Hijab Row: 'ಜನರ ಧಾರ್ಮಿಕ ಭಾವನೆಗಳ ಜೊತೆ ಬಿಜೆಪಿ ಚೆಲ್ಲಾಟ'

By Kannadaprabha News  |  First Published Feb 23, 2022, 10:57 AM IST

*  ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಜು ಆಲಗೂರ ಬಿಜೆಪಿ ಸರ್ಕಾರದ ವಿರುದ್ಧ ಆರೋಪ
*  ಹಿಜಾಬ್‌ಗೆ ಅಡ್ಡಿಪಡಿಸುವುದು ಸರಿಯಲ್ಲ
*  ಭಾರತ ಜಾತ್ಯತೀತ ರಾಷ್ಟ್ರ


ವಿಜಯಪುರ(ಫೆ.23):  ಬಿಜೆಪಿ ಸರ್ಕಾರ(BJP Government) ಹಿಜಾಬ್‌ನಂತಹ ಜನರ ಧಾರ್ಮಿಕ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ಇದಕ್ಕೆ ಕಡಿವಾಣ ಬೀಳದಿದ್ದರೆ ದೇಶದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಬಿಜೆಪಿ ಇಂತಹ ವಿವಾದಗಳನ್ನು ಕೈ ಬಿಡಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಜು ಆಲಗೂರ ಹೇಳಿದರು.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ(India) ಜಾತ್ಯತೀತ ರಾಷ್ಟ್ರ(Secular Country). ಏಕತೆಯಲ್ಲಿ ವೈವಿಧ್ಯತೆ ಹೊಂದಿರುವ ದೇಶ. ಹೀಗಾಗಿ ದೇಶದಲ್ಲಿ ಎಲ್ಲ ಧರ್ಮಗಳ ಜನತೆ ತಮ್ಮದೆಯಾದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ ತೋರುವುದು ಸಂವಿಧಾನದ(Constitution) ಆಶಯವಾಗಿದೆ. ಆದ್ದರಿಂದ ಸಂವಿಧಾನದಲ್ಲಿ ಎಲ್ಲ ಧರ್ಮದ ಜನಾಂಗ ತಮ್ಮ ಸಂಪ್ರದಾಯಗಳನ್ನು ಆಚರಿಸಲು ಮುಕ್ತ ಅವಕಾಶವಿದೆ ಎಂದರು.

Latest Videos

undefined

Hijab Row : ಹಿಜಾಬ್ ಧಾರಣೆ ಕಡ್ಡಾಯ ಎಂದಾದರೆ  ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಅಲ್ಲವೇ?

ಹಿಜಾಬ್‌ಗೆ ಅಡ್ಡಿಪಡಿಸುವುದು ಸರಿಯಲ್ಲ:

ಹಿಜಾಬ್‌(Hijab) ಇವತ್ತು ನಿನ್ನೆಯದಲ್ಲ. ಅದು ಬಹಳ ಪುರಾತನ ಸಂಪ್ರದಾಯ. ಮುಸ್ಲಿಂ(Muslim) ಜನಾಂಗ ಪುರಾತನ ಕಾಲದಿಂದಲೂ ಹಿಜಾಬ್‌ ಧರಿಸಿಕೊಂಡು ಬಂದಿದ್ದಾರೆ. ಪಂಜಾಬ್‌ನಲ್ಲಿ ಪಂಜಾಬಿಗಳ ಉಡುಪು ಬೇರೆಯಾಗಿದೆ. ರಾಜಸ್ಥಾನಿಗಳ ಉಡುಪು ಬೇರೆಯಾಗಿದೆ. ಆಯಾ ರಾಜ್ಯದಲ್ಲಿ ಆಯಾ ಧರ್ಮದ ಜನರು ತಮ್ಮ ಸಂಪ್ರದಾಯ ಆಚರಿಸಿಕೊಂಡು ಇದುವರೆಗೆ ಶಾಂತಿ, ಸೌಹಾರ್ದತೆಯಿಂದ ಎಲ್ಲ ಧರ್ಮದವರ ಜೊತೆಗೆ ಸಹೋದರತೆಯಿಂದ ಜೀವಿಸುತ್ತಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ಮೂಗು ತೂರಿಸುವ ಕೆಲಸವಾಗಬಾರದು. ಅದಕ್ಕೆ ಹಿಜಾಬ್‌ಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ವಿಷಯಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುತ್ತಿದೆ. ಮಾನವೀಯ ದೃಷ್ಟಿಯಿಂದ ನೋಡುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮಾನವೀಯ ಮೌಲ್ಯಗಳ ಪುನರ್‌ ಸ್ಥಾಪನೆಯಾಗಬೇಕಾದ ಅಗತ್ಯ ಹೆಚ್ಚಿದೆ ಎಂದರು.

ಕಾಂಗ್ರೆಸ್‌(Congress) ಪಕ್ಷ ದೀರ್ಘ ಕಾಲದವರೆಗೆ ದೇಶದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದಿತ್ತು. ಆಗ ಕಾಂಗ್ರೆಸ್‌ ಪಕ್ಷ ಎಂದೂ ಧರ್ಮದ ದೃಷ್ಟಿಕೋನದಿಂದ ಜನರನ್ನು ನೋಡಿಲ್ಲ. ಎಲ್ಲರೂ ಒಂದೇ ಎಂಬ ಉನ್ನತ ವಿಚಾರಧಾರೆಯಿಂದ ಎಲ್ಲರನ್ನು ಸಮನಾಗಿ ಕಂಡಿದೆ. ಯಾವುದೇ ಜಾತಿ, ಮತ, ಪಂಥಗಳನ್ನು ಎಣಿಸಿಲ್ಲ. ಎಲ್ಲರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತ ಬಂದಿದೆ ಎಂದು ತಿಳಿಸಿದರು.

ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಹಿಂದು(Hindu), ಮುಸ್ಲಿಂ, ಕ್ರಿಶ್ಚಿಯನ್‌(Christian) ಮುಂತಾದ ಜಾತಿ ದೃಷ್ಟಿಕೋನದಿಂದ ನೋಡಬಾರದು. ಎಲ್ಲರನ್ನೂ ವಿದ್ಯಾರ್ಥಿಗಳು(Students) ಎಂದು ಸಮಾನ ಭಾವನೆಯಿಂದ ಕಾಣಬೇಕು ಎಂದು ಹೇಳಿದರು.

ಹಿಜಾಬ್‌ ವಿಷಯದಲ್ಲಿ ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹಿಜಾಬ್‌ ಬಗ್ಗೆ ಕಾಂಗ್ರೆಸ್‌ ಮುಖಂಡರಲ್ಲಿ ಒಟ್ಟಾಭಿಪ್ರಾಯ ಇದೆ. ಅನಗತ್ಯವಾಗಿ ಕಾಂಗ್ರೆಸ್‌ ವಿರುದ್ಧ ಅಪಪ್ರಚಾರ ಮಾಡಲಾಗುತ್ತದೆ. ಇದು ಕಪೋಲಕಲ್ಪಿತ ಎಂದರು. ಹಿಜಾಬ್‌ ವಿವಾದ ಈಗಾಗಲೇ ಕೋರ್ಟ್‌ ಅಂಗಳದಲ್ಲಿದೆ. ವಿಚಾರಣೆ ನಡೆಯುತ್ತಿದೆ. ಕೋರ್ಟ್‌(Court) ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದರು.

Hijab Row: ಏಕರೂಪ ಸಂಹಿತೆ ಬಗ್ಗೆ ಅಂಬೇಡ್ಕರ್‌ ಹೇಳಿದ್ದೇನು?

ಈ ವೇಶೆ ಅಬ್ದುಲ್‌ಹಮೀದ ಮುಶ್ರೀಫ್‌, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಗಂಗಾಧರ ಸಂಬಣ್ಣಿ, ಸುನೀಲ ಉಕ್ಕಲಿ, ಜಮೀರಅಹ್ಮದ ಬಕ್ಷಿ, ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ, ತಮ್ಮಣ್ಣ ಮೇಲಿನಕೇರಿ, ಶಹಜಾನ ಮುಲ್ಲಾ, ಇಲಿಯಾಸ ಬಗಲಿ, ಹಾಜಿಲಾಲ ದಳವಾಯಿ, ಸುಭಾಷ ಕಾಲೇಬಾಗ, ಮಲ್ಲಯ್ಯ ಬನಸೋಡೆ, ಎಂ.ಜಿ. ಯಂಕಂಚಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಹರ್ಷ ಹತ್ಯೆ ಮಾಡಿದ ವ್ಯಕ್ತಿಗೆ ಗಲ್ಲು ಶಿಕ್ಷೆಯಾಗಲಿ

ಹಿಂದು ಸಂಘಟನೆ ಕಾರ್ಯಕರ್ತ ಹರ್ಷ ಅವರ ಹತ್ಯೆ(Harsha Murder) ಘಟನೆಯನ್ನು ತೀವ್ರವಾಗಿ ಖಂಡಿಸಿ, ಹರ್ಷ ಅವರನ್ನು ಹತ್ಯೆ ಮಾಡಿದವರು ಬಿಜೆಪಿಯವರಿರಲಿ, ಕಾಂಗ್ರೆಸ್ಸಿನವರಿರಲಿ ಬೇರೆ ಯಾವುದೇ ಪಕ್ಷದವರಿರಲಿ. ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಹರ್ಷ ಹತ್ಯೆ ನಾಗರಿಕ ಸಮಾಜಕ್ಕೆ ಕಳಂಕವಾಗಿದೆ. ಇಂತಹ ಘಟನೆಯನ್ನು ಪ್ರತಿಯೊಬ್ಬರು ಖಂಡಿಸಲೇಬೇಕು ಎಂದರು.

ಸಂವಿಧಾನ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ ವಿರುದ್ಧ ಅವಹೇಳನಕಾರಿಯಾಗಿ ನಡೆದುಕೊಂಡಿರುವ ರಾಯಚೂರ ಜಿಲ್ಲಾ ನ್ಯಾಯಾಧೀಶರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಬದಲು ಈ ನ್ಯಾಯಾಧೀಶರನ್ನು ಸೇವೆಯಿಂದಲೇ ವಜಾ ಮಾಡಬೇಕು ಎಂದು ಆಲಗೂರ ಹೇಳಿದರು.
 

click me!