ಪಿಯೂಶ್​ ಗೋಯಲ್​- ಶಾಸಕ ಆನಂದ್​ ಸಿಂಗ್​ ಭೇಟಿ: ಗರಿಗೆದರಿದ ರಾಜಕಾರಣ

By Web Desk  |  First Published Dec 25, 2018, 10:35 AM IST

ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಇದರ ಮಧ್ಯದಲ್ಲಿಯೇ ಕಾಂಗ್ರೆಸ್ ಶಾಸಕರೊಬ್ಬರು ಕೇಂದ್ರ ಸಚಿವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ.


ಬಳ್ಳಾರಿ, [ಡಿ.25]: ಹಂಪಿಗೆ ಭೇಟಿ ನೀಡಿದ್ದ ಬಿಜೆಪಿ ಕೇಂದ್ರ ಸಚಿವ ಪಿಯೂಶ್​ ಗೋಯಲ್​ ಅವರನ್ನು ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್​ ಭೇಟಿ ಮಾಡಿದ್ದು, ಹಲವು ಕುತೂಹಲಗಳಿಗೆ ಎಡೆಮಾಡಿ ಕೊಟ್ಟಿದೆ.

ನಿನ್ನೆ [ಸೋಮವಾರ] ವಿರೂಪಾಕ್ಷ ದೇವರ ದರ್ಶನ ಪಡೆಯುವವರೆಗೂ ಜತೆಯಲ್ಲೇ ಆನಂದ್ ಸಿಂಗ್,  ಕಮಲಾಪುರದ ರಜಪೂತ ಕೋಟೆಗೆ ಕೂಡ ಕರೆದುಕೊಂಡು ಹೋಗಿ ಸತ್ಕರಿಸಿ, ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. 

Tap to resize

Latest Videos

ಈ ಮೊದಲು ಬಿಜೆಪಿಯಲ್ಲೇ ಇದ್ದ ಆನಂದ್​ ಸಿಂಗ್​, 2018ರ ವಿಧಾನಸಭೆ ಚುನಾವಣೆ ಚುನಾವಣೆ ವೇಳೆ ಕಾಂಗ್ರೆಸ್​ಗೆ ಸೇರಿದ್ದರು. ಬಳಿಕ ರಾಜ್ಯ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.

ಆದ್ರೆ ಸಚಿವ ಸ್ಥಾನ ಸಿಕ್ಕಿಲ್ಲದಿದ್ದರಿಂದ ಅಸಮಾಧಾನಗೊಂಡಿರುವ ಆನಂದ್ ಸಿಂಗ್, ಕಾಂಗ್ರೆಸ್ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದು ಸೈಲೆಂಟ್ ಆಗಿದ್ದಾರೆ.  

click me!