ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ತೆಗಳಿ ಹಾಲಿ ಸಿಎಂ ಬಿ ಎಸ್ ಯಡಿಯೂರಪ್ಪ ಬಗ್ಗೆ ಮೆಚ್ಚುಗೆ ಮಹಾಪೂರವನ್ನೇ ಹರಿಸಿದ್ದಾರೆ.
ದಾವಣಗೆರೆ [ಜ.21]: ಸರ್ಕಾರದ ವಿರುದ್ಧ ಹೋದ್ರೆ ನಮ್ಮ ಕೆಲಸ ಆಗಲ್ಲ ಅವರ ಬೆನ್ನು ತಟ್ಟಿ ಜೊತೆಗೆ ಹೋಗಬೇಕು ಹೀಗೆಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವ ಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಯಡಿಯೂರಪ್ಪ ಬಗ್ಗೆ ಮೆಚ್ಚು ಮಾತುಗಳನ್ನಾಡಿದ್ದು, ಅವರು ನಮ್ಮವರು. ಮಠಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ ಮಠಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿವೆ ಎನ್ನುವುದು ಮಾತ್ರ ಗೊತ್ತಿಲ್ಲ ಎಂದರು.
ನಮ್ಮ ಜಿಲ್ಲೆಗೆ ಯಡಿಯೂರಪ್ಪ ನಮ್ಮ ಜನಾಂಗದ ಅಧಿಕಾರಿಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬರೀ ಕುರುಬರೇ ಇದ್ರು ಎಂದು ಶಾಮನೂರು ಶಿವಶಂಕರಪ್ಪ ಲೇವಡಿ ಮಾಡಿದರು.
'ಮುಸ್ಲಿಮರ ಬೆಂಬಲ ಬೇಡ, ಹೊನ್ನಾಳಿ-ನ್ಯಾಮತಿ ಕೇಸರಿಮಯ ಮಾಡ್ತೀನಿ!..
ವೀರಶೈವ, ಲಿಂಗಾಯತ ಎನ್ನುವುದನ್ನು ಹೇಗೆ ಶಮನ ಮಾಡಬೇಕು ಎಂದು ಗೊತ್ತಿಲ್ಲ. ಯಡಿಯೂರಪ್ಪ ನನ್ನ ಬೆನ್ನುತಟ್ಟಿ ನಾನಿದ್ದೇನೆ ಎಂದಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದೇನೆ ಎಂದರು.
ಬಿಜೆಪಿ ಸೇರಿದವರು ಈಗ ಅಂತರಪಿಶಾಚಿಗಳು: ಸಿದ್ದು...
ಇನ್ನು ಇದೇ ವೇಳೆ ವಚನಾನಂದ ಸ್ವಾಮೀಜಿಗೆ ಟಾಂಗ್ ನೀಡಿದ ಶಾಮನೂರು ಅತ್ಯಂತ ವೇಗವಾಗಿ ಹೋಗುವುದು ಒಳಿತಲ್ಲ ಎಂದರು. ಪಂಚಮಸಾಲಿಗಳಿಗೆ ಸಚಿವ ಸ್ಥಾನ ಕೇಳಿದ್ದ ಸ್ವಾಮೀಗೆ ಈ ಮೂಲಕ ಉತ್ತರ ನೀಡಿದರು.