ಕಾಂಗ್ರೆಸ್ ಸೆಕ್ಯೂಲರಿಸಂ ಮಡಿವಂತಿಕೆ ಗಾಳಿಗೆ ತೂರಿ ಭಜರಂಗಿ ದತ್ತಮಾಲಾ ಧರಿಸಿದ ಕೈ ಶಾಸಕ ಹೆಚ್.ಡಿ. ತಮ್ಮಯ್ಯ!

By Sathish Kumar KHFirst Published Dec 19, 2023, 4:39 PM IST
Highlights

ಕಾಂಗ್ರೆಸ್‌ನ ಸೆಕ್ಯೂಲರಿಸಂ ಮಡಿವಂತಿಕೆಯನ್ನು ಮುರಿದು ಕಾಂಗ್ರೆಸ್ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ದತ್ತಮಾಲೆ ಧರಿಸಿ ಬರಿಗಾಲಿನಲ್ಲಿ ಸಂಚಾರ ಮಾಡುತ್ತಿದ್ದಾರೆ.

ಚಿಕ್ಕಮಗಳೂರು (ಡಿ.19): ಕಾಂಗ್ರೆಸ್‌ನ ಸೆಕ್ಯೂಲರಿಸಂ ಮಡಿವಂತಿಕೆಯನ್ನು ಮುರಿದು ಹಿಂದುತ್ವದ ಆಚರಣೆ ಎಂದೇ ಹೇಳಲಾಗುವ ದತ್ತಮಾಲೆಯನ್ನು ಕಾಂಗ್ರೆಸ್‌ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಧಾರಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದಿಂದ ನಡೆಸಿಕೊಡುವ ದತ್ತಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ದತ್ತಜಯಂತಿಗೆ ಕಾಂಗ್ರೆಸ್‌ ಶಾಸಕ ಹೆಚ್.ಡಿ. ತಮ್ಮಯ್ಯ ಸಾಥ್ ನೀಡಿದ್ದಾರೆ. ಕೊರಳಲ್ಲಿ ಮಣಿಗಳನ್ನು ಹೊಂದಿದ ದತ್ತ ಮಾಲೆ, ಬರಿಗಾಲಲ್ಲಿ ಸಂಚಾರ ಮಾಡುತ್ತಾ ಶಾಸಕ ತಮ್ಮಯ್ಯ ದತ್ತಮಾಲಾ ಜಯಂತಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ಸಿನ ಸೆಕ್ಯೂಲರ್ ಮಡಿವಂತಿಕೆ ಮುರಿದಿದ್ದಾರಾ? ಎಂಬ್ರ ಪ್ರಶ್ನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಮಾಧ್ಯಮಗಳಿಂದ ಈ ಬಗ್ಗೆ ಪ್ರಶ್ನೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿದೇ ಮುಂದೆ ಹೋಗಿದ್ದಾರೆ.

ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರಲಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ: ಭಜರಂಗಿಗೆ ಸಾಥ್ ಕೊಡ್ತಾಳೆ ತೆನೆಹೊತ್ತ ಮಹಿಳೆ

ಈ ಬಗ್ಗೆ ಶಾಸಕರು ಸುಳಿವು ನೀಡದಿದ್ದರೂ ಇಂದು ಗೃಹ ಸಚಿವ ಪರಮೇಶ್ವರ್ ಅವರು ಜಿಲ್ಲೆಗೆ ಆಗಮಿಸಿದ್ದ ವೇಳೆ ದತ್ತಮಾಲೆ ಧರಿಸಿ, ಬರಿಗಾಲಲ್ಲಿ ಶಾಸಕ ತಮಯ್ಯ ಓಡಾಡುತ್ತಿದ್ದರು. ದತ್ತಮಾಲೆ ಹಾಕಿದ ಭಕ್ತರು ವ್ರತ ಆಚರಣೆಯ ಅವಧಿಯಲ್ಲಿ ಕಾಲಿಗೆ ಚಪ್ಪಲಿ ಹಾಕುವಂತಿಲ್ಲ. ವ್ರಥ ಪೂರ್ಣಗೊಳ್ಳುವವರೆಗೂ ಬರಿಗಾಲಲ್ಲಿ ಓಡಾಡಬೇಕು. ಆದ್ದರಿಂದ ಶಾಸಕ ತಮ್ಮಯ್ಯ ಕೂಡ ದತ್ತಮಾಲೆ ಹಾಕಿ ಕೇಸರಿ ಶಲ್ಯ ಹಾಕದೆ ಬರಿಗಾಲಲ್ಲಿ ಓಡಾಡುತ್ತಿದ್ದಾರೆ. 

Chikkamagaluru: ದತ್ತಮಾಲೆ ಹಾಕುವುದರ ಬಗ್ಗೆ ಇನ್ನೂ ಕುತೂಹಲ ಜೀವಂತ ಇಟ್ಟ ಶಾಸಕ ತಮ್ಮಯ್ಯ!

ಇನ್ನು ರಾಜ್ಯದಲ್ಲಿ ಮಾಜು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದತ್ತಮಾಲೆಯನ್ನು ಧರಿಸಿದ್ದ ವೇಳೆ ಟೀಕಾ ಪ್ರಹಾರ ಮಾಡಿದ್ದರು. ಆದರೆ, ಈಗ ಸ್ವತಃ ಕಾಂಗ್ರೆಸ್‌ ಶಾಸಕ ಹೆಚ್.ಡಿ. ತಮ್ಮಯ್ಯ ಅವರೇ ದತ್ತ ಮಾಲೆಯನ್ನು ಧರಿಸಿದ್ದು, ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಮತ್ತೊಂದೆಡೆ ಈ ಹಿಂದೆ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಹೆಚ್.ಡಿ. ತಮ್ಮಯ್ಯ ಅವರು ಕಳೆದ 18 ವರ್ಷವೂ ದತ್ತಮಾಲೆ ಧರಿಸಿ ವೃತ ಆಚರಿಸಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆ ಆಗಿದ್ದಾರೆ. 

click me!