ಕಲಬುರಗಿ: ಅತ್ಯಾಚಾರಯತ್ನಕ್ಕೆ ಒಳಗಾಗಿದ್ದ ಕೋವಿಡ್ ಸೋಂಕಿತೆ ಸಾವು
* ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ ಮಹಿಳೆ ಸಾವು
* ಕೊರೋನಾ ಸೋಂಕಿತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆ್ಯಂಬುಲೆನ್ಸ್ ಡ್ರೈವರ್
* ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದ ಮಹಿಳೆ
ಕಲಬುರಗಿ(ಜೂ.17): ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ನರಳಿ ಚಿಕಿತ್ಸೆಗೆ ದಾಖಲಾಗಿ ಆಸ್ಪತ್ರೆಯಲ್ಲೇ ಖಾಸಗಿ ಆ್ಯಂಬುಲೆನ್ಸ್ ಚಾಲಕನಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ 25 ವರ್ಷದ ಮಹಿಳೆ ಬುಧವಾರ ಸಾವನ್ನಪ್ಪಿದ್ದಾರೆ.
ಕಳೆದ ಜೂ.8 ರಂದು ಖಾಸಗಿ ಆ್ಯಂಬುಲೆನ್ಸ್ ಚಾಲಕ ಫಿಲ್ಟರ್ ಬೆಡ್ ನಿವಾಸಿ ಪ್ರೇಮಕುಮಾರ್ ಅಲಿಯಾಸ್ ಪಿಂಟು (25) ಸೋಂಕಿತ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದರಿಂದ ಎಚ್ಚೆತ್ತ ಮಹಿಳೆ ಜೋರಾಗಿ ಕಿರುಚಿದ್ದಳು, ಇದರಿಂದ ಎಚ್ಚರಗೊಂಡ ಸುತ್ತಲಿನ ಬೆಡ್‌ಗಳ ರೋಗಿಗಳು ಆತನನ್ನು ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡಿದ್ದ. ನಂತರ ಪಿಂಟುನನ್ನು ಬ್ರಹ್ಮಪೂರ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದರು.
ಕಲಬುರಗಿ 45 ವರ್ಷದಿಂದಲೂ ಅಭಿವೃದ್ಧಿಯಲ್ಲಿ ಹಿಂದೆ..!
ಕೋವಿಡ್ ಸೋಂಕು ತೀವ್ರವಾಗಿ ಕಾಡಿದ್ದರಿಂದಲೇ ಆ ಮಹಿಳೆ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದಳು. ಮಹಿಳೆಯನ್ನು ಕೋವಿಡ್ ವಾರ್ಡ್ ಒಳಗಡೆಯೇ ಅದೇಗೆ ಆರೋಪಿ ಪಿಂಟು ಅತ್ಯಾಚಾರಕ್ಕೆ ಯತ್ನಿಸಿದ ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.
ಈ ಪ್ರಕರಣದ ಕುರಿತಂತೆ ಜಿಲ್ಲಾಧಿಕಾರಿ ಜ್ಯೋತ್ಸಾನ, ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್, ಡಿಎಚ್‌ಒ ಡಾ. ಶರಣಬಸಪ್ಪ ಗಣಜಲಖೇಡ್ ಇವರನ್ನು ಸಂಪರ್ಕಿಸಲು ಯತ್ನಿಸಿದರೂ ಫೋನ್ ಕರೆಗಳಿಗೆ ಸ್ಪಂದಿಸಲಿಲ್ಲ.