* ಯೋಧನ ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ
* ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ ಎಂಬುದು ಗ್ರಾಮಸ್ಥರ ವಾದ
* ಬೆಳಗಾವಿ ತಾಲೂಕಿನ ಗೌಂಡವಾಡದ ಗ್ರಾಮದಲ್ಲಿ ನಡೆದ ಘಟನೆ
ಬೆಳಗಾವಿ(ಜೂ.17): ಜಮೀನು ವಿವಾದ ಸಂಬಂಧ ಗ್ರಾಮಸ್ಥರು ತಮ್ಮ ಕುಟುಂಬಕ್ಕೆ ಹಾಕಿದ್ದು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಗೌಂಡವಾಡದ ರೊಬ್ಬರು ಬುಧವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ದೂರು ಸಲ್ಲಿಸಿದ್ದಾರೆ.
ತಮ್ಮ ಜಮೀನಿಗೆ ಯಾರೂ ಕೆಲಸಕ್ಕೆ ಬರುತ್ತಿಲ್ಲ. ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ ವಿಧಿಸಲಾಗುತ್ತಿದೆ ಎಂದು ಯೋಧ ದೀಪಕ ಪಾಟೀಲ ಜಿಲ್ಲಾಧಿಕಾರಿ ಗಮನ ಸೆಳೆದಿದ್ದಾರೆ.
ಬೆಳಗಾವಿ: ಪೊಲೀಸರ ಮೇಲೆಯೇ ಹಲ್ಲೆ, ಐವರ ವಿರುದ್ಧ ಕೇಸ್
ಗ್ರಾಮದ ಗಣಪತಿ, ಕಲ್ಮೇಶ್ವರ, ಕಾಲಭೈರವ ದೇಗುಲಕ್ಕೆ ತಮ್ಮ 5 ಎಕರೆ ಜಮೀನು ಸೇರಿದೆ ಎಂಬುದು ಗ್ರಾಮಸ್ಥರ ವಾದ. ಆದರೆ, ಈ ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ. ಇದೇ ಕಾರಣಕ್ಕೆ ಜೂ.6ರಂದು ಮನೆಗೆ ನುಗ್ಗಿ ಪಿಠೋಪಕರಣ, ಟಿವಿ ಇತರೆ ವಸ್ತುಗಳನ್ನು ಧ್ವಂಸಗೊಳಿಸಲಾಗಿದೆ. ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಕಾಕತಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ.