ಕೈ ಕಾರ್ಯಕರ್ತರಲ್ಲಿ ಭಯ ಸೃಷ್ಟಿಗೆ ಐಟಿ ದಾಳಿ: ಹೆಬ್ಬಾಳಕರ್‌

By Kannadaprabha News  |  First Published Oct 29, 2021, 9:26 AM IST

*   ಧಾರವಾಡ, ಉಪ್ಪುಂದ ಮನೆಗಳ ಮೇಲೆ ದಾಳಿ
*   ಸತತ 10 ಗಂಟೆಗಳ ಕಾಲ ದಾಖಲೆ ಪರಿಶೀಲನೆ
*   ಡಿಕೆಶಿ ಆಪ್ತರಾದ ಶೆಟ್ಟಿ ಸೋದರರಿಗೆ ಐಟಿ ಶಾಕ್‌


ಹುಬ್ಬಳ್ಳಿ(ಅ.29):  ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಭಯ ಸೃಷ್ಟಿಮಾಡಲು ಐಟಿ(IT), ಇಡಿ ದಾಳಿ(ED Raid) ಮಾಡಿಲಾಗುತ್ತಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌(Lakshmi Hebbalkar) ಹೇಳಿದ್ದಾರೆ. 

Latest Videos

undefined

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು(BJP) ಕಾರ್ಯಕರ್ತರಲ್ಲಿ ಭಯ ಸೃಷ್ಟಿಮಾಡಲು ರಾಜಕಾರಣ(Politics) ಮಾಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಈ ರೀತಿ ಆಗುತ್ತಿದೆ. ಇಡಿ, ಐಟಿಗೆ ನಾವು ಹೆದರುವುದಿಲ್ಲ. ಇದಾವುದು ಕೂಡ ಚುನಾವಣಾ(Election) ಫಲಿತಾಂಶದ(Result) ಮೇಲೆ ಪರಿಣಾಮ ಬೀರಲ್ಲ ಎಂದರು.

ಈಗ ಐಟಿ ದಾಳಿ ಮಾಡಿರುವ ಯು.ಬಿ. ಶೆಟ್ಟಿ(UB Shetty) ಮೊದಲಿಂದಲೂ ಡಿ.ಕೆ. ಶಿವಕುಮಾರ್‌(DK Shivakumar) ಜೊತೆ ಇದ್ದಾರೆ. ನಮ್ಮ ಕಾರ್ಯಕರ್ತರ(Activists)ನೈತಿಕತೆ ಕಡಿಮೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನ್ಯೂಸ್ ಅವರ್; ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!

ಡಿಕೆಶಿ ಆಪ್ತರಾದ ಶೆಟ್ಟಿ ಸೋದರರಿಗೆ ಐಟಿ ಶಾಕ್‌

ರಾಜ್ಯದಲ್ಲಿ ಹಾನಗಲ್‌(Hanagal) ಮತ್ತು ಸಿಂದಗಿ(Sindagi) ಉಪ ಚುನಾವಣೆಗಳ(Byelection) ಮತದಾನಕ್ಕೆ(Voting) ಎರಡು ದಿನಗಳು ಬಾಕಿ ಇರುವಾಗಲೇ ಧಾರವಾಡದಲ್ಲಿ(Dharwad) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉದ್ಯಮಿ ಯು.ಬಿ.ಶೆಟ್ಟಿ ಹಾಗೂ ಅವರ ಸಹೋದರನ ಧಾರವಾಡ ನಗರ ಮತ್ತು ಉಡುಪಿ ಜಿಲ್ಲೆ ಉಪ್ಪುಂದದಲ್ಲಿರುವ ಒಟ್ಟು ಮೂರು ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಗುರುವಾರ ಏಕಕಾಲದಲ್ಲಿ ನಡೆಸಿದ್ದಾರೆ.

ಧಾರವಾಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉದ್ಯಮದ ವ್ಯಾಪ್ತಿ ಹೊಂದಿರುವ ಪ್ರಥಮ ದರ್ಜೆ ಗುತ್ತಿಗೆದಾರ ಯು.ಬಿ. ಶೆಟ್ಟಿಅವರ ಧಾರವಾಡದ ದಾಸನಕೊಪ್ಪ ವೃತ್ತದ ಬಳಿಯ ಬಂಗಲೆಯ ಮೇಲೆ ಗುರುವಾರ ಬೆಳಗ್ಗೆ ಏಳು ಜನರಿದ್ದ ಅಧಿಕಾರಿಗಳು ದಾಳಿ ನಡೆಸಿ ಯು.ಬಿ. ಶೆಟ್ಟಿ ಅವರನ್ನು ವಿಚಾರಣೆಗೆ(Inquiry) ಒಳಪಡಿಸಿದರು. ಅದೇ ರೀತಿ ಯು.ಬಿ ಶೆಟ್ಟಿ ಅವರ ಉಪ್ಪುಂದದಲ್ಲಿರುವ ಮೂಲ ಮನೆಗೂ ಮಂಗಳೂರಿನಿಂದ ಬಂದ 9 ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿತು. ಶೆಟ್ಟಿ ಅವರ ವ್ಯವಹಾರಗಳು(Business) ಹಾಗೂ ಉಡುಪಿ ಜಿಲ್ಲೆಯಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಿದರು ಎಂದು ತಿಳಿದು ಬಂದಿದೆ.

ಸಹೋದರ ಮನೆ ಮೇಲೂ ದಾಳಿ

ಒಂದು ಕಡೆ ದಾಸನಕೊಪ್ಪದ ಯು.ಬಿ. ಶೆಟ್ಟಿ ಮನೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರೆ, ಇನ್ನೊಂದು ತಂಡ ಅವರ ಸಹೋದರ ಹಾಗೂ ಗುತ್ತಿಗೆದಾರ ಸೀತಾರಾಮ ಶೆಟ್ಟಿ ಮನೆಯ ಮೇಲೆಯೂ ಐಟಿ ದಾಳಿ ನಡೆಸಲಾಗಿದೆ. ಸುಮಾರು 10ಕ್ಕೂ ಹೆಚ್ಚು ಇನ್ನೋವಾ ವಾಹನಗಳಲ್ಲಿ ಆಗಮಿಸಿದ 20ಕ್ಕೂ ಹೆಚ್ಚು ಅಧಿಕಾರಿಗಳು ಬೆಳಿಗ್ಗೆಯಿಂದ ಸೀತಾರಾಮ ಶೆಟ್ಟಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಇಲ್ಲಿನ ವಿನಾಯಕ ನಗರ ಬಡಾವಣೆಯಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದ್ದು, ಅನೇಕ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇಬ್ಬರ ಮನೆಗಳಿಗೆ ಬೆಳಗ್ಗೆಯೇ ಆಗಮಿಸಿದ ಅಧಿಕಾರಿಗಳು ಸಂಜೆ 7ರ ನಂತರವೂ ವಿಚಾರಣೆ ನಡೆಸಿ ಅಕ್ರಮ ಆಸ್ತಿಗಳನ್ನು(Illegal Property) ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಈ ದಾಳಿಯು ರಾಜಕೀಯ ತಿರುವು ಪಡೆದುಕೊಂಡಿದೆ. ಏಕೆಂದರೆ ಡಿಕೆಶಿ ಹಾನಗಲ್‌ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಹರಸಾಹಸ ಮಾಡುತ್ತಿದ್ದಾರೆ. ಈ ವೇಳೆ ಅವರಿಗೆ ಶಾಕ್‌ ನೀಡಲು ಈ ದಾಳಿಯನ್ನು ಮಾಡಲಾಗಿದೆ ಎಂದು ಯು.ಬಿ. ಶೆಟ್ಟಿ ಅವರ ನಿವಾಸಕ್ಕೆ ಆಗಮಿಸಿದ ಕಾಂಗ್ರೆಸ್‌(Congress) ಮುಖಂಡರಾದ ರಾಬರ್ಟ್‌ ದದ್ದಾಪೂರಿ ಹಾಗೂ ಆನಂದ ಜಾಧವ ಅವರು ಮಾಧ್ಯಮಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.
 

click me!