'HDKಗೆ ಏನೋ ಒಂದು ಚಟ, ಅನರ್ಹಗೊಳಿಸಿದ್ದು ಸಿದ್ದರಾಮಯ್ಯ!'

By Web Desk  |  First Published Sep 25, 2019, 4:25 PM IST

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ/ ಬಿಜೆಪಿ ಸರ್ಕಾರ ಆರು ತಿಂಗಳಿನಲ್ಲಿ ಬಿದ್ದು ಹೋಗುತ್ತದೆ/ ಬಿಜೆಪಿಯಲ್ಲಿ ನಲವತ್ತು ಜನ ಅತೃಪ್ತ ಶಾಸಕರಿದ್ದಾರೆ.


ಬಾಗಲಕೋಟೆ(ಸೆ. 25)  6 ತಿಂಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳಲಿದೆ . ಬಿಜೆಪಿ ಪಕ್ಷ ಒಂದು ತೆರನಾದ ಫಿಶ್ ಮಾರುಕಟ್ಟೆಯಂತೆ ಇದೆ ಎಂದು ಶಾಸಕ ಜಮೀರ್ ಅಹಮದ್ ಖಾನ್ ವ್ಯಂಗ್ಯಭರಿತ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್ವೈ ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ. ನನಗೆ ಬಂದಿರೋ ಮಾಹಿತಿ ಪ್ರಕಾರ  40 ಜನ ಬಿಜೆಪಿ ಶಾಸಕರಿಗೆ ಅಸಮಾಧಾನ ಇದೆ. ಖಂಡಿತವಾಗಿಯೂ ಆರು ತಿಂಗಳ ಮೇಲೆ ಬಿಜೆಪಿ ಸರ್ಕಾರ ಇರಲು ಸಾಧ್ಯವಿಲ್ಲ.  ಬೈ ಎಲೆಕ್ಷನ್ ರಿಸಲ್ಟ್ ಅಕ್ಟೋಬರ್ 23 ಕ್ಕೆ ಬರಲಿದೆ.  ಬಿಜೆಪಿ ಸರ್ಕಾರ ಉಳಿಸಿಕೊಳ್ಳೋಕೆ 8 ಸ್ಥಾನ ಗೆಲ್ಲಲೇಬೇಕು.. ಅದು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.

Tap to resize

Latest Videos

ನಾವು , ಜೆಡಿಎಸ್ ಸೇರಿ 14-15 ಸ್ಥಾನ ಗೆಲ್ಲುತ್ತೇವೆ. 6 ತಿಂಗಳು ಮುಂದೆ ಹೋಗಲ್ಲ,ಬೈ ಎಲೆಕ್ಷನ್ ರಿಸಲ್ಟ್ ಬಂದ ಎರಡೇ ದಿನಕ್ಕೆ ಸರ್ಕಾರ ಪತನವಾಗಲಿದೆ ಎಂದು ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ.

ಟಿಪ್ಪು ವೇಷದಲ್ಲಿ ಬಂದು ಹಣ ಹಂಚಿದ ಜಮೀರ್!

ಬಿಜೆಪಿ ಫಿಶ್ ಮಾರ್ಕೆಟ್:  ಉಮೇಶ್ ಕತ್ತಿ ಸಿಎಂ ಆಗುವ ಅರ್ಹತೆ ಹೇಳಿಕೆಗೆ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು ಉಮೇಶ್ ಕತ್ತಿ ಅಷ್ಟೇ ಅಲ್ಲ ಬಿಜೆಪಿಯಲ್ಲಿ ಹಲವಾರು ಜನ ಸಿಎಂ ಆಕಾಂಕ್ಷಿಗಳಿದ್ದಾರೆ. ಅವರ ಹೆಸರು ನಾನು ಹೇಳೋಕೆ ಹೋಗಲ್ಲ.  ಸಿಎಂ ನಾನಾಗ್ಬೇಕು-ನೀನಾಗ್ಬೇಕು ಎಂದು ಬಿಜೆಪಿ ಫಿಶ್ ಮಾರ್ಕೆಟ್ ಆಗಿದೆ.  ಎಲ್ಲರೂ ಸಿಎಂ ಆಗ್ಬೇಕಂತಾರೆ.. ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಒಬ್ರೇ ನಾಯಕರಾಗಿದ್ರು, ಸಿಎಂ ಆಗಿದ್ರು.  ಉಮೇಶ್ ಕತ್ತಿ ತರಹ ಬಹಳ ಬಹಳಷ್ಟು ಶಾಸಕರು ನಾನೇ ಸಿಎಂ ಆಗ್ಬೇಕೆಂದು ಎದ್ದು ನಿಂತಿದ್ದಾರೆ.. ಸಿಎಂ ಬಿಎಸ್ವೈ ಬಿಜೆಪಿಯ ಯಾವ ಶಾಸಕರ ಮಾತು ಕೇಳುತ್ತಿಲ್ಲ ಎಂದು ವ್ಯಂಡಗ್ಯವಾಡಿದರು.

ಡಿಕೆಶಿ ಬಂದರೆ ಆನೆಬಲ:  ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಬಿಜೆಪಿ ಪ್ಲ್ಯಾನ್ ಮಾಡಿ ಡಿಕೆಶಿಯನ್ನು ಒಳಗೆ ಹಾಕಿದೆ. ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಇವತ್ತು ಬೇಲ್ ಆಗುತ್ತೆ ಅನ್ನೋ ವಿಶ್ವಾಸವೂ ಇದೆ. ಡಿಕೆಶಿ ಹೊರಬಂದ್ರೆ ನಮಗೆ ಆನೆಬಲ ಬಂದಂತಾಗುತ್ತೆ ಎಂದರು.

ಒಂದು ವಾರ್ ವಾಚ್ ಮ್ಯಾನ್ ಆಗ್ತಿದ್ದೆ:  ಬೈ ಎಲೆಕ್ಷನ್ ನಲ್ಲಿ 2 ಸ್ಥಾನ ಗೆದ್ದು ಬಿಎಸ್ವೈ ಸಿಎಂ ಆಗ್ತೀನಿ ಅಂದಿದ್ರು. ಅಂದು 23ನೇ ದಿನಾಂಕಕ್ಕೆ ಸಿಎಂ ಆಗ್ತಿನಿ ಅಂದಿದ್ರು. ಆಗ ನಾನು 23 ಅಲ್ಲ ಇನ್ನೆರಡು ದಿನ  ಅಂದರೆ 25 ರಂದು ಸಿಎಂ ಆದ್ರೆ ವಾಚಮ್ಯಾನ್ ಆಗ್ತೀನಿ ಅಂದಿದ್ದೆ. ಆ ಸಮಯದಲ್ಲಿ ಬಿಎಸ್ವೈ ಸಿಎಂ ಆಗಿದ್ರೆ  ಒಂದು ದಿನ ಅಲ್ಲ,1 ವಾರ ಬಿಎಸ್ವೈ ಮನೆ ವಾಚ್ ಮ್ಯಾನ್ ಆಗ್ತಿದ್ದೆ  ಎಂದು ತಮ್ಮ ಹಳೆ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ವಿಶ್ವನಾಥ್‌ಗೆ ಶಾಸ್ತಿ ; ಹುಣಸೂರಿನಲ್ಲಿ ಜೆಡಿಎಸ್‌ನಿಂದ ಅಚ್ಚರಿಯ ಅಭ್ಯರ್ಥಿ!

ಈಗೇಕೆ ಎಚ್ ಡಿಕೆ ಮಾತಾಡ್ತಿದ್ದಾರೆ? ಹದ್ದು ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾ,ಮಿ ನಡುವೆ ಟಾಕ್ ವಾರ್ ನಡೆದಿರುವುದು ಗೊತ್ತೆ ಇದೆ. ಕುಮಾರಸ್ವಾಮಿ ಈ ಚುನಾವಣೆ ದೃಷ್ಟಿಯಿಂದ ಹೇಳ್ತಿದ್ದಾರೆ. ಮೊದಲು ಯಾಕೆ ಹೇಳಲಿಲ್ಲ. ಸರ್ಕಾರ ಬಿತ್ತಲ್ಲ ಅವತ್ತೆ ಸಿದ್ದರಾಮಯ್ಯ ಬೀಳಿಸಿದ್ರು ಅಂತ ಯಾಕೆ ಕುಮಾರಸ್ವಾಮಿ ಹೇಳಲಿಲ್ಲ? ಎಂದು ಪ್ರಶ್ನೆ ಮಾಡಿದರು. ಒಂದೊಮ್ಮೆ ಸಿದ್ದರಾಮಯ್ಯ ಸರ್ಕಾರ ಬೀಳಿಸಿದ್ರೆ.

ಸಿದ್ದರಾಮಯ್ಯ ಅನರ್ಹ ಮಾಡಿದ್ರು! ನಮ್ಮಲ್ಲಿಂದ ಹೋದ 15 ಜನ ಅತೃಪ್ತರ ಶಾಸಕರನ್ನು ಅನರ್ಹಗೊಳಿಸಿದವರು ಯಾರು?  ಅತೃಪ್ತ ಕಾಂಗ್ರೆಸ್ ಶಾಸಕರಿಗೆ ತಕ್ಕ ಪಾಠ ಕಲಿಸ್ಬೇಕೆಂದಲೇ ಸಿದ್ದರಾಮಯ್ಯ ಅನರ್ಹಗೊಳಿಸಿದ್ದರು.  ಸಿದ್ದರಾಮಯ್ಯವನವ್ರೇ ಅತೃಪ್ತ ಶಾಸಕರನ್ನು ಕಳುಹಿಸಿದ್ದರೆ ಯಾಕೆ ಅನರ್ಹಗೊಳಿಸ್ತಿದ್ದರು? ಎಂದು ಕಾನೂನಿನ ಹೊರಗೆ ನಿಂತು ಪ್ರಶ್ನೆ ಮಾಡಿದರು.

ಎಚ್ ಡಿಕೆಗೆ ಏನೋ ಒಂದು ಚಟ:  ಎಚ್ ಡಿಕೆಗೆ ಏನೋ ಒಂದು ಚಟ,  ಅವರಿಗೊಂದು ಅಭ್ಯಾಸ.  ಎಚ್ ಡಿ ಕೆಗೆ ಹಿಟ್ ಆಂಡ್ ರನ್ ಅಂತ ಎಲ್ಲರೂ ಪಟ್ಟಕಟ್ಟಿದ್ದಾರೆ.. ಯಾವತ್ತೂ ಕೂಡಾ ಎಚ್ ಡಿ ಕೆ ಹಿಟ್ ಆಂಡ್ ರನ್ ಮಾಡುವವರೆ. ಒಂದು ವರ್ಷ ಎರಡು ತಿಂಗಳು ಎಚ್ ಡಿಕೆ ಸಿಎಂ ಆಗಿದ್ದರು. ಆಗ  ಯಾಕೆ ಹೇಳ್ಲಿಲ್ಲ?  ಆಡಳಿತದಲ್ಲಿದ್ದಾಗ ಎಚ್.ಡಿಕೆ ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂದು ಹತ್ತಾರು ಬಾರಿ ಸಮಾರಂಭದಲ್ಲೇ ಹೇಳಿದ್ದಾರೆ ಸರ್ಕಾರ ಬಿದ್ದು 2 ತಿಂಗಳಿಗೆ ಈ ರೀತಿ ಹೇಳ್ತಿದ್ದಾರೆ ಅಂದ್ರೆ ನಾವು ಅರ್ಥಮಾಡಿಕೊಳ್ಳಬೇಕು. ಎಚ್ ಡಿ ಕೆ ಬೈ ಎಲೆಕ್ಷನ್ ನಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳಲು ಈ ರೀತಿ ಮಾತನಾಡ್ತಿದ್ದಾರೆ. ಗಿಣಿ,ಹದ್ದು ಯಾರೆಂಬುದನ್ನು ಎಚ್ ಡಿ ಕೆ, ಸಿದ್ದರಾಮಯರನ್ನೇ ಕೇಳಿ ಎಂದ ಜಮೀರ್ ಮರು ಪ್ರಶ್ನೆ ಮಾಡಿದರು.

ನಮ್ಮವರಿಗೆ ಟಿಕೆಟ್: ಅನರ್ಹರ ಭವಿಷ್ಯ ಇನ್ನೂ ತೀರ್ಮಾನವಾಗಿಲ್ಲ. ಏನೇಯಾದರೂ ಚುನಾವಣೆ ನಡೆಯಲೇಬೇಕು. ಅವರೆ ಅಭ್ಯರ್ಥಿ ಆಗ್ತಾರೋ,ಬೇರೆಯವ್ರು ನಿಲ್ತಾರೋ ಗೊತ್ತಿಲ್ಲ  ನಮ್ಗೆ ನೂರಕ್ಕೆ ನೂರು ವಿಶ್ವಾಸವಿದೆ ನಾವು 15 ಕ್ಷೇತ್ರ ಗೆಲ್ತೇವೆ. ಅನರ್ಹರಿಗೆ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ ಬಿಜೆಪಿ ಯಾವ ರೀತಿ ಮ್ಯಾನೇಜ್ ಮಾಡುತ್ತೆ ಅಂತ ನನಗೆ ಗೊತ್ತಿಲ್ಲ. ಮೊದಲಿನಿಂದ ಆಯಾಯ ಕ್ಷೇತ್ರದಲ್ಲಿ ಬಿಜೆಪಿಯರು ಇದ್ದಾರೆ. ಈಗ ಪಾಪ ನಮ್ಮವರನ್ನು ತೆಗೆದುಕೊಂಡಿದ್ದಾರೆ.  ನಮ್ಮವರಿಗೆ ಟಿಕೆಟ್ ಕೊಡೋಕೆ ಹೊರಟಿದ್ದಾರೆ ಪಾಪ ಅವರ ಗತಿಯೇನು?  ಅಧಿಕಾರಕ್ಕೋಸ್ಕರ ಮೂಲ ಬಿಜೆಪಿಯವರನ್ನು ಬಲಿಕೊಡ್ತಿದ್ದಾರೆ. ಅಧಿಕಾರಕ್ಕೋಸ್ಕರ 40ವರ್ಷ ದುಡಿದವರಿಗೆ ಬಿಟ್ಟು ನಮ್ಮವರಿಗೆ ಟಿಕೆಟ್ ಕೊಡೋದು ಎಷ್ಟು ಸರಿ? ಎಂದು ಅನರ್ಹ ಶಾಸಕರನ್ನು ನಮ್ಮವರು ನಮ್ಮವರು ಎಂದು ಪದೇ ಪದೇ ಹೇಳಿದರು.

click me!