ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಟ್ಟು ರಾಜ್ಯದ ಜನತೆಯ ನೆರವಿಗೆ ಧಾವಿಸಬೇಕು: ದೇಶಪಾಂಡೆ

By Kannadaprabha NewsFirst Published Sep 21, 2023, 12:00 AM IST
Highlights

ಬರದಿಂದ ರಾಜ್ಯದ ಜನತೆ ಸಂಕಷ್ಟದಲ್ಲಿದ್ದು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಟ್ಟು ರಾಜ್ಯದ ಜನತೆಯ ನೆರವಿಗೆ ಧಾವಿಸಬೇಕು. ಉದ್ಯೋಗ ಸೃಷ್ಟಿಯ ಮೂಲಕ ಕಾರ್ಮಿಕರಿಗೆ ಹಾಗೂ ಬಡವರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದ ಆರ್‌.ವಿ. ದೇಶಪಾಂಡೆ 

ಹಳಿಯಾಳ(ಸೆ.21): ರಾಜ್ಯ ಸರ್ಕಾರ ಈಗಾಗಲೇ 190 ತಾಲೂಕುಗಳನ್ನು ಬರಪೀಡಿತ ತಾಲೂಕಗಳೆಂದು ಘೋಷಿಸಿದೆ. ಹಳಿಯಾಳ ತಾಲೂಕು ಘೋಷಿಸಿದಂತೆ ಜೋಯಿಡಾ ಮತ್ತು ದಾಂಡೇಲಿ ತಾಲೂಕನ್ನು ಸಹ ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲು ಮುಖ್ಯಮಂತ್ರಿಗೆ ಆಗ್ರಹಿಸಲಾಗಿದೆ ಎಂದು ಆರ್‌.ವಿ. ದೇಶಪಾಂಡೆ ಹೇಳಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ರಾಜ್ಯದ ಜನತೆ ಸಂಕಷ್ಟದಲ್ಲಿದ್ದು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಟ್ಟು ರಾಜ್ಯದ ಜನತೆಯ ನೆರವಿಗೆ ಧಾವಿಸಬೇಕು. ಉದ್ಯೋಗ ಸೃಷ್ಟಿಯ ಮೂಲಕ ಕಾರ್ಮಿಕರಿಗೆ ಹಾಗೂ ಬಡವರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿನಿಯರು ಕೈ ಕುಯ್ದುಕೊಂಡ ಪ್ರಕರಣ: ಕೌನ್ಸಿಲಿಂಗ್‌ಗೆ ಮುಂದಾದ ಜಿಲ್ಲಾಡಳಿತ, ಶಿಕ್ಷಣ ಇಲಾಖೆ!

ವಸತಿ ಯೋಜನೆ:

ಜೋಯಿಡಾ ತಾಲೂಕಿನ ಮಿನಿವಿಧಾನ ಸೌಧದ ಎರಡನೇ ಹಂತದ ಕಾಮಗಾರಿಗೆ ₹ 150 ಲಕ್ಷ ಮಂಜೂರಾಗಿದೆ ಎಂದ ದೇಶಪಾಂಡೆ, ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತಗೊಂಡಿದ್ದ ಹಲವಾರು ವಸತಿ ಯೋಜನೆಗಳಿಗೆ ರಾಜ್ಯ ಸರ್ಕಾರ ಪರವಾನಗಿ ನೀಡಿದೆ ಎಂದು ತಿಳಿಸಿದರು.

PUBG ಗೇಮ್‌ ಎಫೆಕ್ಟ್‌?: ಒಂದೇ ರೀತಿ ಕೈ ಕುಯ್ದುಕೊಂಡ 10 ವಿದ್ಯಾರ್ಥಿನಿಯರು!

ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿನ ವಸತಿ ಯೋಜನೆಯ ಸಮಸ್ಯೆಯ ಬಗ್ಗೆ ವಸತಿ ಸಚಿವ ಜಮೀರಅಹ್ಮದ ಖಾನ್ ಅವರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿದೆ. ಈ ವೇಳೆ ತಟ್ಟಿಗೇರಾ ಗ್ರಾಪಂ ವ್ಯಾಪ್ತಿಯಲ್ಲಿ ಬ್ಲಾಕ್ ಆಗಿದ್ದ 83 ವಸತಿ ಮನೆ, ಜೋಯಿಡಾ ತಾಲೂಕಿನ ಕಲಂಬುಲಿಯಲ್ಲಿ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡ 20 ಆಶ್ರಯ ಮನೆಗಳಿಗೂ ಮಂಜೂರಾತಿ ಪತ್ರವನ್ನು ಸರ್ಕಾರ ನೀಡಿದೆ ಎಂದರು.
ಹಳಿಯಾಳ ವಿಧಾನಸಭಾ ಕ್ಷೇತ್ರ ಸಲ್ಲಿಸುವ ಬೇಡಿಕೆಗೆ ಅನುಗುಣವಾಗಿ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡುವ ಭರವಸೆಯನ್ನು ವಸತಿ ಸಚಿವರು ನೀಡಿದ್ದಾರೆಂದು ದೇಶಪಾಂಡೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಇದ್ದರು.

ಸೆ. 25ರಿಂದ ಅ. 2ರ ವರೆಗೆ ಸ್ವಚ್ಛತಾ ಅಭಿಯಾನ

ದೇಶದಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸುವ ಮೊದಲೇ ಹಳಿಯಾಳ ಕ್ಷೇತ್ರದಲ್ಲಿ ಈ ಮಾದರಿ ಸ್ವಚ್ಛತಾ ಅಭಿಯಾನವನ್ನು ಜನರ ಸಹಕಾರದಿಂದ ಆರಂಭಿಸಿದ್ದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಈ ಸ್ವಚ್ಛತಾ ಅಭಿಯಾನವನ್ನು ಇಡಿ ಜಿಲ್ಲೆಯಲ್ಲಿಯೇ ಹಮ್ಮಿಕೊಳ್ಳಲಾಗುತ್ತಿತ್ತು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು. ಮಹಾತ್ಮ ಗಾಂಧೀಜಿ ಜಯಂತಿ ಪೂರ್ವಭಾವಿ ಸಿದ್ಧತೆಯಾಗಿ ಕ್ಷೇತ್ರದಲ್ಲಿ ಹಳ್ಳಿಯಿಂದ ಪಟ್ಟಣ ಮತ್ತು ನಗರ ಮಟ್ಟದ ವರೆಗೂ ಸೆ. 25ರಿಂದ ಅ.2ರ ವರೆಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಸ್ವಚ್ಛತಾ ಅಭಿಯಾನದಲ್ಲಿ ಎಲ್ಲ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು, ಯುವಕ ಮಂಡಳಗಳು, ಮಹಿಳಾ ಸಂಘಗಳು, ಪತ್ರಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

click me!