* ಪೆಟ್ರೋಲ್, ಡೀಸೆಲ್ ದರ ವಿರೋಧಿಸಿ ಪ್ರತಿಭಟನೆ
* ಅಬ್ ಕೀ ಬಾರ್ ಅಮ್ ಆದ್ಮಿಕಾ ಅಂತಿಮ ಸಂಸ್ಕಾರ ಮಾಡಲು ಹೊರಟ ಮೋದಿ
* ಕೋವಿಡ್ ಸಮಯದಲ್ಲಿ ಉದ್ಯೊಗ ಇಲ್ಲದೇ ನಿತ್ಯದ ಜೀವನಕ್ಕೂ ಪರದಾಟ
ಚಿತ್ತಾಪುರ(ಜೂ.17): ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರವು ದೇಶದ ಜನರ ಹಿತ ಕಾಪಾಡಿಕೊಂಡು ಬರಲು ಮಾಡಿರುವ ಎಲ್ಲಾ ಪ್ರಯತ್ನಗಳನ್ನು ಈಗಿನ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಕೇವಲ 7 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬೆಲೆ ಏರಿಕೆ ಮಾಡಿ ದುಡಿಯುವ ಕೈಗಳಿಗೆ ದುರ್ಬಲ ಮಾಡುವ ಪ್ರಯತ್ನವನ್ನು ಮಾಡುತ್ತಿವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಪಟ್ಟಣದ ಗಾಯತ್ರಿ ಪೆಟ್ರೊಲ್ ಪಂಪ್‌ನಲ್ಲಿ ಪೆಟ್ರೋಲ್, ಡೀಸೆಲ್ ದರಗಳು 100 ನಾಟೌಟ್ ವಿರೋಧಿಸಿ ಪ್ರತಿ ಬಿಲ್‌ಗೆ 50 ರು. ಪಾವತಿಸುವ ಮೂಲಕ ವಿನೂತನ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವಾಗ ಜನರಿಗೆ ನೀಡಿದ್ದ ಭರವಸೆ ‘ಬಹುತ್‌ಹುಯಿ ಮೆಂಗಾಯಿಕಿ ಮಾರ್, ಅಬ್ ಕೀ ಬಾರ ಮೊದಿ ಸರ್ಕಾರ’ ಎನ್ನುವ ಘೋಷಣೆಯೊಂದಿಗೆ ಅಧಿಕಾರ ಪಡೆದು ಬಡವರ ಪರ ಯಾವುದೇ ಆರ್ಥಿಕ ಪ್ಯಾಕೇಜ್ ನೀಡದೇ ರೈತರ ಪ್ರತಿಭನೆಗಳು, ನಿರುದ್ಯೊಗ ಸೃಷ್ಟಿ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುವದರ ಮೂಲಕ ಅಬ್ ಕೀ ಬಾರ್ ಅಮ್ ಆದ್ಮಿಕಾ ಅಂತಿಮ ಸಂಸ್ಕಾರ ಮಾಡಲು ಹೊರಟಿದೆ ಎಂದು ಟೀಕಿಸಿದ್ದಾರೆ.
ಕಲಬುರಗಿ: ಅತ್ಯಾಚಾರಯತ್ನಕ್ಕೆ ಒಳಗಾಗಿದ್ದ ಕೋವಿಡ್ ಸೋಂಕಿತೆ ಸಾವು
ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಮ ವರ್ಗ ಹಾಗೂ ಕಡು ಬಡವರಿಗೆ ಅನುಕೂಲ ಮಾಡಿಕೊಡುವ ಬದಲು ಅವರ ನಿತ್ಯದ ಬದುಕು ದುಸ್ತರ ಮಾಡುವ ಕೆಲಸವನ್ನು ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ಉದ್ಯೊಗ ಇಲ್ಲದೇ ನಿತ್ಯದ ಜೀವನಕ್ಕೂ ಪರದಾಡುತ್ತಿರುವ ಸಮಯದಲ್ಲಿ ಅವರಿಗೆ ಅನುಕೂಲ ಮಾಡುವ ಬದಲು ಬೆಲೆ ಏರಿಕೆಯನ್ನು ಮಾಡುತ್ತಾ ಅವರ ಜೀವನದ ಜೊತೆ ಆಟವಾಡುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೆದಾರ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಉಪಾಧ್ಯಕ್ಷೆ ಶೃತಿ ಪೂಜಾರಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಮರತೂರ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್, ನಾಗಯ್ಯ ಗುತ್ತೆದಾರ, ನಾಗರೆಡ್ಡಿ ಗೊಪಶೆನ್, ಮಹಾಂತಪ್ಪ ಸಂಗಾವಿ, ಶಿವರುದ್ರ ಭೀಣಿ, ಶಿವಾಜಿ ಕಾಶಿ, ಶರಣು ಡೊಣಗಾಂವ, ಮುಕ್ತಾರ ಪಟೇಲ್, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ್, ಸಾಬಣ್ಣ ಕಾಶಿ ಇದ್ದರು.