ತುಮಕೂರು: ಗದ್ದುಗೆಯಲ್ಲಿ ಶ್ರೀಗಳ 50 ಕೆಜಿಯ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

By Suvarna News  |  First Published Jan 21, 2020, 1:58 PM IST

ತುಮಕೂರು ಸಿದ್ಧಗಂಗಾ ಮಠದಲ್ಲಿ ಶಿವೈಕ್ಯ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯಲ್ಲಿ ಶ್ರೀಗಳ ಬೆಳ್ಳಿಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸಿದ್ಧಗಂಗಾ‌ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಪ್ರತಿಷ್ಠಾಪನೆ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ಶ್ರೀಗಳು ಅಷ್ಟೋತ್ತರ ಪೂಜೆ‌ ನೆರವೇರಿಸಿದ್ದಾರೆ. ಶ್ರೀಗಳ ಜೊತೆ ವಿವಿಧ ಪೀಠಗಳ ಮಠಾಧೀಶರು ಭಾಗಿಯಾಗಿಯಾಗಿದ್ದಾರೆ.


ತುಮಕೂರು(ಜ.21): ತುಮಕೂರು ಸಿದ್ಧಗಂಗಾ ಮಠದಲ್ಲಿ ಶಿವೈಕ್ಯ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯಲ್ಲಿ ಶ್ರೀಗಳ ಬೆಳ್ಳಿಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸಿದ್ಧಗಂಗಾ‌ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಪ್ರತಿಷ್ಠಾಪನೆ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ಶ್ರೀಗಳು ಅಷ್ಟೋತ್ತರ ಪೂಜೆ‌ ನೆರವೇರಿಸಿದ್ದಾರೆ. ಶ್ರೀಗಳ ಜೊತೆ ವಿವಿಧ ಪೀಠಗಳ ಮಠಾಧೀಶರು ಭಾಗಿಯಾಗಿಯಾಗಿದ್ದಾರೆ.

ಬೆಳ್ಳಿಯ ಮೂರ್ತಿಯನ್ನು ಹೂಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಮಠಾಧೀಶರೆಲ್ಲರೂ ಸೇರಿ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ. ಶ್ರೀಗಳ ಗದ್ದುಗೆ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಈ ವಿಶೇಷ ಸಂದರ್ಭಕ್ಕೆ ಭಕ್ತರು ಸಾಕ್ಷಿಯಾದರು. ಪ್ರತಿಮೆ ಮೂರಡಿ ಎತ್ತರವಿದ್ದು, ಸುಮಾರು 50 ಕೆಜಿ ಭಾರವಿದೆ.

Tap to resize

Latest Videos

ಸಿದ್ದಗಂಗಾ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆ: ವಿವಿಧ ಮಠಾಧೀಶರಿಂದ ಗದ್ದುಗೆ ಪೂಜೆ

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅವರು ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಹಾಗೆಯೇ ಗದ್ದುಗೆ ಸಮೀಪದಲ್ಲಿಯೇ ಬಿಲ್ಪಪತ್ರೆ ಗಿಡವನ್ನೂ ನೆಟ್ಟಿದ್ದರು.

click me!