ತಾಯಿ ನೆನಪಿಗಾಗಿ 'ಅಮ್ಮ' ಆಸ್ಪತ್ರೆ ಕಟ್ಟಿಸಲು ಮುಂದಾದ ಶಾಸಕ ರಾಜೂಗೌಡ

By Gowthami K  |  First Published Aug 20, 2022, 7:19 PM IST

ತಾಯಿ ತಿಮ್ಮಮ್ಮ ಗೌಡಶ್ಯಾನಿ ನೆನಪಿಗಾಗಿ 'ಅಮ್ಮ' ಎಂಬ ಹೆಸರಿನ ಮಲ್ಟಿಸ್ಪೆಷಾಲಿಟಿ  ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಶಾಸಕ ರಾಜೂಗೌಡ. ಪುತ್ರನ ಜನ್ಮ ದಿನದಂದೆ ಕ್ಷೇತ್ರದ ಜನರಿಗಾಗಿ ಆಸ್ಪತ್ರೆಗೆ ಅಡಿಗಲ್ಲು.


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಆ.20): ಸುರಪುರ ಕ್ಷೇತ್ರದಲ್ಲಿ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸುರಪುರ ಶಾಸಕ ರಾಜುಗೌಡ ಅವರು ತಮ್ಮ ಪುತ್ರನಾದ ಮಣಿಕಂಠ ನಾಯಕ ಅವರ ಜನ್ಮ ದಿನದಂದು 100 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಶಾಸಕ ರಾಜುಗೌಡ ಅವರ ತಾಯಿಯಾದ ದಿ.ತಿಮ್ಮಮ್ಮ ತಾಯಿ ಅವರ ಸ್ಮರಣಾರ್ಥ ಹಾಗೂ ಪುತ್ರನ ಜನ್ಮ ದಿನ ಪ್ರಯುಕ್ತ ಶಾಸಕ ರಾಜುಗೌಡ ಹುಣಸಗಿ ಪಟ್ಟಣದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ತಾಯಿ ದೇವರು, ತಾಯಿಯ ಋಣ ಹಲವಾರು ಜನ್ಮ ಹುಟ್ಟಿ ಬಂದರು ತೀರಿಸಲು ಸಾಧ್ಯವಿಲ್ಲ. ಶಾಸಕ ರಾಜೂಗೌಡ ಗೆ ತಾಯು ತಿಮ್ಮಮ್ಮ ಗೌಡಶ್ಯಾನಿ ಅವರೇ ಮಾರ್ಹದರ್ಶಕರು. ಅವರ ರಾಜಕೀಯ ಪಯಣದಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಅವರು ಹಾಕಿಕೊಟ್ಟ  ದಾರಿಯೇ ಕಾರಣ. ಹಾಗಾಗಿ ಸುರಪುರ ಶಾಸಕ ರಾಜೂಗೌಡ ಜನಸೇವೆ ಮಾಡುವುದರ ಮೂಲಕ ತಾಯಿಯ ಋಣ ತೀರಿಸಲು ಮುಂದಾಗಿದ್ದಾರೆ. ತಾಯಿ ತಿಮ್ಮಮ್ಮ ಗೌಡಶ್ಯಾನಿ ಅವರ ಸ್ಮರಣಾರ್ಥವಾಗಿ 'ಅಮ್ಮ' ಎಂಬ ಹೆಸರಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಮುಂದಾಗಿದ್ದಾರೆ.

Tap to resize

Latest Videos

undefined

ಇದರಿಂದಾಗಿ ಸುರಪುರ, ಹುಣಸಗಿ ಸೇರಿದಂತೆ ಹಲವು ಜನರಿಗೆ ಆ ಆಸ್ಪತ್ರೆ ನಿರ್ಮಾಣದಿಂದ ಅನುಕೂಲವಾಗಲಿದೆ. ಜೊತೆಗೆ ಸುರಪುರ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ನೀಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಅಮ್ಮ ಆಸ್ಪತ್ರೆ ಹೆಸರಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಒಂದು ವರೆ ವರ್ಷದೊಳಗೆ ಈ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

ಅನಾರೋಗ್ಯ ಪೀಡಿತ ವ್ಯಕ್ತಿಗೆ ಮನೆ ಕಟ್ಟಿಸಲು ಮುಂದಾದ ರಾಜೂಗೌಡ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸಿದ್ದಾಪುರ(ಬಿ) ಗ್ರಾಮದ ಜಮೀನಿನಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಪರಮಣ್ಣ ಪೂಜಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದನು. ಇದನ್ನು ಅರಿತ ಶಾಸಕ ರಾಜುಗೌಡ ಅವರು ಕಳೆದ ವರ್ಷ ಡಿಸೆಂಬರ್ 21 ರಂದು ಪರಮಣ್ಣ ಪೂಜಾರಿ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ಹಾಗೂ ಸಮಸ್ಯೆಯನ್ನು ಆಲಿಸದ್ದರು. ಈ ವೇಳೆ ಪರಮಣ್ಣ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿ ಕೊಡಬೇಕು. ಮನೆ ಇಲ್ಲ ಮನೆ ಸೌಲಭ್ಯ ಮಾಡಬೇಕೆಂದು ನೋವು ತೊಡಿಕೊಂಡಿದ್ದರು. ಈ ವೇಳೆ ಶಾಸಕ ರಾಜುಗೌಡ ಅವರು ನೀರಿನ ಸೌಲಭ್ಯ ಹಾಗೂ ಮನೆ ನಿರ್ಮಾಣದ ಭರವಸೆ ನೀಡಿದರು. ಅದರಂತೆ ಇಂದು ಪುತ್ರನ ಜನ್ಮ ದಿನ ಇಂದು ಕೊಳವೆ ಬಾವಿ ಕೊರೆಸುವ ಜೊತೆ ಮನೆ ನಿರ್ಮಾಣಕ್ಕೆ 1.5 ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಿದ್ದಾರೆ. ಶಾಸಕ ರಾಜುಗೌಡ ಅವರ ಮಾನವೀಯ ಕಾಳಜಿಗೆ ಪರಮಣ್ಣ ಧನ್ಯವಾದಗಳು ಸಲ್ಲಿಸಿದ್ದಾರೆ.

ಕೊಟ್ಟ ಮಾತು ಈಡೇರಿಸಿದ ಶಾಸಕ ರಾಜೂಗೌಡ
ಸುರಪುರ ಮತಕ್ಷೇತ್ರದಲ್ಲಿ ಆಸ್ಪತ್ರೆ ಸಮಸ್ಯೆ ಬಹಳ ಇದೆ. ಇದನ್ನು ಅರಿತ ಶಾಸಕ ರಾಜೂಗೌಡ ಸುರಪುರ ಮತಕ್ಷೇತ್ರದ ಜನರಿಗೆ ಒಳ್ಳೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂದು ಯೋಚಿಸಿ, ಆಸ್ಪತ್ರೆಗಾಗಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಗೆ ಹೊಗಬೇಕಾಗಿದೆ. ಈಗ ಹುಣಸಗಿ ಪಟ್ಟಣದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಿಂದ ಜನರ ಬಹುದಿನಗಳ ಕನಸು ನನಸಾದಂತಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಆಸ್ಪತ್ರೆ ಕಟ್ಟಿಸ್ತಿನಿ ಹಾಗೂ ಪರಮಣ್ಣ ಪೂಜಾರಿ ಎಂಬ ವ್ಯಕ್ತಿಗೆ ಬೋರ್ ವೆಲ್, ಮನೆ ಕಟ್ಟಿಸಿ ಕೊಡುವ ಭರವಸೆಯನ್ನು ಹಿಡೇರಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

click me!