ಕೋವಿಡ್‌ ಹೆಸರಲ್ಲಿ ಬಿಜೆಪಿ ಸರ್ಕಾರಗಳಿಂದ ಲೂಟಿ: ಪರಮೇಶ್ವರನಾಯ್ಕ

By Kannadaprabha NewsFirst Published Jul 9, 2021, 3:39 PM IST
Highlights

* ದೇಶದ ಜನರಿಗೆ ಬಲವಂತದ ತೆರಿಗೆ 
* ಬಿಜೆಪಿ ವಿರುದ್ಧ ಹರಿಹಾಯ್ದ ಪಿ.ಟಿ. ಪರಮೇಶ್ವರನಾಯ್ಕ 
* ಬಡವರ ವಿರೋಧಿ ಕಾರ್ಯಕ್ರಮ ಹಾಕಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ

ಹರಪನಹಳ್ಳಿ(ಜು.09):  ಕೋವಿಡ್‌ ಹೆಸರಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೋಟ್ಯಂತರ ರು. ಲೂಟಿ ಮಾಡಿವೆ ಎಂದು ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ನೂತನವಾಗಿ ಆರಂಭವಾದ ಕಾಂಗ್ರೆಸ್‌ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿ, ಅಗತ್ಯ ವಸ್ತುಗಳು ಗಗನಕ್ಕೇರಿವೆ. ದೇಶದ ಜನರಿಗೆ ಬಲವಂತವಾಗಿ ತೆರಿಗೆ ಹಾಕುತ್ತಿದ್ದಾರೆ ಎಂದು ದೂರಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ವಿರೋಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಬಹಳ ವರ್ಷಗಳ ನಂತರ ಇಲ್ಲಿ ಕಾಂಗ್ರೆಸ್‌ ಕಚೇರಿ ಆರಂಭಗೊಂಡಿದೆ. ಪಕ್ಷವನ್ನು ಸಂಘಟಿಸಿ ಎಂದರು.

ಮಾಜಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ಕರುಣೆ ಮತ್ತು ಮಾನವೀಯತೆ ಇಲ್ಲದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಾಗಿವೆ. ಬಿಜೆಪಿಯವರು ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಬಿಟ್ಟರೆ ಇನ್ನೇನೂ ಮಾಡಿಲ್ಲ ಎಂದು ದೂರಿದರು.

ಕೋವಿಡ್‌ಗಿಂತ ಬಿಜೆಪಿ ಡೇಂಜರ್‌: ಖಾದರ್‌

ಡಾ. ಬಿ.ಆರ್‌. ಅಂಬೇಡ್ಕರ್‌ ಮಾಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳುವ ಉದ್ದೇಶ ಬಿಜೆಪಿ ಹೊಂದಿದೆ ಎಂದ ಅವರು, ಖಾಸಗೀಕರಣ ಮಾಡುವವರಿಗೆ ದೇಶಪ್ರೇಮಿ ಪಟ್ಟ ಮತ್ತು ರಾಷ್ಟ್ರೀಕರಣ ಮಾಡುವವರಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ಕೋವಿಡ್‌ಗಿಂತ ಬಿಜೆಪಿ ಡೇಂಜರ್‌ ಎಂದು ಆರೋಪಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ವಿಜಯಾಸಿಂಗ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವಯೋಗಿ, ಮಹಿಳಾ ಅಧ್ಯಕ್ಷೆ ಆಶಾಲತಾ, ಎಂ.ಪಿ. ವೀಣಾ, ಎಚ್‌.ಕೆ. ಹಾಲೇಶ, ಶಶಿಧರ ಪೂಜಾರ, ಡಾ. ಉಮೇಶಬಾಬು, ಪಿ.ಟಿ. ಭರತ್‌, ಯರಬಳ್ಳಿ ಉಮಾಪತಿ, ಪ್ರಕಾಶ್‌ ಪಾಟೀಲ್‌, ಡಾ. ಮಂಜುನಾಥ ಉತ್ತಂಗಿ, ಆಲದಹಳ್ಳಿ ಷಣ್ಮುಖಪ್ಪ ಇತರರು ಇದ್ದರು.
 

click me!