು ದಿಟ್ಟಕ್ರಮಗಳನ್ನು ಕೈಗೊಂಡಿದ್ದಾರೆಂದರು.

ರಾಜ್ಯದಲ್ಲೇ ದಾಖಲೆ: ಚಿಕ್ಕಬಳ್ಳಾಪುರ ವಿಧಾನ ಸಭಾ ವ್ಯಾಪ್ತಿಯಲ್ಲಿ 22 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನಗಳನ್ನು ಸದ್ಯದಲ್ಲೆ ವಿತರಿಸಲು ಸ್ಥಳದಲ್ಲಿಯೇ ಮಂಜೂರಾತಿ ನೀಡಿರುವುದಾಗಿ ಕಂದಾಯ ಸಚಿವರು ಘೋಷಿಸಿದ್ದಾರೆ ಅದರಂತೆ ಕ್ಷೇತ್ರದ ಕಡುಬಡವರಿಗೆ ಆದ್ಯತೆಯ ಮೇಲೆ ವಿತರಿಸಲಾಗುವುದು. ಅದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ರೀತಿಯ ನಿವೇಶನ ಹಂಚಿಕೆಯು ರಾಜ್ಯದ ಯಾವ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರಲಿಕ್ಕಿಲ್ಲ ಇದೊಂದು ದಾಖಲೆಯಾಗಲಿದೆ. 216 ಮಂದಿ ಪೌತಿ ಖಾತೆ ಪಹಣಿ ವಿತರಿಸಲಾಗುತ್ತಿದೆ. 7.85 ಕೋಟಿ ರು, ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಸುಧಾಕರ್‌ ವಿತರಿಸಿದರು.

PREV
Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ