ಮಂಡ್ಯ; ರಾಗಿ ಮೂಟೆಯಲ್ಲಿತ್ತು  4 ಲಕ್ಷ ರು. ಮೌಲ್ಯದ ಚಿನ್ನಾಭರಣ!

Published : Oct 29, 2021, 03:33 AM IST
ಮಂಡ್ಯ; ರಾಗಿ ಮೂಟೆಯಲ್ಲಿತ್ತು  4 ಲಕ್ಷ ರು. ಮೌಲ್ಯದ ಚಿನ್ನಾಭರಣ!

ಸಾರಾಂಶ

* ರೈಸ್‌ ಮಿಲ್‌ನಲ್ಲಿ ಸಿಕ್ತು ಚಿನ್ನಾಭರಣವಿದ್ದ ಪರ್ಸ್‌! * ಮಾಲೀಕರಿಗೆ ಪರ್ಸ್ ಹಿಂದಿರುಗಿಸಿದ ಮಾಲೀಕ * ರಾಗಿ ಮೂಟೆಯಲ್ಲಿ ಚಿನ್ನ ಇಟ್ಟ ಮಹಿಳೆ ಬೆಂಗಳೂರಿಗೆ ಬಂದಿದ್ದರು

ಮಂಡ್ಯ(ಅ. 29)  ರಾಗಿ ಚೀಲದಲ್ಲಿ ಬಚ್ಚಿಟ್ಟಿದ್ದ 4 ಲಕ್ಷ ರು. ಮೌಲ್ಯದ (Gold Jewellery)ಚಿನ್ನಾಭರಣವನ್ನು ರೈಸ್‌ಮಿಲ್‌ ಮಾಲೀಕರೊಬ್ಬರು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಘಟನೆ (Mandya) ತಾಲೂಕಿನ ಬಸರಾಳು ಗ್ರಾಮದಲ್ಲಿ ಗುರುವಾರ ನಡೆದಿದೆ. 

ನಾಗಮಂಗಲ (Nagamangala) ತಾಲೂಕಿನ ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡರ ಪತ್ನಿ ಲಕ್ಷ್ಮಮ್ಮ ಚಿನ್ನ ಕಳೆದುಕೊಂಡಿದ್ದು, ಅದನ್ನು ಬಸರಾಳು ಗ್ರಾಮದ ತಿಮ್ಮೇಗೌಡ ಸುರಕ್ಷಿತವಾಗಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಲಕ್ಷ್ಮಮ್ಮ ಅವರು ಮನೆಯಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಪರ್ಸ್‌ ಅನ್ನು ರಾಗಿ ಮೂಟೆಯೊಂದರಲ್ಲಿಟ್ಟು ಬೆಂಗಳೂರಿಗೆ ಹೋಗಿದ್ದರು. ಈ ವಿಚಾರದ ಕುರಿತು ಅರಿವಿರದ ಪತಿ ಕಲ್ಲೇಗೌಡರು 10 ಮೂಟೆ ರಾಗಿ ಮಾರಾಟ ಮಾಡಿದ್ದರು. ಆ ರಾಗಿಯನ್ನು ರೈಸ್‌ಮಿಲ್‌ಗೆ ನೀಡಿದ್ದರು. ರಾಗಿ ಸ್ವಚ್ಛಮಾಡಲು ಮೂಟೆಯಿಂದ ಸುರಿದಾಗ ಪರ್ಸ್‌ ಪತ್ತೆಯಾಗಿತ್ತು.

ಯೂ ಟ್ಯೂಬ್ ನೋಡಿ ಚಿನ್ನಾಭರಣ ಅಂಗಡಿಗೆ ಕನ್ನ ಹಾಕಿದ್ದು ಹೀಗೆ

ಈ ರಾಗಿ ಕ್ಲೀನ್‌ ಮಾಡಿ ಪ್ಯಾಕ್‌ ಮಾಡಲೆಂದು ಚೀಲದಿಂದ ಸುರಿದಾಗ ರೈಸ್‌ಮಿಲ್‌ನ ಮ್ಯಾನೇಜರ್‌ ಎಂ.ಬಿ.ಬೋರೇಗೌಡರಿಗೆ ಚಿನ್ನಾಭರಣವಿದ್ದ ಪರ್ಸು ಕಣ್ಣಿಗೆ ಬಿದ್ದಿದ್ದು, ತಕ್ಷಣ ಅವರು ಮಾಲೀಕ ತಿಮ್ಮೇಗೌಡರಿಗೆ ತಿಳಿಸಿದ್ದಾರೆ. ತಿಮ್ಮೇಗೌಡರು ಆ ಪರ್ಸ್‌ನಲ್ಲಿದ್ದ ಚೀಟಿ ಆಧರಿಸಿ ಮಾಲೀಕರನ್ನು ಹುಡುಕಿ ಚಿನ್ನಾಭರಣ ಮರಳಿಸಿದ್ದಾರೆ. ಆಟೋ ಚಾಲಕರು ಪ್ರಾಮಾಣಿಕತೆ ಮೆರೆದ ಅನೇಕ ಸುದ್ದಿಗಳನ್ನು ನೋಡಿದ್ದೇವೆ ಇದು ಅಂಥದ್ದೇ ಒಂದು ನಿದರ್ಶನ. 

PREV
Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ