Tumakuru; ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ ಬಯಲು

By Gowthami K  |  First Published Aug 20, 2022, 9:38 PM IST

ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿ ಇಕ್ಕಟಿಗೆ ಸಿಲುಕಿದ್ದಾರೆ.  2016 ರಲ್ಲಿ ಅಧಿಕಾರದಲ್ಲಿದ್ದಾಗ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಂತ ಹೇಳಿದ್ದು ಇದಕ್ಕೆ ದಾಖಲೆ ಇದೆ.


ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್  

ತುಮಕೂರು (ಆ. 20): ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿ ಇಕ್ಕಟಿಗೆ ಸಿಲುಕಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿರುದು ನೀಡಿ ತುಮಕೂರು ನಗರದಲ್ಲಿ ಪಾರ್ಕ್ ಉದ್ಘಾಟನೆ ಮಾಡಿ ಒಂದು ಸಮುದಾಯವನ್ನ ಮನವೊಲಿಸಲು ಕಾಂಗ್ರೆಸ್ ಮಾಡಿರುವ ಕಸರತ್ತು ಬೆಳಕಿಗೆ ಬಂದಿದೆ. ಇತ್ತ ಪಾರ್ಕ್ ಗೆ ಖಾಕಿ ಹದ್ದಿನ ಕಣ್ಣಿಟ್ಟಿದೆ.  ಕಳೆದ ಒಂದು ವಾರದಿಂದ ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ಕಾಂಗ್ರೆಸ್ ನಾಯಕರು ಬಡಯಿ ಕೊಚ್ಚಿಕೊಳ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ವಿರೋಧಿ ಹೇಳಿಕೆಯ ಅಸಲಿ ಸತ್ಯ ಬಯಲಾಗಿದೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಂತ ವಾದ ಮಾಡ್ತಿರುವ ಕಾಂಗ್ರೆಸ್. 2016 ರಲ್ಲಿ ಅಧಿಕಾರದಲ್ಲಿದ್ದಾಗ ತುಮಕೂರು ನಗರದ ಸರಸ್ವತಿಪುರಂ ನಲ್ಲಿ ವೀರ್ ಸಾವರ್ಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬ ಬಿರುದು ನೀಡಿ ಅವರ ಹೆಸರಲ್ಲಿ ಪಾರ್ಕ್ ಉದ್ಘಾಟನೆ ಮಾಡಿದೆ.

Tap to resize

Latest Videos

ಇನ್ನು ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಂತ ಹೇಳುವ ಇದೆ ಸಿದ್ದರಾಮಯ್ಯ 2016 ರಲ್ಲಿ ಸಿಎಂ ಆಗಿದ್ದ ಅಂತಹ ಸಂದರ್ಭದಲ್ಲಿ ತುಮಕೂರು ನಗರದ ವಾರ್ಡ್ ನಂಬರ್ 15 ಸರಸ್ವತಿ ಪುರಂ ನಲ್ಲಿ ಅಂದಿನ ಸಚಿವರಾಗಿದ್ದ ಟಿಬಿ ಜಯಚಂದ್ರ, ಡಾ. ಜಿ ಪರಮೇಶ್ವರ್, ರೋಷನ್ ಬೇಗ್, ಸಂಸದ ಮುದ್ದಹನುಮೇಗೌಡ ಹೆಸರನ್ನ ಪಾರ್ಕ್ ನ ನಾಮಫಲಕ ಅಳವಡಿಸಿ ಅಂದಿನ ತುಮಕೂರು ನಗರ ಶಾಸಕರಾಗಿದ್ದ ರಫಿಕ್ ಅಹ್ಮದ್ ನೇತೃತ್ವದಲ್ಲಿ ಪಾರ್ಕ್ ಉದ್ಘಾಟನೆ ಮಾಡಲಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ನಾಮಫಲಕವನ್ನ ಪಾರ್ಕ್ ನಲ್ಲಿ ಅಳವಡಿಸಲಾಗಿದೆ‌.

ಪೆಂಡಾಲ್‌ನಲ್ಲಿ ಗಣೇಶನ ಮೂರ್ತಿ ಜೊತೆ ಸಾವರ್ಕರ್‌ ಚಿತ್ರ ಇಡ್ತೇವೆ!

ಇನ್ನು ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾವರ್ಕರ್ ಹೆಸರಲ್ಲಿ ಪಾರ್ಕ್ ಉದ್ಘಾಟನೆ ಮಾಡಿರುವ ವಿಚಾರ ಬೆಳಕಿಗೆ ಬಂತೋ. ಕಾಂಗ್ರೆಸ್ ನಾಯಕರು ಒಂದು ಸಮುದಾಯವನ್ನ ವೊಲಿಕೆ ಮಾಡಲು ಮಾಡಿರುವ ಪ್ಲಾನ್ ಮಾಡಿರೋದು ಬೆಳಕಿಗೆ ಬಂದಿದೆ. ಈಗಾಗಲೇ ರಾಜ್ಯದ್ಯಾಂತ ಕಾಂಗ್ರೆಸ್ ವಿರುದ್ದ ಸಾಕಷ್ಟು ವಿರೋಧ ವ್ಯಕ್ತವಾಗ್ತಿದ್ದು. ಕಾಂಗ್ರೆಸ್ ಪಕ್ಷದ ನಾಯಕರು ಮುಜುಗರಕ್ಕೆ ಎಡೆಮಾಡಿಕೊಟ್ಟಿದೆ.

ಕಾಂಗ್ರೆಸ್ಸಿಗರಿಗೆ ಸಾವರ್ಕರ್‌ ಕುರಿತ ಪುಸ್ತಕ ಕಳಿಸುವೆ: ಶಾಸಕ ರೇಣುಕಾಚಾರ್ಯ

ಇತ್ತ ಪಾರ್ಕ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಪಾರ್ಕ್ ನಲ್ಲಿ ಅಳವಡಿಸಿದ್ದ ಕ್ಯಾಮರಾ ಗಳು ಹಾಳಾಗಿದ್ದ ಸಿಸಿಟಿವಿ ಕ್ಯಾಮರಾ ಗಳನ್ನ ರಿಪೇರಿ ಮಾಡಿಸಿ ಪೊಲೀಸರು ಪಾರ್ಕ್ ಸುತ್ತಮುತ್ತ ಓರ್ವ ಪಿಎಸ್ಐ ನೇತೃತ್ವದಲ್ಲಿ ಬಿಗಿಭದ್ರತೆ ಮಾಡಲಾಗಿದೆ.

click me!