ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡ ಬೆನ್ನಲ್ಲೇ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ.. ಕೈ ಮುಖಂಡರೋರ್ವರ ಪುತ್ರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಗುಂಡ್ಲುಪೇಟೆ (ಡಿ.03): ಗುಂಡ್ಲುಪೇಟೆ ಬಿಜೆಪಿ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಹಂಗಳ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಬಿಕೆ ಬೊಮ್ಮಯ್ಯರ ಪುತ್ರ ಚಂದ್ರಶೇಖರ್, ಹಂಗಳ ಜಿಪಂ ಮಾಜಿ ಸದಸ್ಯೆ ಆರ್ ಅಂಬಿಕಾ ಪತಿ ಮಾಜಿ ಚೇರ್ಮನ್ ಎಚ್ ಕೆ ರಾಜಪ್ಪ ಬಿಜೆಪಿ ಸೇರಿದರು.
ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಶಾಸಕ ಸಿ ಎಸ್ ನಿರಂಜನ್ ಕುಮಾರ್ ನಾಯಕತ್ವ ಒಪ್ಪಿ ರವಿ ಕುಮಾರ್ ಹಾಗೂ ಎಚ್ ಕೆ ರಾಜಪ್ಪ ಕಾಂಗ್ರೆಸ್ ತ್ಯಜಿಸಿದರು.
undefined
'2023ಕ್ಕೆ ಎಚ್‌ಡಿಕೆ ರಾಜ್ಯದ ಮುಖ್ಯಮಂತ್ರಿ' ..
ಜಿಪಂ ಸದಸ್ಯ ಬಿಕೆ ಬೊಮ್ಮಯ್ಯರ ಪುತ್ರ ಚಂದ್ರ ಶೇಖರ್ ಹಾಗೂ ಮಾಜಿ ಚೇರ್ಮನ್ ಎಚ್ ಕೆ ರಾಜಪ್ಪರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಬಿಜೆಪಿ ಶಲ್ಯ ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಮುಖಂಡರು ಹಾಜರಿದ್ದರು.