ಚಾಮರಾಜನಗರ: ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಆರಂಭ

By Kannadaprabha NewsFirst Published Sep 25, 2019, 3:47 PM IST
Highlights

ಆರೋಗ್ಯ ಸಚಿವ ಬಿ. ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯವನ್ನು ಆರಂಭಿಸಿದ್ದಾರೆ. ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಪ್ರಾತ್ಯಕ್ಷಿಕೆ ( ಡೆಮಾಸ್ಟ್ರೇಷನ್) ಕೊಠಡಿಯಲ್ಲಿ ರಾತ್ರಿ 9 ಗಂಟೆಗೆ ಮಲಗುವ ಮೂಲಕ ಆಸ್ಪತ್ರೆ ವಾಸ್ತವ್ಯಕ್ಕೆ ಚಾಲನೆ ನೀಡಿದ್ದಾರೆ. ರಾತ್ರಿ 8.25ರ ವೇಳೆಗೆ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಗೆ ಆಗಮಿಸಿದ ಅವರು ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ಸೇವೆ ವಿಚಾರಿಸಿದ್ದಾರೆ.

ಚಾಮರಾಜನಗರ(ಸೆ.25): ರಾಜ್ಯದ ಗಡಿ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಆಸ್ಪತ್ರೆ ವಾಸ್ತವ್ಯವನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಆರಂಭಿಸಿದ್ದಾರೆ. ಎರಡನೇ ಬಾರಿಗೆ ಆರೋಗ್ಯ ಸಚಿವರಾಗಿ ನೇಮಕವಾದ ಬಳಿಕ ಸರ್ಕಾರಿ  ಆಸ್ಪತ್ರೆಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶ್ರೀರಾಮುಲು ಅವರು ಆಸ್ಪತ್ರೆ ವಾಸ್ತವ್ಯ ಆರಂಭಿಸಿದ್ದು, ಮಂಗಳವಾರ ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಪ್ರಾತ್ಯಕ್ಷಿಕೆ ( ಡೆಮಾಸ್ಟ್ರೇಷನ್) ಕೊಠಡಿಯಲ್ಲಿ ರಾತ್ರಿ 9 ಗಂಟೆಗೆ ಮಲಗುವ ಮೂಲಕ ಆಸ್ಪತ್ರೆ ವಾಸ್ತವ್ಯಕ್ಕೆ ಚಾಲನೆ ನೀಡಿದ್ದಾರೆ.

ರಾತ್ರಿ 8.25ರ ವೇಳೆಗೆ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಗೆ ಆಗಮಿಸಿದ ಅವರು ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ಸೇವೆ ವಿಚಾರಿಸಿದರು. ಕಣ್ಣಿನ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಬೆಡ್ ಮೇಲೆ ಕುಳಿತು ಆತ್ಮೀಯವಾಗಿ ಆರೋಗ್ಯ ವಿಚಾರಿಸಿ, ನಿಮಗೆ ಎಲ್ಲ ಸೌಲಭ್ಯ ನೀಡುತ್ತೇವೆ. ಬೇಗ ಗುಣಮುಖರಾಗಿ ಎಂದು ಧೈರ್ಯ ತುಂಬಿದರು. ಚಿಕಿತ್ಸೆ ನೀಡಿದ ವೈದ್ಯರಿಗೆ ಹಸ್ತಲಾಘವ
ಮಾಡಿದರು. ಬಳಿಕ ವಿವಿಧ ವಾರ್ಡ್‌ಗಳಿಗೆ ತೆರಳಿ ಪರೀಶೀಲನೆ ನಡೆಸಿದರು. ತುರ್ತು ಚಿಕಿತ್ಸಾ ಕೊಠಡಿಗೆ ತರಳಿದ ಅವರು ಕ್ಯಾನ್ಸ್‌ರ್ ಪೀಡಿತರೊಬ್ಬರಿಗೆ ಬೇಕಾದ ಚಿಕಿತ್ಸೆ ಕೊಡಿಸುವ ಅಭಯ ನೀಡಿದರು.

ಸ್ನಾನ ಮತ್ತು ಪೂಜೆಗೆ ವ್ಯವಸ್ಥೆ:

ನಂತರ ವಾಸ್ತವ್ಯ ಸಿದ್ಧಪಡಿಸಲಾಗಿದ್ದ ಪ್ರಾತ್ಯಕ್ಷಿಕೆ ಕೊಠಡಿಗೆ ತೆರಳಿದ ಅವರು ಬಾಳೆ ಹಣ್ಣು ಮತ್ತು ಹಾಲು ಸೇವಿಸಿ ನಿದ್ರೆಗೆ ಜಾರಿದರು. ವಾಸ್ತವ್ಯ ಹೂಡುವ ಕೊಠಡಿಯಲ್ಲಿ ಎರಡು ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಸ್ನಾನ ಮತ್ತು ಪೂಜೆಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಯಾವಾಗಲು ಸ್ವಚ್ಛತೆ ಇರಲಿ:

ವಾಸ್ತವ್ಯಕ್ಕೂ ಮುನ್ನಾ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಯಲ್ಲೂ ವಾಸ್ತವ್ಯ ಮಾಡ ಲಾಗುವುದು. ಮಂಗಳವಾರ ಬೆಳಗ್ಗೆ ೬ ಗಂಟೆಗೆ ಎದ್ದು ವಾಡ್ ಗರ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತೇನೆ. ನಾನು ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗಳು ಯಾವ ರೀತಿ ಸ್ವಚ್ಛತೆಯಿಂದ ಕೂಡಿವೆ. ಅದೇ ರೀತಿಯಲ್ಲಿ ಯಾವಾ
ಗಲೂ ಇರಬೇಕು ಎಂಬುದನ್ನು ಬಯಸುತ್ತೇನೆ ಎಂದು ತಿಳಿಸಿದರು.

ಹೊರಗುತ್ತಿಗೆ ರದ್ದು:

ಈಗಾಗಲೇ ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಂಡಿರುವುದನ್ನು ರದ್ದುಪಡಿಸುವ ಮೂಲಕ ಸ್ಥಳೀಯವಾಗಿ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ ಸ್ಥಳೀಯರಿಗೆ ಉದ್ಯೋಗ ನೀಡಿದಂತಾಗುತ್ತದೆ. ಹೊಸದಾಗಿ ನೇಮಕ ಮಾಡಿಕೊಳ್ಳುವ ಸಿಬ್ಬಂದಿ ಖಾತೆಗೆ ನೇರವಾಗಿ ಸಂಬಳ ಜಮಾವಾಗುವಂತೆ ಮಾಡಲಾಗುವುದು. ಈಗ ಹೊರ ಗುತ್ತಿಗೆ
ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಸಿಬ್ಬಂದಿ ಖಾತೆಗೆ ನೇರವಾಗಿ ಸಂಬಳ ಪಾವತಿಯಾಗುತ್ತಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಜಿಲ್ಲೆ ಇಬ್ಭಾಗಕ್ಕೆ ಬಿಡೊಲ್ಲ: ಶ್ರೀರಾಮುಲು

ಡಿಸಿ ಬಿ.ಬಿ. ಕಾವೇರಿ, ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಎಸ್ಪಿ ಎಚ್.ಡಿ. ಆನಂದ್ ಕುಮಾರ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ರಾಜೇಂದ್ರ ಪ್ರಸಾದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಘುರಾಮ್ ಸರ್ವೇಗಾರ್, ಆರ್ ಎಂಒ ಡಾ. ಕೃಷ್ಣಪ್ರಸಾದ್, ಅರವಳಿಕೆ ತಜ್ಞ ಡಾ. ಮಹೇಶ್ ಬಿಜೆಪಿ ಮುಖಂಡರಾದ ಜಿ. ನಿಜಗುಣರಾಜು, ಎಂ. ರಾಮಚಂದ್ರ, ಗಣೇಶ್ ದಿಕ್ಷೀತ್ ಡಿಎಚ್‌ಒ ಎಂ.ಸಿ. ರವಿ, ಜಿಪಂ ಸದಸ್ಯ ಬಾಲರಾಜು ಇದ್ದರು.

'ಕಾಂಗ್ರೆಸ್ಸಿಗಂಟಿದ ಶಾಪ ಏಳೇಳು ಜನ್ಮಕ್ಕೂ ವಿಮೋಚನೆ ಆಗೋದೇ ಇಲ್ಲ'

click me!