ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕೈ ಮುಖಂಡರು..!

By Kannadaprabha News  |  First Published Oct 7, 2020, 12:31 PM IST

ಬಿಜೆಪಿ ತತ್ವಸಿದ್ದಾಂತ ನಂಬಿ ಬರುವವರನ್ನು ಪಕ್ಷ ಗೌರವದಿಂದ ಕಾಣುತ್ತದೆ: ಶಾಸಕ ರಾಮಣ್ಣ ಲಮಾಣಿ| ಕಾಂಗ್ರೆಸ್ ಮುಖಂಡ ಚನ್ನವೀರಪ್ಪ ಎಲಿಗಾರ ಹಾಗೂ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ| ಮುಂಬರುವ ಗ್ರಾಪಂ. ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತಾಗಬೇಕು| 


ಮುಂಡರಗಿ(ಅ.07): ಹಮ್ಮಿಗಿ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಚೆನ್ನವೀರಪ್ಪ ಯಲಿಗಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಬಿಜೆಪಿ ಪಕ್ಷದ ತತ್ವ ಸಿದ್ದಾಂತ ನಂಬಿ ಬರುವವರನ್ನು ಪಕ್ಷ ಯಾವಾಗಲೂ ಗೌರವದಿಂದ ಕಾಣುತ್ತದೆ ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳಿದ್ದಾರೆ.

ಅವರು ಸೋಮವಾರ ಮುಂಡರಗಿ ಪಟ್ಟಣದ ಉಪ್ಪಿನಬೆಟಗೇರಿ ಅವರ ನಿವಾಸದಲ್ಲಿ ತಾಲೂಕಿನ ಹಮ್ಮಿಗಿ ಗ್ರಾಮದ ತಾ.ಪಂ.ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಚನ್ನವೀರಪ್ಪ ಎಲಿಗಾರ ಹಾಗೂ ಬೆಂಬಲಿಗರನ್ನು ಬಿಜೆಪಿ ಪಕ್ಷ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಮುಂಬರುವ ಗ್ರಾಪಂ. ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತಾಗಬೇಕು ಎಂದರು.

Latest Videos

undefined

ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರಿಗೆ ಪಕ್ಷದಲ್ಲಿ ಗೌರವ  ಇದ್ದೇ ಇದೆ. ಚೆನ್ನವೀರಪ್ಪ ಯಲಿಗಾರ ಹಮ್ಮಿಗಿ ಭಾಗದ ಒಬ್ಬ ಹಿರಿಯ ಮುಖಂಡರಾಗಿದ್ದು, ಅವರಿಂದ ಪಕ್ಷ ಅಭಿವೖದ್ದಿಗೊಳ್ಳಲಿದೆ. ಅವರ ನೇತೖತ್ವದಲ್ಲಿ ಇಂದು ಹಮ್ಮಿಗಿ ಗ್ರಾಮದ ಹಾಲಪ್ಪ ಹರಿಜನ, ದಂಡೆಪ್ಪ ಗುಂಡಿಕೇರಿ, ನಾಗರಾಜ ಹರಿಜನ, ನೀಲಪ್ಪ ಹರಿಜನ, ವೀರಭದ್ರಪ್ಪ ಹೋಳೆಯಾಚೆ, ಮಲ್ಲಪ್ಪ ಸುಣಗಾರ ಸೇರಿದಂತೆ ಅನೇಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು.

ಗಜೇಂದ್ರಗಡ: ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ

ಈ ಸಂದರ್ಭದಲ್ಲಿ ಮುಂಡರಗಿ ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ರಜನಿಕಾಂತ ದೇಸಾಯಿ, ಡಾ.ಕುಮಾರಸ್ವಾಮಿ ಹಿರೇಮಠ, ಕೊಟ್ರೇಶ ಬಳ್ಳೊಳ್ಳಿ, ಕೊಟ್ರೇಶ ಎಲಿಗಾರ, ಮೈಲಾರಪ್ಪ ಉದಂಡಿ, ಕರಿಯಪ್ಪ ಹಡಗಲಿ, ಮಲ್ಲಿಕಾರ್ಜುನ ಬಹದ್ದೂರ ದೇಸಾಯಿ, ವೀರನಗೌಡ ಪಾಟೀಲ, ದೇವಪ್ಪ ಇಟಗಿ, ಬಸವರಾಜ ಬಿಳಿಮಗ್ಗದ, ನಾಗೇಶ ಹುಬ್ಬಳ್ಳಿ, ಕೊಪ್ಪಣ್ಣ ಕೋಪ್ಪಣ್ಣವರ, ಶಿವನಗೌಡ ಗೌಡರ, ಕೖಷ್ಣ ಗಡಾದ, ಮಹಾಂತೇಶ ಕೊರಡಕೇರಿ, ಮಾರುತಿ ನಾಗರಹಳ್ಳಿ ಸೇರಿದಂತೆ ಅನೇಕರು  ಇದ್ದರು.

ಮುಂಡರಗಿ ಪಟ್ಟಣದಲ್ಲಿ ಶಾಸಕ ರಾಮಣ್ಣ ನಾಗರಾಜ ಮುರುಡಿ, ಲಮಾಣಿ ಸಮ್ಮುಖದಲ್ಲಿ ತಾ.ಪಂ.ಮಾಜಿ ಸದಸ್ಯ ಹಮ್ಮಿಗಿ ಗ್ರಾಮದ ಕಾಂಗ್ರೆಸ್ ಮುಖಂಡ ಚನ್ನವೀರಪ್ಪ ಎಲಿಗಾರ ಹಾಗೂ ಬೆಂಬಲಿಗರು ಸೋಮವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.
 

click me!