'ನಿವೃತ್ತ ಐಎಎಸ್‌ ಅಧಿಕಾರಿ ನಿಧನಕ್ಕೆ ಸಂತಾಪ : ಕಾಂಗ್ರೆಸ್ ಸೇರಿ ಉತ್ತಮ ಕೆಲಸ'

Kannadaprabha News   | Asianet News
Published : Dec 05, 2020, 12:05 PM IST
'ನಿವೃತ್ತ ಐಎಎಸ್‌ ಅಧಿಕಾರಿ ನಿಧನಕ್ಕೆ ಸಂತಾಪ : ಕಾಂಗ್ರೆಸ್ ಸೇರಿ ಉತ್ತಮ ಕೆಲಸ'

ಸಾರಾಂಶ

ಮಾಜಿ ಐಎಎಸ್ ಅಧಿಕಾರಿ ಕಾಂಗ್ರೆಸ್ ಸೇರಿ ಕಾರ್ಯಕರ್ತ ಸಂಘಟನೆಯಲ್ಲಿ ಪಕ್ಷದ ಬಲವರ್ಧನೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದರು ಎಂದು ಅವರ ನಿಧನಕ್ಕೆ ಕೈ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಕೋಲಾರ (ಡಿ.05):  ನಗರದ ಕಾಂಗ್ರೆಸ್‌ ಭವನದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್‌ಪಾಷ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್‌ನಿಂದ ಸಂತಾಪ ಸೂಚಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಹಿಂದೆ ಸೈಯದ್‌ ಜಮೀರ್‌ಪಾಷ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ದಕ್ಷ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿರ್ದೇಶಕರಾಗಿ, ಕಾರ್ಯದರ್ಶಿಗಳಾಗಿ ಕೆಲಸಮಾಡಿ, ನಿವೃತ್ತಿಯಾಗಿದ್ದರು. ನಂತರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ 2ನೇ ಸ್ಥಾನಕ್ಕೇರಿ ಪರಾಭವಗೊಂಡಿದ್ದರು. ಕಾಂಗ್ರೆಸ್‌ ಪಕ್ಷದಲ್ಲಿ ತನ್ನದೇ ಆದಂತಹ ಹಿಡಿತ ಮತ್ತು ಕಾರ್ಯಕರ್ತರನ್ನು ಹೊಂದಿದ್ದರು. ರಾಮನಗರ ಜಿಲ್ಲೆಯಲ್ಲಿ ಬಡ ಮಕ್ಕಳ ಶಾಲೆಗಳನ್ನು ನಡೆಸುತ್ತಾ ಧಾನ ಧರ್ಮ ಮಾಡುತ್ತಾ, ಬಡ ಮಕ್ಕಳ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸ್ಮರಿಸಿದರು.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷ ಮಹಮದ್‌ ಏಕ್ಬಾಲ್‌, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಎಚ್‌.ವಿ ಕುಮಾರ್‌, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್‌, ಎಸ್‌ಟಿ ವಿಭಾಗದ ಜಿಲ್ಲಾಧ್ಯಕ್ಷ ಎಸ್‌.ಎಂ.ನಾಗರಾಜ್‌, ದಳಸನೂರು ಗೋಪಾಲಕೃಷ್ಣ, ಖಾದ್ರಿಪುರ ಬಾಬು, ಕಾರ್ಯದರ್ಶಿ ವೆಂಕಟಪತೆಪ್ಪ, ಬಂಗಾರಪೇಟೆ ನಗರಸಭಾ ಸದಸ್ಯ ಕಪಾಲಿ ಶಂಕರ್‌, ನಗರಸಭಾ ಸದಸ್ಯ ಸಾಧಿಕ್‌, ಮಾಜಿ ಸದಸ್ಯ ಪ್ಯಾರೇಜಾನ್‌, ಲಾಲ್‌ ಬಹದ್ದೂರ್‌ ಶಾಸ್ತಿ್ರ, ತಬರೇಜ್‌, ಕೋಳಿ ಗೌಸ್‌, ಪ್ರೊ.ಶ್ರೀನಿವಾಸ್‌, ಅಂಬೇಡ್ಕರ್‌ ನಗರ ಮುನಿಯಪ್ಪ, ಮಂಜುನಾಥ್‌, ಕಿಸಾನ್‌ ಕೇತ್‌ ತಾಲೂಕು ಅಧ್ಯಕ್ಷ ನಾಗರಾಜಗೌಡ ಇದ್ದರು.

PREV
click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ